ಸ್ಲಂ ರಹಿತ ರಾಜ್ಯ ನಿರ್ಮಾಣ ಗುರಿ : ಸೋಮಣ್ಣ
ಬೆಂಗಳೂರು, ಜು. 9 : ಆಂಧ್ರಪ್ರದೇಶ ಮಾದರಿಯಲ್ಲಿ ಕರ್ನಾಟಕವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಗುಡಿಸಲು ರಹಿತ ರಾಜ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ ವಸತಿ ರಹಿತರ ಸಂಖ್ಯೆ ತಿಳಿದುಕೊಳ್ಳಲು ನಾಲ್ಕು ವಲಯಗಳಲ್ಲಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ವಸತಿ ಮತ್ತು ಮುಜರಾಯಿ ಖಾತೆ ಸಚಿವ ವಿ ಸೋಮಣ್ಣ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಮಾಹಿತಿಗಳ ಪ್ರಕಾರ 13 ರಿಂದ 14 ಲಕ್ಷ ಜನರಿಗೆ ಮನೆ ನಿರ್ಮಿಸಿ ಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಕಾಲಮಿತಿಯಲ್ಲಿ ಜಾರಿಗೊಳಿಸಲು ಪ್ರಯತ್ನಗಳು ನಡೆದಿವೆ ಎಂದರು. ಮನೆ ನಿರ್ಮಾಣಕ್ಕೆ 2010ರ ವೇಳೆಗೆ 800 ಕೋಟಿ ರುಪಾಯಿ ಸಿಗುವ ಸಾದ್ಯತೆಗಳಿವೆ. ಡಾ ಡಿ ಎಂ ನಂಜುಂಡಪ್ಪ ವರದಿ ಅನ್ವಯ 114 ತಾಲ್ಲೂಕುಗಳಿಗೆ ವಿಶೇಷ ಅನುದಾನ ದೊರೆಯಲಿದೆ ಎಂದು ಹೇಳಿದರು. ಗುಡಿಸಲು ರಹಿತ ಮಾಡಿರುವ ಆಂಧ್ರಪ್ರದೇಶ ಸರಕಾರದ ಮಾದರಿಯನ್ನು ರಾಜ್ಯದಲ್ಲಿ ಅಳವಡಿಸಲಾಗುವುದು ಎಂದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications