ಪ್ರಶಸ್ತಿಗೆ ನನಗಿಂತ ಹಿರಿಯರಿದ್ದಾರೆ : ಕಾಂತೇಶ್

ನಾಟಕ ಅಕಾಡೆಮಿ ನೀಡುವ 2008-09ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿವಮೊಗ್ಗದ ಕಾಂತೇಶ್ ಕದರಮಂಡಲಗಿ ಶಾಲಾ ದಿನಗಳಿಂದಲೇ ರಂಗಭೂಮಿಯ ನಂಟು ಬೆಳೆಸಿಕೊಂಡವರು. ಇವರು ನಗರದಲ್ಲಿ ಭಾರತ್ ಸಂಚಾರ್ ನಿಗಮದ ಉದ್ಯೋಗಿ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ. ಹನುಮಂತಪ್ಪ ಕದರಮಂಡಲಗಿ ಮತ್ತು ಚಿನ್ನಮ್ಮರವರ ಪುತ್ರರಾಗಿದ್ದಾರೆ.
ನಟ, ನಿರ್ದೇಶಕ, ಹಾಡುಗಾರರಾಗಿ ಹಾಗೂ 1981ರಲ್ಲಿ ಹೊನ್ನಾಳಿಯ ಅಭಿವ್ಯಕ್ತಿ ತಂಡದಲ್ಲಿ ಸೇರ್ಪಡೆಗೊಂಡು ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ನಂತರ ಶಿವಮೊಗ್ಗದ ಸಹ್ಯಾದ್ರಿ ರಂಗತರಂಗದಲ್ಲಿ ತೊಡಗಿಸಿಕೊಂಡವರು. ಹಾವು ಹರಿದಾಡ್ತಾವ, ಇತಿಹಾಸ ಚಕ್ರ, ಶೋಕ ಚಕ್ರ, ಸಿರಿಸಂಪಿಗೆ, ಸಂಕ್ರಾಂತಿ, ಗುಣಮುಖ, ಹಯವದನ, ಕಾನೀನ, ರಾವಿನದಿಯ ದಂಡೆಯಲ್ಲಿ, ಚಂದ್ರಹಾಸ, ಜಿಪುಣಾಗ್ರೇಸರ, ಚೋರಪುರಾಣ ನಾಟಕಗಳನ್ನು ನಿರ್ದೇಶಿಸಿದ್ದಾರೆ.
2007ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯು ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ದೇಶಿ ನಾಟಕೋತ್ಸವದಲ್ಲಿ ಡಾ| ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜೀವನ ಕುರಿತ ನಾಟಕ ಗಂಗಾವತರಣ, 2008ರಲ್ಲಿ ಉತ್ಪಲ್‌ದತ್‌ರ ಸೂರ್ಯಶಿಕಾರಿ, 2009ರಲ್ಲಿ ಕಾನೀನ ನಾಟಕ ನಿರ್ದೇಶಿಸಿದ್ದಾರೆ. 2009ರಲ್ಲಿ ಮುಂಬಯಿಯಲ್ಲಿ ನಡೆದ ಕುವೆಂಪು ನಾಟಕೋತ್ಸವದಲ್ಲಿ ಇವರ ನಿರ್ದೇಶನದ ಕಾನೀನ ನಾಟಕ ಪ್ರದರ್ಶನ ಕಂಡಿದೆ. ವಿಶಾಖ ಪಟ್ಟಣದಲ್ಲಿ ಸಂಕ್ರಾಂತಿ ಪ್ರದರ್ಶನಗೊಂಡಿದೆ. ಇವರ ನಿರ್ದೇಶನದಲ್ಲಿ ಉಡುಪಿಯ ನಾಟಕ ಸ್ಪರ್ಧೆಗಳಲ್ಲಿ ಹಲವು ನಾಟಕಗಳು ಪ್ರಶಸ್ತಿ ಗಳಿಸಿವೆ.
ಆಕಾಶವಾಣಿ ಭದ್ರಾವತಿಯಲ್ಲಿ ಮುಕ್ತಿ ಪಥ, ಮೊದಲ ಮೆಟ್ಟಿಲು ಮತ್ತಿತರೆ ನಾಟಕಗಳನ್ನು ರಚಿಸಿ ಬಿತ್ತರಿಸಿದ್ದಾರೆ. ಇವರ ಬೀದಿ ನಾಟಕಗಳಾದ ಅಕ್ಷರ, ಭೂ ತಾಯಿ, ಕುಡಿತ ಬಿಡಿ, ಏಡ್ಸ್ ಸೇರಿದಂತೆ ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. ಸಿನಿಮಾಗಳಲ್ಲಿಯೂ ಇವರು ಕಾರ್ಯನಿರ್ವಹಿಸಿದ್ದು, ಕೃಷ್ಣ ಮಾಸಡಿಯವರ ನಿರ್ದೇಶನದ ಅವಸ್ಥೆ, ಪಟ್ಟಾಭಿರಾಮರೆಡ್ಡಿ ನಿರ್ದೇಶನದ ದೇವರಕಾಡು ಚಿತ್ರಗಳಲ್ಲಿ ನಟಿಸಿದ್ದಾರೆ.
ಸ್ವಂತ ನಿರ್ಮಾಣ ನಿರ್ದೇಶನದಲ್ಲಿ ಏಸೂರ ಕೊಟ್ಟರೂ ಈಸೂರ ಕೊಡೆವು ಕಿರುಚಿತ್ರವನ್ನು ತಯಾರಿಸಿ, 1997ರಲ್ಲಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರ ಮಾಡಿದ್ದಾರೆ. ಕುವೆಂಪುರವರ ಬಲಿದಾನ ಕಿರುಚಿತ್ರ ನಿರ್ದೇಶಿಸಿದ್ದಾರೆ. ಹುಲಿ ಚಂದ್ರಶೇಖರರವರ ಅಂದು ಇಂದು ಕಿರುಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಕುವೆಂಪು ಕುರಿತ ಸಾಕ್ಷ್ಯಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ನೇತೃತ್ವದ ಸಹ್ಯಾದ್ರಿ ರಂಗತರಂಗ ತಂಡವು ಸತತವಾಗಿ ನಾಟಕಗಳನ್ನು ಶಿವಮೊಗ್ಗದಲ್ಲಿ ನೀಡುತ್ತಲೇ ಬಂದಿದೆ. ಇತ್ತೀಚೆಗಷ್ಟೆ ಸೂರ್ಯಶಿಕಾರಿ ನಾಟಕ ಶಿವಮೊಗ್ಗದಲ್ಲಿ ಪ್ರದರ್ಶನ ಕಂಡಿದೆ.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications