ಗೊಬ್ಬರ ಕಾಳಸಂತೆ ವಿರುದ್ಧ ದಂಗೆಯೆದ್ದ ರೈತರು
ಶಿವಮೊಗ್ಗ,
ಜು. 28 : ಜಿಲ್ಲೆಯಲ್ಲಿ ಗೊಬ್ಬರ ಹಾಗೂ ಬಿತ್ತನೆ ಬೀಜದ ಅಭಾವ ಉಂಟಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಈ ಅಭಾವವನ್ನು ನೀಗಿಸಬೇಕೆಂದು ಒತ್ತಾಯಿಸಿ, ಹರಮಘಟ್ಟ ಹಾಗೂ ಮತ್ತೂರು ಸುತ್ತಮುತ್ತಲಿನ ಗ್ರಾಮಸ್ಥರು ಇಂದು ಮಧ್ಯಾಹ್ನ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. id="toptextpromo">ಹರಮಘಟ್ಟ
ಮತ್ತು ಮತ್ತೂರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಗೆ 25 ಲೋಡ್‌ಗಳಷ್ಟು ಗೊಬ್ಬರದ ಅಗತ್ಯವಿದೆ. ಸರ್ಕಾರ ಮೊದಲಿಗೆ ಒಂದು ಲೋಡ್ ಗೊಬ್ಬರ ನೀಡಿದರೆ, 10ರಿಂದ 15 ದಿನಗಳನ್ನು ಬಿಟ್ಟು ಮತ್ತೊಂದು ಲೋಡ್ ಗೊಬ್ಬರವನ್ನು ನೀಡುತ್ತಿದೆ. ಈ ನೀತಿಯನ್ನು ಕೈಬಿಟ್ಟು ಒಟ್ಟಿಗೆ ಗೊಬ್ಬರವನ್ನು ಪೂರೈಸಬೇಕೆಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು. id='are-slot-1' class='oiad oi-axt oiadv'> id='top-searched-articles'>ರೈತರಿಗೆ
ಸಿಗಬೇಕಾದ ಗೊಬ್ಬರ ಕಾಳಸಂತೆಯಲ್ಲಿ ಬಿಕರಿಯಾಗುತ್ತಿದ್ದು, ರೈತರು ಅನಿವಾರ್ಯವಾಗಿ ಕಾಳಸಂತೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ರೈತರಿಗೆ ಸೂಕ್ತ ಸಮಯದಲ್ಲಿ ಗೊಬ್ಬರ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಗ್ರಾಮ ಪಂಚಾಯತ್‌ಗಳ ಮಟ್ಟದಲ್ಲಿಯೇ ಗೊಬ್ಬರವನ್ನು ರೈತರಿಗೆ ವಿತರಿಸುವ ಕೆಲಸ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ನಂತರದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎನ್.ವಿ.ಅಂತರವಳ್ಳಿಯವರಿಗೆ ಮನವಿ ಪತ್ರ ಸಲ್ಲಿಸಿದರು.











Click it and Unblock the Notifications