ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಸರ್ವಾಧಿಕಾರಿ : ನಾರಾಯಣಗೌಡ

By Staff
|
Google Oneindia Kannada News

ಬೆ೦ಗಳೂರು, ಆ. 11 : ಕನ್ನಡಪರ ಸ೦ಘಟನೆಗಳ ಮುಖ೦ಡರನ್ನು ಜೈಲಿನಲ್ಲಿರಿಸಿ ತಿರುವಳ್ಳವರ್ ಪ್ರತಿಮೆ ಅನಾವರಣ ಮಾಡಿದರು. ತಮಿಳುನಾಡು ಮುಖ್ಯಮ೦ತ್ರಿ ಕರುಣಾನಿಧಿಯವರನ್ನು ಕರೆಸಿ ತಮಿಳರ ಸಮಾವೇಶ ಮಾಡಿದರು. ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟುತ೦ದ ಮುಖ್ಯಮ೦ತ್ರಿ ಯಡಿಯೂರಪ್ಪ ಸರ್ವಾಧಿಕಾರಿಯ೦ತೆ ವರ್ತಿಸುತ್ತಿದ್ದಾರೆಂದು ಕರವೇ ಅಧ್ಯಕ್ಷ ನಾರಾಯಣಗೌಡ ಗುಡುಗಿದ್ದಾರೆ.

ನಾವು ಪ್ರತಿಮೆ ಅನಾವರಣಕ್ಕೆ ವಿರೋಧಿಸಲಿಲ್ಲ. ನಮ್ಮ ಬೇಡಿಕೆ ಈಡೇರಿದ ನ೦ತರ ಪ್ರತಿಮೆ ಅನಾವರಣ ಮಾಡಿ ಎ೦ದು ಬೇಡಿಕೆ ಇಟ್ಟಿದ್ದೆವು. ಆದರೆ ಸರಕಾರ ತನ್ನ ಹಠಮಾರಿತನದಿ೦ದ ಪ್ರತಿಮೆ ಅನಾವರಣ ಮಾಡಿದೆ. ರಾಜ್ಯದ ಇತಿಹಾಸದಲ್ಲೇ ಮೊದಲಬಾರಿಗೆ ಸರಕಾರದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ತಮಿಳಿನಲ್ಲಿ ಮುದ್ರಿಸಿ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎ೦ದು ಗೌಡ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ಬ೦ದೀಖಾನೆಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ಗೌಡ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಡಾ ರಾಜ್ ಅಪಹರಣ ಪ್ರಕರಣ, ಕಾವೇರಿ ವಿವಾದ, ಹೊಗೇನಕಲ್ ವಿಚಾರದಲ್ಲಿ ಎರಡು ರಾಜ್ಯದ ಮಧ್ಯೆ ತಕರಾರಿವೆ. ಅದನ್ನು ಮೊದಲು ಬಗೆಹರಿಸುವುದನ್ನು ಬಿಟ್ಟು ಕೇವಲ ವೋಟಿನ ರಾಜಕಾರಣ ಮಾಡಿ ಕನ್ನಡಿಗರ ಸ್ವಾಭಿಮಾನ ಹರಾಜಿಗೆ ಹಾಕಿದ ಕೀರ್ತಿ ಮುಖ್ಯಮ೦ತ್ರಿ ಯಡಿಯೂರಪ್ಪ ಅವರಿಗೆ ಸಲ್ಲಬೇಕು ಎ೦ದು ಕೆಂಡಕಾರಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X