Get Updates
Get notified of breaking news, exclusive insights, and must-see stories!

ಮುದ್ರಣ ಮಾಧ್ಯಮದ ಪ್ರಭಾವ ಕುಂದಿಲ್ಲ

Prof. BS Sherigara
ಶಿವಮೊಗ್ಗ,ಜು.27: ದೃಶ್ಯ ಮಾಧ್ಯಮ ಬಂದ ಮೇಲೆ ಮುದ್ರಣ ಮಾಧ್ಯಮ ನಾಶ ಹೊಂದುವ ಅಭಿಪ್ರಾಯ ಮೊದಲಿತ್ತು. ಆದರೆ, ಎರಡೂ ಮಾಧ್ಯಮಗಳು ಇಂದು ಸಮವಾದ ರೀತಿಯಲ್ಲಿ ಸಾಗುತ್ತಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೊ|.ಎ.ಶೇರಿಗಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗದಿಂದ ಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೋದ್ಯಮದಲ್ಲಿರುವವರು ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ಹೊಂದಿರಬೇಕು. ಜೊತೆಗೆ, ಪ್ರಚಲಿತ ವಿದ್ಯಮಾನ, ಭೌಗೋಳಿಕ ಜ್ಞಾನ ತಿಳಿದಿರಬೇಕು. ಅಂತಹ ಪತ್ರಕರ್ತರು ಶಿವಮೊಗ್ಗದಲ್ಲಿದ್ದಾರೆಂದು ತಿಳಿಸಿದರು.

ದೃಶ್ಯ ಮಾಧ್ಯಮ ಬಂದ ಮೇಲೆ ಮುದ್ರಣ ಮಾಧ್ಯಮ ಪ್ರಭಾವ ಕಡಿಮೆಯಾಗುವುದೆಂದು ಭಾವಿಸಲಾಗಿತ್ತು. ಆದರೆ, ಪತ್ರಿಕೆಯ ಮೇಲೆ ಯಾವುದೇ ರೀತಿಯ ಪ್ರಭಾವ ಬೀರದೆ ಎರಡೂ ಮಾಧ್ಯಮಗಳು ಜನರಲ್ಲಿ ಪ್ರಭಾವ ಬೀರಿದೆ ಎಂದರು. ಜಾಗತೀಕರಣ ಬಂದ ಸಂದರ್ಭದಲ್ಲಿ ಆತಂಕದ ಸನ್ನಿವೇಶವನ್ನು ಎದುರಿಸಿತ್ತು. ಅನಾರೋಗ್ಯಕರ ಬೆಳವಣಿಗೆ, ಕ್ಷುಲ್ಲಕ ವಿಚಾರಗಳನ್ನು ಕಡಿಮೆ ಮಾಡಿ ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಮುಂದಾಗಬೇಕು. ಇದು ಪತ್ರಕರ್ತರಾದವರಿಗೆ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ್‌ರವರು ಮಾತನಾಡಿ, ಹಿಂದಿನ ದಿನಗಳಲ್ಲಿ ಪತ್ರಿಕೆಯನ್ನು ಒಂದು ಸೇವೆ, ಮಾಹಿತಿ ನೀಡುವುದು ಎಂದು ತಿಳಿದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ವ್ಯಾಪಾರೀಕರಣವಾಗಿದೆ. ಇಂದು ಪತ್ರಿಕೆಗಳು ಅನೇಕ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದು, ಇಂತಹ ಸಂಕಷ್ಟದ ದಿನಗಳಲ್ಲೂ ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದರು. ದೃಶ್ಯ ಮಾಧ್ಯಮದಿಂದ ಮುದ್ರಣ ಮಾಧ್ಯಮ ಹೆಚ್ಚು ನಿಖರವಾಗಿರುತ್ತದೆ. ದೃಶ್ಯ ಮಾಧ್ಯಮದಿಂದ ಮುದ್ರಣ ಮಾಧ್ಯಮಕ್ಕೆ ಯಾವುದೇ ರೀತಿಯ ಧಕ್ಕೆಯುಂಟಾಗಿಲ್ಲ. ಮುದ್ರಣ ಮಾಧ್ಯಮವು ಚೆನ್ನಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ನಾವಿಕ ಪತ್ರಿಕೆಯ ಸಂಪಾದಕರಾದ ಚಂದ್ರಕಾಂತ್ ಮಾತನಾಡಿ, ಇಂದಿನ ದಿನಗಳಲ್ಲಿ ಪತ್ರಕರ್ತರು ಆಸೆ, ಆಮಿಷಗಳಿಗೆ ಒಳಗಾಗುತ್ತಾ ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಆಮಿಷಗಳನ್ನು ತಲೆ ಎತ್ತದಂತೆ ತೋಡಿಕೊಳ್ಳುವ ಜವಾಬ್ದಾರಿ ಇದೆ. ಪತ್ರಿಕೆಯನ್ನು ಖಡ್ಗಕ್ಕಿಂತ ಹರಿತ ಎನ್ನುತ್ತಾರೆ. ಸಮಾಜದ ಒಳಿತಿಗಾಗಿ ಪತ್ರಿಕೆಯನ್ನು ಬಳಸಿಕೊಳ್ಳಬೇಕೇ ಹೊರತು ವ್ಯಕ್ತಿಗತ ತೇಜೋವಧೆ ಮಾಡದೆ ನೈಜ ಘಟನೆಯನ್ನು ಜನರಲ್ಲಿ ತಿಳಿಸುವಂತಹ ಕೆಲಸಕ್ಕೆ ಮುಂದಾಗಬೇಕೆಂದರು.

ಕುವೆಂಪು ವಿವಿಯ ವಿಭಾಗ ಹೊಂದಿ ದಾವಣಗೆರೆ ವಿವಿಯಾಗುವುದರಿಂದ ವ್ಯಾಪ್ತಿಯಲ್ಲಿ ಚಿಕ್ಕದಾಗುತ್ತದೆ. ಇದರ ವ್ಯಾಪ್ತಿ 83 ಕಾಲೇಜುಗಳು ಮಾತ್ರ ಬರುವುದರಿಂದ ಭವಿಷ್ಯದಲ್ಲಿ ಹಿನ್ನಡೆಯಾಗುವ ಸಂಭವವಿದೆ. ಹೀಗಾಗಿ ಕುಲಪತಿಗಳು ಸರ್ಕಾರದ ಗಮನ ಸೆಳೆಯಲು ಮುಂದಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಟಿ.ಡಿ.ಶಂಕರನಾರಾಯಣ್, ಟಿ.ಆರ್.ಎಸ್.ನಗರ್, ಬಿ.ಶ್ರೀನಿವಾಸ್ ರಾವ್, ಕೆ.ಬಿ.ರಾಮಪ್ಪರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಟೈಮ್ಸ್ ಆಫ್ ಇಂಡಿಯಾ (ಕನ್ನಡ) ಸಂಪಾದಕರಾದ ಈಶ್ವರ್ ದೈತೋಟ, ಸುವರ್ಣ ಟಿ.ವಿ.ಯ ಶಶಿಧರ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+