ಹಾವು ಹಿಡಿಯುವ ಮಾಗಡಿಯ ದೇವರ ಪೂಜಾರಿ

ಅನೇಕ ಉರಗ ಪ್ರಿಯರ ಮಧ್ಯೆ ಮಾಗಡಿ ಪಟ್ಟಣದ ತಿರುಮಲೆಯ ಪುರಾಣ ಪ್ರಸಿದ್ದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿ ಕೆಲಸನಿರ್ವಹಿಸುತ್ತಿರುವ ಯುವಕ ಶ್ರೀನಿವಾಸ್‌ರಂಗನ್ ಎದ್ದು ಕಾಣುತ್ತಾರೆ. ಉರಗಗಳನ್ನ ರಕ್ಷಣೆ ಕಾರ್ಯವನ್ನು ಅವರು ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ. ಚಿಕ್ಕಂದಿನಿಂದಲೇ ಹಾವುಗಳ ಬಗ್ಗೆ ವಿಶೇಷ ಆಸಕ್ತಿಯಿದ್ದ ಶ್ರೀನಿವಾಸ್‌ರಂಗನ್ ಟೆಲಿವಿಷನ್‌ಗಳಲ್ಲಿ ಬರುತ್ತಿದ್ದ ಹಾವುಗಳನ್ನ ವೀಕ್ಷಿಸಿ ಹಾವುಗಳನ್ನು ಹಿಡಿಯಬೇಕೆಂಬ ಕನಸು ಕಾಣುತ್ತಿದ್ದರು.
ಈ ನಡುವೆ ಚನ್ನಪಟ್ಟಣದ ಸ್ನೇಕ್ ಸೂರಿಯ ಗೆಳೆತನ ಬೆಳೆಸಿಕೊಂಡ ಶ್ರೀನಿವಾಸ್‌ರಂಗನ್ ಹಾವುಗಳನ್ನ ರಕ್ಷಣಾತ್ಮಕವಾಗಿ ಹಿಡಿಯುವದನ್ನು ರೂಢಿ ಮಾಡಿಕೊಂಡರು. ನಂತರ ಮಾಗಡಿ ಪಟ್ಟಣದ ಸುತ್ತಮುತ್ತ ಪ್ರದೇಶಗಳಲ್ಲಿ ವಿವಿಧ ಬಗೆಯ ಹಲವಾರು ವಿಷಪೂರಿತ ಹಾವುಗಳನ್ನು ಹಿಡಿದು ರಕ್ಷಿಸಿ ಮನೆಯ ಮಾಲೀಕರು ನಿಟ್ಟುಸಿರುವ ಬಿಡುವಂತೆ ಮಾಡಿದ್ದಾರೆ. ಮತ್ತು ಉರಗಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಬಿಟ್ಟು ಉರಗಸಂತತಿಯನ್ನ ರಕ್ಷಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ರಂಗನ್ ಅವರದ್ದು ದೇವಾಲಯದಲ್ಲಿ ಅರ್ಚಕ ವೃತ್ತಿ. ಸಂಧ್ಯಾವಂದನೆ, ವೇದಮಂತ್ರಗಳನ್ನು ಜಪಿಸುವುದು ನಿತ್ಯ ಕಾಯಕ.ಮಾಗಡಿ ಸುತ್ತಮುತ್ತ ಪ್ರದೇಶಗಳಲ್ಲಿ ಯಾವುದೇ ರೀತಿಯ ಹಾವುಗಳನ್ನ ಕಂಡರೆ ತಕ್ಷಣ ಶ್ರೀನಿವಾಸ್‌ರಂಗನ್‌ರ ಫೋನ್ ರಿಂಗಣಿಸುತ್ತದೆ. ಸ್ಥಳಕ್ಕೆ ತೆರಳಿ ಮನೆಮಂದಿಗೆಲ್ಲ ಸಮಾಧಾನವೇಳಿ ಹಾವುಗಳ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿ ನಂತರ ಮನೆಯಲ್ಲಿ ಸೇರಿಕೊಂಡಿರುವ "ನಾಗ"ರಾಜರನನ್ನು ಸೆರೆಹಿಡಿದು ಮನೆಮಂದಿಗೆಲ್ಲ ನೆಮ್ಮದಿ ನೀಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉರಗಗಳ ರಕ್ಷಣೆಯಲ್ಲಿ ತೊಡಗಿರುವ ಶ್ರೀನಿವಾಸ್‌ರಂಗನ್ ಹಾವುಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ತಿರುಮಲೆ ರಂಗನಾಥಸ್ವಾಮಿದೇವಾಲಯದಲ್ಲಿ ಅರ್ಚಕವೃತ್ತಿಯನ್ನೆ ಅವಲಂಬಿಸಿರುವ ಶ್ರೀನಿವಾಸ್‌ರಂಗನ್‌ರವರ ಕುಟುಂಬದ ಸದಸ್ಯರಾರೂ ಹಾವು ಹಿಡಿಯುವ ಸಾಹಸ ಇಲ್ಲಿಯವರೆಗೂ ಮಾಡಿಲ್ಲ. ಆದರೆ ಶ್ರೀನಿವಾಸ್‌ರಂಗನ್ ಮಾತ್ರ ಹಾವನ್ನು ಯಾವುದೇ ಭಯ ಅಳುಕಿಲ್ಲದೆ ನಿರಾತಂಕವಾಗಿ ಹಿಡಿದು ರಕ್ಷಿಸುತ್ತಿದ್ದಾರೆ. ಇತ್ತೀಚಿಗೆ ಅತಿ ವಿಷಕಾರಿಯಾದ "ಎಳೆನಾಗರ"ಹಾವು, ನಾಗರಹಾವು, ಹಸಿರಾವು, ಮುಂತಾದ ಬಗೆಯ ವಿಷಕಾರಿಯಾದ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ. ಹಾವುಗಳಿಗೆ ತೊಂದರೆ ಕೊಡದೆ ರಕ್ಷಣೆ ಮಾಡಬೇಕೆನ್ನುವುದು ಶ್ರೀನಿವಾಸ್‌ರಂಗನ್ ಅವರ ಒಲವು-ನಿಲವು.
ಶ್ರೀನಿವಾಸ್‌ರಂಗನ್‌ರವರ ಈ ಉರಗಪ್ರೇಮಕ್ಕೆ ತಂದೆ ಗೋವಿಂದರಾಜು, ತಾಯಿ ವತ್ಸಲಾರಾಜನ್, ಸಹೋದರ ಕೀರ್ತಿ ಮತ್ತು ಸ್ನೇಹಿತರುಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ಶ್ರೀನಿವಾಸ್‌ರಂಗನ್‌ರವರು ಕೂಡ ಅರ್ಚಕ ವೃತ್ತಿಯ ನಂತರ ಉರಗಗಳ ಬಗ್ಗೆ ವಿಶೇಷ ಪುಸ್ತಕಗಳನ್ನ ಓದಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿ ನಿಮ್ಮ ಮನೆಯಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಹಾವುಗಳು ಕಂಡರೂ ತಕ್ಷಣ ಮೊಬೈಲ್ ನಂಬರ್ 94481 37074ಸಂಖ್ಯೆಗೆ ಕರೆ ಮಾಡಬೇಕೆಂದು ಶ್ರೀನಿವಾಸ್‌ರಂಗನ್ ಮನವಿ ಮಾಡಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications