ರಾಜ್ಯದಲ್ಲಿ ಎಚ್1ಎನ್1ಗೆ ಮತ್ತೆರಡು ಬಲಿ

Swine flu claims 2 more lives in Bengaluru
ಬೆಂಗಳೂರು, ಆ. 15 : ಎಚ್ 1ಎನ್1 ಗೆ ನಗರದ ಬಿಟಿಎಂಲೇಔಟ್ ನಿವಾಸಿ ರೂಪಆನಂದ ಸಾವನ್ನಪ್ಪಿದ ಬೆನ್ನಲ್ಲೇ ಮತ್ತೆ ಇಬ್ಬರು ಈ ಮಾರಿಗೆ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಎಲ್ಲವೂ ಸರಿಯಾಗಿದೆ ಎಂದಿದ್ದ ಸರಕಾರ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಮತ್ತೆ ಕಾಣಿಯಾಗಿದ್ದಾರೆ.

ನಾಗರಬಾವಿ ನಿವಾಸಿ ಶಿವಣ್ಣ (56) ಎಚ್1ಎನ್1 ಸೋಂಕಿಗೆ ಬಲಿಯಾಗಿರುವ ಎರಡನೇ ವ್ಯಕ್ತಿಯಾಗಿದ್ದಾರೆ. ಮಧುಮೇಹ ಮತ್ತು ಹೃದಯರೋಗದಿಂದ ಬಳಲುತ್ತಿದ್ದ ಶಿವಣ್ಣ ಅವರನ್ನು ಕಳೆದ 12 ರಂದು ರಾಜಾಜಿನಗರದ ವೊಕ್ಹಾರ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಉಸಿರಾಟದ ತೊಂದರೆ ತೀವ್ರಗೊಂಡ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ರೋಗಿಯ ಗಂಟಲಿನಲ್ಲಿರುವ ದ್ರವ್ಯ ಸಂಗ್ರಹಿಸಿ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ರೋಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶುಕ್ರವಾರ ಸಂಜೆ ನಿಮ್ಹಾನ್ಸ್ ಆಸ್ಪತ್ರೆಯಿಂದ ವರದಿ ಬಂದಿದ್ದು, ಎಚ್1ಎನ್1 ಸೋಂಕಿನಿಂದಲೇ ಶಿವಣ್ಣ ಸಾವನ್ನಪ್ಪಿದ್ದಾರೆ ಎನ್ನುವುದು ದೃಢಪಟ್ಟಿದೆ.

ಅಲ್ಲದೇ ನಗರದ ಬೊಮ್ಮಸಂದ್ರದ ಮಂಜುನಾಥ ಎಂಬ 28 ವರ್ಷದ ವ್ಯಕ್ತಿ ಎಚ್1 ಎನ್ 1 ಸೋಂಕಿನಿಂದ ಮೃತಪಟ್ಟಿದ್ದಾರೆ. ಜ್ವರ, ಕೆಮ್ಮು, ನೆಗಡಿ ಹಾಗೂ ವಾತಿ ಬೇದಿಯಿಂದ ಗುರುವಾರ ವೈಟ್ ಫೀಲ್ಡ್ ನಲ್ಲಿರುವ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ಸಂಜೆ ಮಂಜುನಾಥ ಮೃತಪಟಿದ್ದಾರೆ. ಅವರ ರಕ್ತದ ಮಾದರಿಯನ್ನು ನಿಮ್ಹಾನ್ಸ್ ಕಳುಹಿಸಲಾಗಿದ್ದು, ಎಚ್ 1ಎನ್ 1 ಸೋಂಕಿನಿಂದಲೇ ಸಾವನ್ನಪ್ಪಿದರುವುದಾಗಿ ಸ್ಪಷ್ಟವಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+