ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿರಿನುಡಿ 'ಕನ್ನಡ ಭಾಷಾ ಸಂಶೋಧನೆಗೆ ಒತ್ತು

By Staff
|
Google Oneindia Kannada News

ಬೆಂಗಳೂರು, ಆ . 27 : ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ದೊರೆತ ನಂತರ ಭಾಷೆಗೆ ಸಂಬಂಧಿಸಿದ ಸಂಶೋಧನೆಗೆ, ಅಧ್ಯಯನ ಕುರಿತಂತೆ ಹೆಚ್ಚಿನ ಕೆಲಸ ಆಗಬೇಕಾಗಿದೆ. ತಮಿಳು ಭಾಷೆಯಹಾದಿಯಲ್ಲಿ ಕನ್ನಡದ ಕೆಲಸವೂ ನಡೆಯಬೇಕು. ಅಧಿಕಾರಿಗಳು ವಿದ್ಯಾರ್ಥಿಗಳನ್ನು ಅಧ್ಯಯನಕ್ಕಾಗಿ ತಮಿಳುನಾಡಿಗೆ ಕಳಿಸುವ ಕೆಲಸ ಆಗಬೇಕೆಂದು ಸಂಶೋಧಕ ಡಾ ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರು ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ "ಕನ್ನಡ - ಶಾಸ್ತ್ರೀಯ ಸ್ಥಾನ- ಸಂಶೋಧನಾ ವಿಧಾನ" ಕಾರ್ಯಕ್ರಮ ಉದ್ಫಾಟಿಸಿ ಮಾತನಾಡುತ್ತಿದ್ದರು. ಹಸ್ತ ಪ್ರತಿ ಸಂಗ್ರಹ ಕಾರ್ಯ, ಮಾಹಿತಿ ನಕಲು ಅಂತರ್ಜಾಲದಲ್ಲಿ ದೊರಕುವ ವ್ಯವಸ್ಥೆ ಆಗಬೇಕು. ಹೆಚ್ಚು ಅನುದಾನ ಸಿಬ್ಬಂದಿ ಏಕಕಾಲದಲ್ಲಿ ಹಲವು ಯೋಜನೆಗಳು ಜಾರಿಗೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ತಮ್ಮ ಅನುಪಸ್ಥಿತಿಯಲ್ಲಿ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಅವರು ತಮ್ಮ ಸಂದೇಶದಲ್ಲಿ ಕ್ಲಾಸಿಕಲ್ ಲ್ಯಾಗ್‌ವೇಜ್ ಗೆ ಸಂವಾದಿಯಾಗಿ ಕನ್ನಡದಲ್ಲಿ ಶಾಸ್ತ್ರೀಯ ಭಾಷೆ ಎನ್ನುವುದು ಸರಿಯಾದ ಬಳಕೆಯಲ್ಲ. "ಸಿರಿನುಡಿ" ಎಂದು ಬಳಸುವ ಮೂಲಕ ಕನ್ನಡ ಭಾಷೆಯ ಸಮೃದ್ಧತೆ, ಶ್ರೀಮಂತಿಕೆಯನ್ನು ಸೂಚಿಸುವ ಸಾಧ್ಯತೆಯಿದೆ ಎಂದಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಬುದ್ಧಿಜೀವಿಗಳ, ಭಾಷಾ ತಜ್ಜರ, ಸಂಶೋಧಕರ ಸಹಕಾರ ಕ್ರಿಯಾಶೀಲತೆ ಅಗತ್ಯ. ಈ ಸಂಬಂಧ ಹೆಚ್ಚು ಹೆಚ್ಚು ನೆರವನ್ನು ಪಡೆಯಲು ನಮ್ಮ ಹಕ್ಕೋತ್ತಾಯವನ್ನು ಕೇಂದ್ರಕ್ಕೆ ಸಲ್ಲಿಸಬೇಕಾಗಿದೆ ಎಂದರು.

ಡಾ ಎಂ. ಚಿದಾನಂದಮೂರ್ತಿ, ಡಾ ಎನ್. ಎಸ್. ತಾರಾನಾಥ್, ಡಾ ರೇವಣ್ಣ ಒಡೆಯರ್, ಡಾ. ಕೆ. ರಾಮಸ್ವಾಮಿ, ಪ್ರೊ ಸಂಗಮೇಶ್ ಸವದತ್ತಿ ಮಠ್,ಡಾ ಪುರುಷೋತ್ತಮ ಬಿಳಿಮಲೆ, ಪ್ರೊ ಲಿಂಗದೇವರು ಹಳೆಮನೆ, ಡಾ ಪಾದೇಕಲ್ ವಿಷ್ಣುಭಟ್, ಡಾ ರಂಗಾರೆಡ್ಡಿ ಕೋಡಿರಾಂಪುರ ವಿವಿಧ ಗೋಷ್ಠಿಗಳಲ್ಲಿ ವಿಷಯ ಮಂಡನೆ, ನಿರ್ವಹಣೆ ನೆರವೇರಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಬಿ. ಸುರೇಶ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X