ಕುಂಭದ್ರೋಣ ಮಳೆಗೆ ಕರಾವಳಿ, ಮಲೆನಾಡು ತಲ್ಲಣ

ಭೂಕುಸಿತವಾಗಿದ್ದರಿಂದ ಬೆಂಗಳೂರು ಮಂಗಳೂರು ರೈಲ್ವೆ ಸಂಚಾರ ರದ್ದುಗೊಳಿಸಲಾಗಿದೆ. ಸಕಲೇಶಪುರದಿಂದ ಮಂಗಳೂರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಅನೇಕ ಕಡೆ ವಿದ್ಯುತ್ ಸಂಪರ್ಕ ಕಡಿದುಹೋಗಿ 48 ಗಂಟೆಗಳಾಗುತ್ತಾ ಬಂದಿದೆ. ಮರ-ಗಿಡಗಳು, ಮೇಲ್ಛಾವಣಿ ಕುಸಿದು ಸಾವು ನೋವುಗಳು ಸಂಭವಿಸಿದೆ. ಬೆಳೆದು ನಿಂತಿದ್ದ ಪೈರು ಜಲಾವೃತವಾಗಿದ್ದರಿಂದ ರೈತ ಕಂಗಾಲಾಗಿ ಹೋಗಿದ್ದಾನೆ.
ಶಿವಮೊಗ್ಗ ಜಿಲ್ಲೆ ಮಂಡಗದ್ದೆ ರಸ್ತೆಯಲ್ಲಿ ತುಂಗೆ ಉಕ್ಕಿ ಹರಿಯುತ್ತಿದ್ದು ಅಪಾರ ಮಳೆ ನೀರು ರಸ್ತೆಗೆ ನುಗ್ಗಿದೆ. ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಶಿವಮೊಗ್ಗ ಮಂಗಳೂರು ಮಾರ್ಗ ಮಧ್ಯದಲ್ಲಿ ತೀರ್ಥಹಳ್ಳಿಗೆ ಹೋಗುವ ರಸ್ತೆಯಲ್ಲಿ ಇರುವ ಪಕ್ಷಿಧಾಮ ಮಂಡಗದ್ದೆಯಲ್ಲಿ ತುಂಗಾ ನದಿಯ ನೀರಿನ ಪ್ರಮಾಣ ಉಲ್ಭಣಿಸುತ್ತಿದೆ. ಪ್ರವಾಹದಿಂದಾಗಿ ಮಂಡಗದ್ದೆ ಆಸುಪಾಸಿನ ಅನೇಕ ಹಳ್ಳಿಗಳು ಜಲಾವೃತವಾಗಿವೆ. ಇಲ್ಲಿ ಮಳೆ ಪ್ರಮಾಣ 54.04 ಮಿಲಿ ಮೀಟರ್.
ರಸ್ತೆಯಲ್ಲಿ ಆಳೆತ್ತರ ನೀರು ನಿಂತಿರುವುದರಿಂದ ಜನ, ವಾಹನಗಳ ಸಂಚಾರದ ಮಾತೇ ಇಲ್ಲ. ಗ್ರಾಮಸ್ಥರು ತಮ್ಮ ಸಾಮಾನು ಸರಂಜಾಮು ಸಾಕು ಪ್ರಾಣಿಗಳನ್ನು ಸಂರಕ್ಷಿಸಲು ಪರದಾಡುತ್ತಿದ್ದಾರೆ. ಜಿಲ್ಲಾಡಳಿತದವರು ಈ ಭಾಗಕ್ಕೆ ಧಾವಿಸಿದ್ದು ಗಂಜಿಕೇಂದ್ರ ಸ್ಥಾಪಿಸಿ ಸಂತ್ರಸ್ತರ ನೆರವಿಗೆ ಮುಂದಾಗಿದ್ದಾರೆ. ಜನಜೀವನ ತಲ್ಲಣಗೊಂಡಿದೆ.












Click it and Unblock the Notifications