ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌಲಾನಾ ಮಸೂದ್ ಅಜರ್ ಉಗ್ರನಲ್ಲ: ಚೀನಾ

By Staff
|
Google Oneindia Kannada News

ನವದೆಹಲಿ, ಆ.16: ಪಾಕಿಸ್ತಾನ ಮೂಲದ ಜೈಷೆ ಮೊಹಮದ್ ಸಂಘಟನೆಯ ನಾಯಕ ಮಸೂದ್ ಅಜರ್‌ನನ್ನು ಉಗ್ರಗಾಮಿ ಎಂದು ಒಪ್ಪಿಕೊಳ್ಳಬೇಕೆಂಬ ಭಾರತದ ಮನವಿಯನ್ನು ತಿರಸ್ಕರಿಸಿರುವ ಚೀನಾ, ಪಾಕಿಸ್ತಾನದ ಮೇಲಿನ ತನ್ನ ಒಲವನ್ನು ಬಹಿರಂಗವಾಗಿಯೇ ತೋರಿಸಿದೆ.

ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿ, ಉಗ್ರಗಾಮಿ ಎಂದು ಪರಿಗಣಿಸಿ ಬಹಿಷ್ಕಾರ ಹೇರಬೇಕೆಂಬುದು ಭಾರತದ ನಿಲುವಾ
ಗಿತ್ತು. ಇದರಿಂದ ಆತನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು ಭಾರತಕ್ಕೆ ಸುಲಭವಾಗುತ್ತಿತ್ತು. ಅಜರ್ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗವಹಿಸಿದ್ದಾನೆ ಎಂಬುದರ ಬಗ್ಗೆ ಸಮರ್ಪಕ ಮಾಹಿತಿಗಳಿಲ್ಲ ಎಂದಿದ್ದ ಭದ್ರತಾ ಮಂಡಳಿಯ ಪ್ರಮುಖ ರಾಷ್ಟ್ರಗಳಾದ ಬ್ರಿಟನ್ ಹಾಗೂ ಚೀನಾಗಳು ನಿಷೇಧಕ್ಕೆ ತಗಾದೆ ತೆಗೆದವು. ಕ್ರಮೇಣ ಬ್ರಿಟನ್‌ನ ಮನವೊಲಿಸಲು ಭಾರತ ಸಫಲವಾಯಿತು.

ತನ್ನ ನಿರ್ಣಯ ವನ್ನು ಕಾಯ್ದಿಟ್ಟಿದ್ದ ಚೀನಾ, ಕಂದಹಾರ್ ವಿಮಾನ ಅಪಹರಣದಲ್ಲಿ ಒತ್ತೆಯಾಳುಗಳ ಬದಲಿಗೆ ಬಿಡುಗಡೆಯಾದ ಮಸೂದ್ ಅಜರ್‌ನನ್ನು ಉಗ್ರಗಾಮಿ ಎಂದು ಒಪ್ಪಿಕೊಳ್ಳಲು ನಿರಾಕರಿಸಿದೆ. ಅಜರ್‌ನನ್ನು ಉಗ್ರನೆಂದು ಸಾರಲು ಕೆಲ ತಾಂತ್ರಿಕ' ಕಾರಣಗಳು ಅಡ್ಡ ಬರುತ್ತವೆ. ಹೀಗಾಗಿ ರಾಜಕೀಯವಾಗಿ ಭಾರತ ಎಷ್ಟೇ ಮಾಹಿತಿಗಳನ್ನು ಒದಗಿಸಿ ದರೂ ನಮ್ಮ ಮನವೊಲಿಕೆ ಸಾಧ್ಯವಾಗದು' ಎಂದು ಚೀನಾ ಒಗಟಾಗಿ ಮಾತನಾಡಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆ ಗಾರ ಎಮ್. ಕೆ. ನಾರಾಯಣನ್ ಹಾಗೂ ಚೀನಾದ ಸ್ಟೇಟ್ ಕೌನ್ಸಿಲರ್ ಡೈ ಬಿಂಗೊ ನಡುವೆ ಈ ನಿಟ್ಟಿನಲ್ಲಿ ಮಾತುಕತೆ ನಡೆದಿತ್ತು.

ಕ್ಸಿನ್ಜಿಯಾಂಗ್‌ನಲ್ಲಿ ನಡೆದ ದಂಗೆಯ ಬಳಿಕ ಚೀನಾಕ್ಕೆ ಇಸ್ಲಾಮಿಕ್ ಉಗ್ರವಾದದ ಬಿಸಿ ಮುಟ್ಟಿರುವುದು ಅದರ ನಿಲುವಿನ ಮೇಲೆ ಪರಿಣಾಮ ಬೀರಬಹುದು ಎಂಬ ನಿರೀಕ್ಷೆ ಕಮರಿದೆ. ಮಸೂದ್ ಅಜರ್‌ಗೆ ಆಶ್ರಯ ನೀಡಿರುವ ಪಾಕಿಸ್ತಾನದ ಹಿತಾ ಸಕ್ತಿ ಕಾಯುವಲ್ಲಿ ಚೀನಾ ಹೆಜ್ಜೆ ಇಟ್ಟಿದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X