ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಪ್ರಥಮ ಗ್ರಾಮೀಣ ಹೊರಗುತ್ತಿಗೆ ಕೇಂದ್ರ

By Staff
|
Google Oneindia Kannada News

Karnataka to get new IT policy
ಮೈಸೂರು, ಆ.8: ಗ್ರಾಮೀಣ ಹೊರಗುತ್ತಿಗೆ ಸೇವೆಗಳ ಕೇಂದ್ರದ ಮೂಲಕ ಐದು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಠಿಸಿ ಗ್ರಾಮೀಣರು ನಗರಕ್ಕೆ ವಲಸೆ ಹೋಗುವುದನ್ನು ತಡೆಗಟ್ಟಿ ಗ್ರಾಮೀಣ ಪ್ರದೇಶದಲ್ಲೇ ಉದ್ಯೋಗ ನೀಡಲಾಗುವುದು ಎಂದು ರಾಜ್ಯ ವಾರ್ತಾ, ಅಬಕಾರಿ ಹಾಗೂ ಐಟಿ, ಬಿಟಿ ಖಾತೆ ಸಚಿವ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು ತಿಳಿಸಿದರು.

ಅವರು ಇಂದು ಶ್ರೀರಂಗಪಟ್ಟಣ ಸಮೀಪದ ಬಾಬುರಾಯನಕೊಪ್ಪಲಿನಲ್ಲಿ ರಾಜ್ಯ ಸರ್ಕಾರದ ನೆರವಿನೊಡನೆ ಆರಂಭಿಸಿರುವ ದೇಶದ ಪ್ರಥಮ ಗ್ರಾಮೀಣ ಹೊರಗುತ್ತಿಗೆ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಜ್ಯ ಸರ್ಕಾರವು ಪ್ರಸಕ್ತ ವರ್ಷ ಒಂದುನೂರು ಗ್ರಾಮೀಣ ಹೊರಗುತ್ತಿಗೆ ಸೇವಾ ಕೇಂದ್ರ ಆರಂಭಿಸಲು ನಲವತ್ತು ಕೋಟಿ ರೂಪಾಯಿಗಳನ್ನು ನೀಡಿದೆ. ಹೊರಗುತ್ತಿಗೆ ಕೇಂದ್ರ ಆರಂಭಿಸಲು 108 ಅರ್ಜಿ ಬಂದಿದ್ದು ಅದರಲ್ಲಿ ನಾಲ್ಕು ಕೇಂದ್ರಗಳಿಗೆ ಮಂಜೂರಾತಿ ದೊರೆತಿದೆ. ಈ ಹಿನ್ನೆಯಲ್ಲಿ ಗುಂಡ್ಲುಪೇಟೆ, ಹಾಸನ ಜಿಲ್ಲೆ ಸಾಲಿಗ್ರಾಮ ಹಾಗೂ ಶಿಗ್ಗಾಂವಕ್ಕೆ ಮಂಜೂರಾಗಿದ್ದು ಅವುಗಳ ಈ ತಿಂಗಳಲ್ಲೇ ಆರಂಭಗೊಳ್ಳುತ್ತಿದೆ. ಈಗ ಮತ್ತೆ 65 ಅರ್ಜಿಗಳು ಬಂದಿದ್ದು ಅವುಗಳನ್ನು ಪರಿಶೀಲಿಸಿ ಅರ್ಹ ಸಂಸ್ಥೆಗಳಿಗೆ ಗ್ರಾಮೀಣ ಹೊರಗುತ್ತಿಗೆ ಸೇವಾ ಕೇಂದ್ರ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ಸಚಿವ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.

ಪ್ರತೀವರ್ಷ8.5 ಲಕ್ಷ ವಿದ್ಯಾವಂತರು ಶಿಕ್ಷಣ ಕ್ಷೇತ್ರದಿಂದ ಹೊರಬರುತ್ತಿದ್ದಾರೆ. ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಈ ರೀತಿಯ ಸೇವಾಕೇಂದ್ರ ಆರಂಭಿಸಲಾಗುತ್ತಿದೆ. ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಬಡತನ ನಿರ್ಮೂಲನೆ ಮಾಡುವ ಎಲ್ಲ ದುಡಿಯುವ ಕೈಗಳಿಗೆ ಕೆಲಸ ನೀಡುವ ಕಾರ್ಯ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಸಚಿವ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X