ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯಾರ್ಥಿಗಳಿಗೆ ಭಗವದ್ ಗೀತೆ ಪ್ರಶ್ನೋತ್ತರ ಮಾಲಿಕೆ

By Staff
|
Google Oneindia Kannada News

Ghagavd Gita quiz contest for students
ಬೆಂಗಳೂರು, ಜು. 30 : ಶಾಲಾಮಕ್ಕಳಿಗೆ ಭಗವದ್ ಗೀತೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಕಲ್ಚರ್ ಇಂಡಿಯಾ ಸಂಸ್ಥೆ ಮಕ್ಕಳಿಗಾಗಿ ಭಗವದ್ ಗೀತಾ ಪ್ರಶ್ನೋತ್ತರ ಮಾಲಿಕೆಯನ್ನು ಹಮ್ಮಿಕೊಂಡಿದೆ.

ಇದರ ಪ್ರಯುಕ್ತ, ಶತಾವಧಾನಿ ಡಾ. ಗಣೇಶ್ ಅವರ ನೇತೃತ್ವದಲ್ಲಿ ಆಗಸ್ಟ್ 2ರಂದು 10 ಶಾಲೆಗಳ 100 ಮಕ್ಕಳು ಕಾಲ್ನಡಿಗೆ ಗೀತಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಗೀತಾಯಾತ್ರೆ ಮಹಾಲಕ್ಷ್ಮಿ ಬಡಾವಣೆಯ ಇಸ್ಕಾನ್ ನಿಂದ ರಾಜಾಜಿನಗರದ 2ನೇ ಹಂತದಲ್ಲಿರುವ ವಾಣಿ ವಿದ್ಯಾಕೇಂದ್ರದವರೆಗೆ ನಡೆಯಲಿದೆ. ಅಲ್ಲಿ ಬೆಳಿಗ್ಗೆ 10 ಗಂಟೆಗೆ ಭಗವದ್ ಗೀತಾ ಪ್ರಶ್ನೋತ್ತರ ಕಾರ್ಯಕ್ರಮದ ಉದ್ಘಾಟನೆ www.culturalindia.org ವೆಬ್‌ಸೈಟ್‌ನಲ್ಲಿ ನೆರವೇರಲಿದೆ. ಶಾಲಾ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

1. ಪ್ರಶ್ನೋತ್ತರ : ಮೊದಲ ಸುತ್ತು 02.08.2009 ರಿಂದ 16.08.2009ರವರೆಗೆ.

200 ಶಾಲೆಗಳು ಪ್ರತಿ ಶಾಲೆಗೆ ತಲಾ 50 ಮಕ್ಕಳಂತೆ ಭಾಗವಹಿಸಬಹುದು. www.culturalindia.org ವೆಬ್‌ಸೈಟ್‌ನಲ್ಲಿ ಉಚಿತವಾಗಿ 10,000 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿ, 18 ಸರಳ, ಸುಲಭ ಪ್ರಶ್ನೆಗಳನ್ನು ಉತ್ತರಿಸಬಹುದು.

2. ಪ್ರಶ್ನೋತ್ತರ : 2ನೇ ಸುತ್ತು : 23.08.2009 ರಿಂದ 30.08.2009ರವರೆಗೆ.

ಮೊದಲ ಸುತ್ತಿನಲ್ಲಿ 70 ಶಾಲೆಗಳಿಂದ ಅತಿ ಹೆಚ್ಚು ಉತ್ತರ ನೀಡಿದ 18 ವಿದ್ಯಾರ್ಥಿಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಗುತ್ತದೆ. ಅಂತಹ 1260 ಮಕ್ಕಳು ಎರಡನೇ ಸುತ್ತಿನಲ್ಲಿ ನೀಡುವ 70 ಪ್ರಶ್ನೆಗಳನ್ನು www.culturalindia.org ವೆಬ್‌ಸೈಟಿನ ಮೂಲಕ ಉತ್ತರಿಸಬಹುದು. ಈ ಮಕ್ಕಳಿಗೆ ಗೀತಾ ದ್ಯುತಿ ಎಂಬ ಭಗವದ್ಗೀತೆಯ ಮೂಲ ಶ್ಲೋಕ-ತಾತ್ಪರ್ಯಗಳುಳ್ಳ 200 ಪುಟಗಳ ಪುಸ್ತಕವನ್ನು ಉಡುಗೊರೆಯಾಗಿ ನೀಡಲಾಗುವುದು.

3. ಭಗವದ್ಗೀತಾ ಶಿಬಿರ : 03.09.2009 ರಿಂದ 04.09.2009ರವರೆಗೆ. ಸ್ಥಳ : ರಾಗಿ ಗುಡ್ಡ, ಜೆ.ಪಿ. ನಗರ, ಬೆಂಗಳೂರು.

ಎರಡನೇ ಸುತ್ತಿನಲ್ಲಿ 18 ಶಾಲೆಗಳಿಂದ ಅತಿ ಹೆಚ್ಚು ಸರಿಯುತ್ತರ ನೀಡಿದ 4 ವಿದ್ಯಾರ್ಥಿಗಳನ್ನು ಸೆಮಿಫೈನಲ್ಸ್‌ಗೆ ಆಯ್ಕೆ ಮಾಡಲಾಗುವುದು. ಈ ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆಯಾದ ಶಾಲೆಗಳು ನೇರವಾಗಿ ನೋಂದಾಯಿಸಬಹುದು. 2 ದಿನಗಳ ಈ ವಿಶೇಷ ಭಗವದ್ಗೀತಾ ಶಿಬಿರದಲ್ಲಿ ನಾಡಿನ ಖ್ಯಾತ ವಿದ್ವಾಂಸರು ಗೀತೆಯ 18 ಅಧ್ಯಾಯಗಳ ಪರಿಚಯ ಮಾಡಿಕೊಡಲಿದ್ದಾರೆ.

4. ಸೆಮಿಫೈನಲ್ಸ್ : 06.09.2009 ಬೆಳಿಗ್ಗೆ 10.30 ರಿಂದ 12.30 ರವರೆಗೆ. ಸ್ಥಳ: ಶ್ರೀ ಶಂಕರ ಜಯಂತಿ ಮಂಡಳಿ, ಜಯನಗರ 3ನೇ ಬ್ಲಾಕ್, ಬೆಂಗಳೂರು, ಅಧ್ಯಾತ್ಮಪ್ರಕಾಶ ಕಾರ್ಯಾಲಯ, ತ್ಯಾಗರಾಜನಗರ, ಬೆಂಗಳೂರು.

ಸೆಮಿಫೈನಲ್ಸ್‌ನಲ್ಲಿ 6 ತಂಡಗಳ 3 ಗುಂಪುಗಳಿಗೆ ನಾಡಿನ ಖ್ಯಾತ ವಿದ್ವಾಂಸರು ಪ್ರಶ್ನೋತ್ತರಗಳನ್ನು ಕೇಳಲಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ದೈವ ಸಹಾಯ (50:50), ಸುಹೃತ್ ಸಹಾಯ (ಫೋನ್ ಎ ಫ್ರೆಂಡ್) ಮತ್ತು ಸಭಿಕ ಸಹಾಯ (ಆಡಿಯನ್ಸ್ ಪೋಲ್) ಮುಂತಾದ ಸಹಾಯಕ ಅವಕಾಶಗಳನ್ನು ನೀಡಲಾಗುವುದು.

5. ಪ್ರಶ್ನೋತ್ತರ ಮಾಲಿಕೆ ಫೈನಲ್ಸ್ : 12.09.2009 ಸಂಜೆ 4.00 ಗಂಟೆಗೆ. ಸ್ಥಳ: ರಾಗಿ ಗುಡ್ಡ, ಜೆ.ಪಿ. ನಗರ, ಬೆಂಗಳೂರು.

ಸೆಮಿಫೈನಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ 6 ತಂಡಗಳನ್ನು ಫೈನಲ್ಸ್‌ಗೆ ಆಯ್ಕೆ ಮಾಡಲಾಗುವುದು. ಪರಮಪೂಜ್ಯ ಶ್ರೀಶ್ರೀ ರಂಗಪ್ರಿಯಸ್ವಾಮಿಗಳು, ಅಷ್ಟಾಂಗಯೋಗ ವಿಜ್ಞಾನಮಂದಿರ, ಹನುಮಂತನಗರ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಪರಮಪೂಜ್ಯ ಶ್ರೀಶ್ರೀ ಗಂಗಾಧರೇಂದ್ರ ಸ್ವಾಮೀಜಿ, ಸ್ವರ್ಣವಲ್ಲೀ ಮಠ, ಸೋಂದಾ, ಶಿರಸಿ ಇವರುಗಳು ವಿದ್ಯಾರ್ಥಿಗಳಿಗೆ ನೇರವಾಗಿ ಪ್ರಶ್ನೋತ್ತರಗಳನ್ನು ಕೇಳಲಿದ್ದಾರೆ. ಇದರಲ್ಲಿಯೂ ಸಹ ಸೆಮಿಫೈನಲ್ಸ್‌ನಂತೆ ಸಹಾಯಕ ಅವಕಾಶಗಳನ್ನು ನೀಡಲಾಗುವುದು. ನಂತರ ಎಸ್. ಷಡಕ್ಷರಿಯವರು, ಅಧ್ಯಕ್ಷರು, ರಮಣಶ್ರೀ ಸಮೂಹ ಸಂಸ್ಥೆಗಳು, ಇವರು ಮುಖ್ಯ ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ "ಗೀತಾ ದ್ಯುತಿ' - ಪುಸ್ತಕ ಬಿಡುಗಡೆಯನ್ನು ಮಾಡಲಾಗುವುದು.

ಫೈನಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜೇತರಾದ ಮೊದಲ ತಂಡಕ್ಕೆ ರೂ. 15,000, 2ನೇ ತಂಡಕ್ಕೆ ರೂ. 10,000, ಮತ್ತು 3ನೇ ತಂಡಕ್ಕೆ ರೂ. 5,000 ನಗದು ಬಹುಮಾನವನ್ನು ವಿತರಿಸಲಾಗುವುದು.

ಹೆಚ್ಚಿನ ವಿವರಗಳಿಗೆ 97315 92869 / 2319 3619 ಸಂಪರ್ಕಿಸಿ ಅಥವಾ www.culturalindia.org ವೆಬ್‌ಸೈಟಿಗೆ ಭೇಟಿ ನೀಡಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X