ಉಗ್ರರ ವಿರುದ್ಧ ಕಠಿಣ ಕ್ರಮ : ಮನಮೋಹನ್ ಸಿಂಗ್

ಲೋಕಸಭೆಯಲ್ಲಿಂದು ಪ್ರಥಮ ಅಧಿವೇಶನದಲ್ಲಿ ಉಭಯ ಸದನವನ್ನುದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆ ಹತ್ತಿಕ್ಕುವ ಸಲುವಾಗಿ ಇಸ್ಲಾಮಾಬಾದ್ ಗೆ ಬೇಕಿರುವ ಎಲ್ಲ ಸಹಕಾರವನ್ನು ಭಾರತ ನೀಡಲಿದೆ ಎಂದರು. ಪಾಕಿಸ್ತಾನದ ಸರಕಾರ ಉಗ್ರರ ಧಮನಕ್ಕೆ ಮುಂದಾಗಬೇಕು. ಈ ಹಿಂದೆ ಭಾರತದಲ್ಲಿ ಭಯೋತ್ಪಾದನೆ ನಡೆಸಿ ಪಾಕ್ ನಲ್ಲಿ ನೆಲೆಸಿರುವ ಹಾಗೂ ಪೊಲೀಸ್ ವಶದಲ್ಲಿರುವ ಉಗ್ರರಿಗೆ ಮೊದಲು ಶಿಕ್ಷೆ ನೀಡಿ. ಉಗ್ರರಿಗೆ ಶಿಕ್ಷೆ ನೀಡಬೇಕೆನ್ನುವುದು ಭಾರತ ಮತ್ತು ಪಾಕಿಸ್ತಾನ ಪ್ರಜೆಗಳ ಒತ್ತಾಯವಾಗಿದೆ ಎಂದು ಸಿಂಗ್ ಹೇಳಿದರು.
15 ನೇ ಲೋಕಸಭೆ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಆಶೀರ್ವಾದ ನೀಡಿದೆ. ಇದರಿಂದ ನಮ್ಮ ಮೇಲೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ದೇಶದ ಆರ್ಥಿಕತೆ, ಸುಭದ್ರತೆ ಕಾಪಾಡುವುದು ಪ್ರಥಮ ಅಧ್ಯತೆಯಾಗಿದೆ. ಕಳೆದ ಸರಕಾರ ಮುಖ್ಯ ಯೋಜನೆಗಳಾದ ಉದ್ಯೋಗ ಖಾತ್ರಿ ಯೋಜನೆ, ಆರೋಗ್ಯ, ಕೆಳವರ್ಗಗಳ ವಿಶೇಷ ಯೋಜನೆಗಳು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿವೆ ಎಂದು ಸಿಂಗ್ ವಿವರಿಸಿದರು.
(ಏಜನ್ಸೀಸ್)












Click it and Unblock the Notifications