ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜುನ ಪುರಸ್ಕೃತ ಇದೀಗ ಪೊಲೀಸರ ಅತಿಥಿ

By Staff
|
Google Oneindia Kannada News

Arjuna award winner held with drugs in Mumbai
ಮುಂಬೈ, ಜೂ. 10 : ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಎನಿಸಿದ ಅರ್ಜುನ ಪ್ರಶಸ್ತಿ ಪಡೆದಿರುವ ಕ್ರೀಡಾಪಟುವೊಬ್ಬ ಮಾದಕ ವಸ್ತುಗಳ ಕಳ್ಳ ಸಾಗಣಿಕೆಯಲ್ಲಿ ಪೊಲೀಸರ ಅತಿಥಿಯಾದ ಅಪರೂಪ ಹಾಗೂ ಅವಮಾನಕರ ಪ್ರಸಂಗ ಮುಂಬೈಯಲ್ಲಿ ನಡೆದಿದೆ.

ಕುಸ್ತಿಪಟುವಾಗಿದ್ದ ಜಗದೀಶ್ ಸಿಂಗ್ 1998 ರಲ್ಲಿ ಶ್ರೇಷ್ಠ ಸಾಧನೆಗಾಗಿ ರಾಷ್ಟ್ರಪತಿಗಳಿಂದ ಪ್ರತಿಷ್ಠಿತ ಆರ್ಜುನ್ ಪ್ರಶಸ್ತಿ ಸ್ವೀಕರಿಸಿದ್ದ. ಆದರೆ 11 ವರ್ಷಗಳ ನಂತರ ಅಂದಿನ ಕ್ರೀಡಾಪಟು ಇಂದಿನ ಮಾದಕ ವಸ್ತುಗಳ ಕಳ್ಳ ಸಾಗಣಿಕೆದಾರನಾಗಿ ರೂಪುಗೊಂಡಿದ್ದಾನೆ. ಜಗದೀಶ್ ಸಿಂಗ್ ಜೊತೆಗೆ ಹರಿಜಿಂದರ್ ಸಿಂಗ್ ಹಾಗೂ ವೀರ್ ಬಹದ್ದೂರ್ ಎಂಬ ಮೂವರು ಸುಮಾರು 20 ಕೋಟಿ ರುಪಾಯಿಯ ಮೆಟಾಅಂಫಿಟಮೈನ್ ಎಂಬ ಮಾದಕ ವಸ್ತುವನ್ನು ಸಾಗಿಸುತ್ತಿರುವ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಸುಮಾರು 25 ಕೆಜಿ ಇರುವ ಮಾದಕ ವಸ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 20 ಕೋಟಿ ರುಪಾಯಿಗಿಂತಲೂ ಅಧಿಕ ಮೊತ್ತದ್ದಾಗಿದೆ. ಪಂಜಾಬನಿಂದ ಆಗಮಿಸಿದ ಆರೋಪಿಗಳು ಮುಂಬೈನ ಹೋಟೆಲ್ ವೊಂದರಲ್ಲಿ ತಂಗಿದ್ದರು. ಓಬೇರಾಯ್ ಮಾಲ್ ನಲ್ಲಿ ಆರೋಪಿಗಳ ಮಾದಕವಸ್ತುವನ್ನು ಕೊಡುತ್ತಿರುವ ಸಂಬರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು (ಮಾದಕ ವಸ್ತುಗಳ ನಿಯಂತ್ರಕ ಪಡೆ) ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೂ ಮೊದಲು ಜನವರಿ 17 ರಂದು ಹಿರಿಯ ಪೊಲೀಸ್ ಅಧಿಕಾರಿ ಸಾಜಿ ಮೋಹನ್ ಅವರನ್ನು ಮಾದಕ ವಸ್ತು ಸಾಗಾಣಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರ 12 ಕೆಜಿ 10 ಕೋಟಿ ರುಪಾಯಿಗೂ ಹೆಚ್ಚಿ ಮೌಲ್ಯದ ಹೆರಾಯಿನ್ ಪತ್ತೆಯಾಗಿತ್ತು. ಸಾಜಿ ಅವರ ಮಾದಕ ವಸ್ತುಗಳ ನಿಯಂತ್ರಣ ಇಲಾಖೆಯ ಹಿರಿಯ ಅಧಿಕಾರಿಗಳು ಆಗಿದ್ದರೂ ಎನ್ನುವುದು ವಿಶೇಷವಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದೆಂತೆ ಆಗಿತ್ತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X