ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಭಾರಿ ವರ್ಷಧಾರೆ : 1 ಸಾವು

By Staff
|
Google Oneindia Kannada News

ಬೆಂಗಳೂರು, ಆ. 17 : ಭಾನುವಾರ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧ ಭಾಗಗಳ ಬಡಾವಣೆಗಳು ಜಲಾವೃತವಾಗಿವೆ. ಮೈಸೂರು ರಸ್ತೆಯಲ್ಲಿ ನಾಯಂಡಹಳ್ಳಿ ಕೆರೆ ಕೊಚ್ಚಿಹೋಗಿದ್ದರಿಂದ ಸುತ್ತಮುತ್ತಲಿನೆ ಪ್ರದೇಶಗಳ ಮನೆಗಳಲ್ಲಿ ನೀರು ತುಂಬಿಹೋಗಿದ್ದು, ಜನರ ಜೀವನ ದುರ್ಬರವಾಗಿದೆ. ಹೀಗಾಗಿ ಮೈಸೂರು ರಸ್ತೆಯಲ್ಲಿ ಕೆಲ ಕಾಲ ರಸ್ತೆ ಸಂಚಾರ ತೀವ್ರ ಅಸ್ತವ್ಯವ್ತಗೊಂಡಿದ್ದು, ಕೆಂಗೇರಿ ಬಳಿ ಒಬ್ಬ ವ್ಯಕ್ತಿ ಸಾವಿಗೀಡಾರುವ ಬಗ್ಗೆ ವರದಿಯಾಗಿದೆ

ಸಂಚಾರ ಅಸ್ತವ್ಯಸ್ತಗೊಂಡಿದ್ದ ಗಮನಿಸಿದ ಬಿಬಿಎಂಪಿ ಅಧಿಕಾರಿಗಳು ರಸ್ತೆ ಸಂಚಾರ ಮಾತ್ರ ಸುಗಮಗೊಳಿಸಿದ್ದಾರೆ. ಆದರೆ, ಸುತ್ತಮುತ್ತಲಿನ ಮನೆಗಳಲ್ಲಿ ಕೆರೆಯ ನೀರು ಕೊಚ್ಚಿ ಹೋಗಿ ಜಲಾವೃತಗೊಂಡಿದ್ದರು ಅಧಿಕಾರಿಗಳು ಕ್ಯಾರೇ ಎನ್ನದಿರುವುದು ಅಲ್ಲಿನ ನಿವಾಸಿಗಳ ಅಕ್ರೋಶಕ್ಕೆ ಕಾರಣವಾಗಿದೆ. ರಾಜರಾಜೇಶ್ವರಿ ನಗರ ನಡೆದಾಡಲು ಕೂಡಾ ಕಷ್ಟದಾಯಕವಾಗಿದೆ. ಬಿಬಿಎಂಪಿ ಅಧಿಕಾರಿ ಈ ಪ್ರದೇಶದಲ್ಲಿ ರಾಜಕಾಲುವೆ ಅಗತ್ಯವಿದೆ ಮನವರಿಕೆ ಮಾಡಿಕೊಡಲಾಗಿದೆ. ರಾಜಕಾಲುವೆ ಕಾಮಗಾರಿ ಆರಂಭವಾಗಿದ್ದರೂ ಭಾರಿ ನಿಧಾನಗತಿ ಸಾಗಿದೆ. ಬಿಬಿಎಂಪಿ ಅಧಿಕಾರಿಗಳ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರ ಅಳಲಾಗಿದೆ.

ಮಳೆಯ ಹೊಡೆತಕ್ಕೆ ಚಾಮರಾಜಪೇಟೆಯಲ್ಲಿರುವ ಕಿಮ್ಸ್ ಆಸ್ಪತ್ರೆಯ ಗೋಡೆ ಕುಸಿತದಿದ್ದರಿಂದ 10 ಅಟೋಗಳು ಮತ್ತು ಎರಡು ಕಾರುಗಳು ಜಖಂಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಗೋಡೆ ಕುಸಿತಕ್ಕೆ ಬಿಬಿಎಂಪಿ ಅಧಿಕಾರಿಗಳಉ ಕಿಮ್ಸ್ ಆಸ್ಪತ್ರೆಗೆ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X