ಸಲಿಂಗರತಿ ಸಕ್ರಮ ಸರಿಯಲ್ಲ : ಜನಾರ್ದನಸ್ವಾಮಿ

ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು, ಅಮೆರಿಕದಂತ ಲೈಂಗಿಕ ಮುಕ್ತ ದೇಶದಲ್ಲಿ ಇದರ ಬಗ್ಗೆ ಪರ ವಿರೋಧವಿದೆ. ಇಂತಹ ಸಂದರ್ಭದಲ್ಲಿ ಭಾರತದಂತಹ ಸಂಪ್ರದಾಯವುಳ್ಳ ದೇಶದಲ್ಲಿ ಸಲಿಂಗಕಾಮ ಸಕ್ರಮ ಮಾಡಿರುವುದು ಸಮಾಜ ಮೇಲೆ ಭಾರಿ ದುಷ್ಪರಿಣಾಮ ಬೀರುವುದು ಖಂಡಿತ ಎಂದು ಅವರು ಹೇಳಿದರು.
ಸಲಿಂಗಿಗಳಿಗೆ ಸಮಾನತೆ ನೀಡುವುದು ತಪ್ಪಲ್ಲ. ಅದು ಸಮಾಜದ ಒಳಿತಿಗೆ ಪೂರಕವಾಗಿರಬೇಕು. ಸಮಾಜದ ಚೌಕಟ್ಟು ಮೀರಿದರೆ ಅದರಿಂದ ಭಾರಿ ನಷ್ಟವಂತೂ ಕಟ್ಟಿಟ್ಟ ಬುತ್ತಿ ಎಂದು ಜನಾರ್ದನಸ್ವಾಮಿ ಹೇಳಿದರು. ಒಟ್ಟಿನಲ್ಲಿ ಸಲಿಂಗರತಿ ಸಕ್ರಮ ಮಾಡಿರುವುದು ಒಪ್ಪುವ ಬೆಳವಣಿಗೆಯಂತೂ ಅಲ್ಲವೇ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications