ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಟಿಸ್ ತೆಕ್ಕೆಗೆ ವೋಕ್ ಹಾರ್ಟ್ ಆಸ್ಪತ್ರೆ

By Staff
|
Google Oneindia Kannada News

Fortis, Indias biggest healthcare provider
ಮುಂಬಯಿ, ಆ. 25 : ಭಾರತದ ಹೆಸರಾಂತ ಆಸ್ಪತ್ರೆಗಳ ಉದ್ಯಮ ಸಂಸ್ಥೆಯಾದ ಫೋರ್ಟಿಸ್, ವೋಕ್ ಹಾರ್ಟ್ ಆಸ್ಪತ್ರೆಯ ಸಮೂಹವನ್ನು ಕೊಂಡುಕೊಂಡಿದೆ. ವೋಕ್ ಹಾರ್ಟಿನ ಒಟ್ಟು 10 ಆಸ್ಪತ್ರೆಗಳು 909 ಕೋಟಿ ರೂಪಾಯಿಗಳಿಗೆ ಮಾರಾಟವಾಗಿವೆ. 2009ರ ಅಂತ್ಯದ ವೇಳೆಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಫೋರ್ಟಿಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲಗಳ ಪ್ರಕಾರ, ಈ ಖರೀದಿಯೊಂದಿಗೆ ಫೋರ್ಟಿಸ್ ಕಂಪನಿಯ ಒಟ್ಟು ಹಾಸಿಗೆಗಳ ಬಲ 5,180ಕ್ಕೆ ಏರಿತು. ಪ್ರಸಕ್ತ, ಫೋರ್ಟಿಸ್ ಕಂಪನಿಯು ಭಾರತದ ನಾನಾ ಕಡೆ 28 ಆಸ್ಪತ್ರೆಗಳನ್ನು ಹೊಂದಿದೆ. 2005ರಲ್ಲಿ ಫೋರ್ಟಿಸ್ 585 ಕೋಟಿ ರೂಪಾಯಿಗಳನ್ನು ಕೊಟ್ಟು ಎಸ್ಕಾರ್ಟ್ಸ್ ಆಸ್ಪತ್ರೆಗಳನ್ನು ಕೊಂಡುಕೊಂಡಿತ್ತು.

ಫೋರ್ಟಿಸ್, ಎಸ್ಕಾರ್ಟ್ಸ್ ಮತ್ತು ಇದೀಗ ವೋಕ್ ಹಾರ್ಟ್ ಒಂದೇ ಆಡಳಿತಕ್ಕೆ ಬರುವುದರೊಂದಿಗೆ ಭಾರತೀಯ ಆರೋಗ್ಯ ಉದ್ಯಮದಲ್ಲಿ ಹೊಸ ಶಕೆ ಆರಂಭವಾಗಿದೆ ಎನ್ನುತ್ತಾರೆ ಫೋರ್ಟಿಸ್ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿಯ ಆಡಳಿತ ನಿರ್ದೇಶಕ ಶಿವಿಂದರ್ ಮೋಹನ್ ಸಿಂಗ್.

ಹೊಸ ಖರೀದಿ ಒಪ್ಪಂದದ ಪ್ರಕಾರ, ವೋಕ್ ಹಾರ್ಟಿನಲ್ಲಿ ಸೇವಾನಿರತವಾಗಿರುವ ಎಂಟು ಮತ್ತು ನಿರ್ಮಾಣ ಹಂತದಲ್ಲಿರುವ ಎರಡು ಆಸ್ಪತ್ರೆಗಳು ಫೋರ್ಟಿಸ್ ತೆಕ್ಕೆಗೆ ಬೀಳುತ್ತವೆ. ಫೋರ್ಟಿಸ್ ನ ಆಸ್ಪತ್ರೆ ಹಾಸಿಗೆ ಬಲಕ್ಕೆ ಈ ಖರೀದಿಯಿಂದ 1,902 ಹಾಸಿಗೆಗಳು ಸೇರ್ಪಡೆಯಾಗುತ್ತವೆ. 909 ಕೋಟಿರೂಪಾಯಿಗಳಿಗೆ ಮಾರಾಟವಾಗಿರುವ ಹತ್ತು ಆಸ್ಪತ್ರೆಗಳಲ್ಲಿ ಬೆಂಗಳೂರಿನ 5, ಮುಂಬಯಿಯ 2 ಮತ್ತು ಕೋಲ್ಕತ್ತದ 3 ಆಸ್ಪತ್ರೆಗಳು ಸೇರಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X