ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಆರ್ ಎಸ್ ಸಮೀಪ ಅಪಾರ ಸ್ಫೋಟಕ ಸಾಮಗ್ರಿ ಪತ್ತೆ

By Staff
|
Google Oneindia Kannada News

Explosives found near KRS dam, Mandya
ಮಂಡ್ಯ, ಆ.1: ಕೃಷ್ಣರಾಜ ಸಾಗರ ಜಲಾಶಯ(ಕೆಎಸ್ ಆರ್) ಸಮೀಪದ ಕಟ್ಟೇರಿ ಗ್ರಾಮದ ಮನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿ ಪತ್ತೆಯಾಗಿದೆ. ಮನೆಯಲ್ಲಿ ವಾಸವಾಗಿದ್ದ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದಾರೆ. ಮಂಡ್ಯ ಪೊಲೀಸರ ಶೋಧನೆ ಕಾರ್ಯ ಮುಂದುವರಿದಿದೆ.

ಅಪಾರ ಪ್ರಮಾಣದ ಜಿಲಾಟಿನ್ ಕಡ್ಡಿಗಳು ಸೇರಿದಂತೆ ಅಮೋನಿಯಂ ನೈಟ್ರೇಟ್ ಪತ್ತೆಯಾಗಿದೆ. ಒಟ್ಟು ಮೂರು ಲಕ್ಷ ರುಪಾಯಿ ಮೌಲ್ಯದ ಸ್ಫೋಟಕ ಸಾಮಗ್ರಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗಣಿಗಾರಿಕೆಗೆ ಬಳಸುವ ಈ ಸ್ಫೋಟಕ ಸಾಮಗ್ರಿಯನ್ನು ಕಟ್ಟೇರಿ ಗ್ರಾಮದ ಮನೆಯಲ್ಲಿ ಅಡಗಿಸಿಟ್ಟಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಟ್ಟೇರಿ ಗ್ರಾಮದ ಮನೆಯ ಮೇಲೆ ಇಂದು ದಾಳಿ ನಡೆಸಿದರು. ಆಗ ಈ ಸ್ಫೋಟಕಗಳು ಪತ್ತೆಯಾಗಿವೆ. ಮನೆಯಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದು. ಅವರ ಪತ್ತೆ ಕಾರ್ಯವನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X