ರಂಗಾಯಣದಲ್ಲಿ 'ಶಾಕುಂತಲ' ನಾಟಕ
ಮೈಸೂರು, ಜು. 05 : ರಂಗಾಯಣದ ವಾರಾಂತ್ಯ ರಂಗ ಪ್ರದರ್ಶನದ ಅಂಗವಾಗಿ ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಶಾಕುಂತಲ ನಾಟಕವನ್ನು ಇಂದು ಸಂಜೆ 6.30 ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಪ್ರದರ್ಶಿತಗೊಳ್ಳಲಿದೆ.
ಚುರಮರಿ ಶೇಷಗಿರಿರಾವ್ ಅವರು ರಚಿಸಿದ ನಾಟಕಕ್ಕೆ ಶ್ರೀನಿವಾಸ ಭಟ್ ಅವರು ಸಂಗೀತ ನೀಡಲಿದ್ದಾರೆ. ನಂದಿನಿ ಕೆ ಆರ್ ಅವರ ವಿನ್ಯಾಸವಿದೆ. ಮತ್ತು ಮೈಮ್ ರಮೇಶ್ ಅವರ ನಿರ್ದೇಶನದಲ್ಲಿನ ನಾಟಕಕ್ಕೆ ಸಗಾಯ್ ರಾಜ್ ಬೆಳಕು ಚೆಲ್ಲಲಿದ್ದಾರೆ ಎಂದು ರಂಗಾಯಣದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications