ಬೀದಿಯಲ್ಲಿ ಸಿಕ್ಕ ಅನಾಥ ಪೊಲೀಸ್ ಕ್ಯಾಪ್ ಕಥೆ!

A tale of an orphaned police cap!
ಶಿವಮೊಗ್ಗ, ಜೂ. 9 : ಕಾನೂನನ್ನು ರಕ್ಷಿಸುತ್ತೇವೆ. ಕಾನೂನಿನ ಮೂಲಕ ಸಮಾಜವನ್ನು ಕಾಪಾಡುತ್ತೇವೆ. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಸಂವಿಧಾನಕ್ಕೆ ಬದ್ಧವಾಗಿರುತ್ತೇವೆ... ಎಂದೆಲ್ಲಾ ಪ್ರಮಾಣವಚನ ಸ್ವೀಕರಿಸಿದ ಪೊಲೀಸ್ ಪೇದೆಯೊಬ್ಬರ ತಲೆಯ ಶಿರಸ್ತ್ರಾಣ ಪೊಲೀಸ್ ಕ್ಯಾಪ್ ಬೀದಿಯಲ್ಲಿ ಅನಾಥ!

ನಗರದ ಬಿ.ಹೆಚ್.ರಸ್ತೆಯಲ್ಲಿರುವ ಡಿ.ಎಚ್.ಓ. ಕಚೇರಿ ಬಳಿಯಲ್ಲಿ ರಕ್ಷಣೆಯಿಲ್ಲದೆ ಜನರ ಅಲಕ್ಷ್ಯಕ್ಕೆ ಗುರಿಯಾದ ಆರಕ್ಷಕನ ಟೋಪಿ ಆ ಪೇದೆಯ ನಿರ್ಲಕ್ಷತನಕ್ಕೆ ದ್ಯೋತಕವೆ? ಆಟೋ ಚಾಲಕನಿಂದ ಹಿಡಿದು ಬಸ್ಸಿನ ನಿರ್ವಾಹಕನವರೆಗೂ ಖಾಕಿ ಎಂದರೆ ಅದರ ಗೌರವವೇ ಬೇರೆ. ಆದರೆ, ಪೊಲೀಸ್ ಖಾಕಿಗೆ ಎಲ್ಲಿಲ್ಲದ ವಿಶೇಷವಾದ ಸ್ಥಾನಮಾನವಿದೆ. ಪೊಲೀಸ್ ಖಾಕಿಯನ್ನು ಸಮಾಜವನ್ನು ರಕ್ಷಿಸುವ ಸರ್ವಶ್ರೇಷ್ಠ ದಿರಿಸು ಎಂದು ಹೇಳಲಾಗುತ್ತದೆ.

ಪೊಲೀಸ್ ಕ್ಯಾಪ್ ಎಂಬ ಕಾರಣಕ್ಕಾಗಿ ರಸ್ತೆಯ ಮೇಲೆ ಅನಾಥವಾಗಿ ಬಿದ್ದಿದ್ದರೂ ಅದನ್ನು ನೋಡಿಕೊಂಡೇ ಓಡಾಡುತ್ತಿದ್ದ ನೂರಾರು ಜನ ಸಾರ್ವಜನಿಕರು ಅದರ ಸಹವಾಸಕ್ಕೆ ಹೋಗಲಿಲ್ಲ. ಪೊಲೀಸರಿಂದ ದೂರವಾಗಿಯೇ ಇರಬಯಸುವ ಸಾರ್ವಜನಿಕರು ಬೀದಿಯಲ್ಲಿ ಬಿದ್ದಿದ್ದ ಪೊಲೀಸ್ ಕ್ಯಾಪ್ ಕಂಡಾಗಲೂ ಅದರ ಹತ್ತಿರ ಕೂಡ ಸುಳಿಯಲು ಹೋಗಿಲ್ಲ. ಹಾಗಾಗಿ ಪೊಲೀಸ್ ಕ್ಯಾಪ್ ಅನಾಥವಾಗಿ ಅದೆಷ್ಟೋ ಹೊತ್ತಿನಿಂದ ಬಿದ್ದ ಸ್ಥಳದಲ್ಲಿಯೇ ಇತ್ತು.

ಶಿಕ್ಷಾರ್ಹ ಅಪರಾಧ : ಪೊಲೀಸ್ ಕ್ಯಾಪ್ ಕುರಿತು ಪೊಲೀಸ್ ಇಲಾಖೆಗೆ ವಿಷಯ ತಿಳಿಸಿ ಈ ಬಗ್ಗೆ ಒಳಗಿನ ಮರ್ಮ ಕೇಳಿದಾಗ, ಹೀಗೆ ಪೊಲೀಸ್ ಕ್ಯಾಪ್ ಕಳೆದುಕೊಳ್ಳುವುದಾಗಲಿ ಅಥವಾ ಎಲ್ಲೆಂದರಲ್ಲಿ ಎಸೆಯುವುದಾಗಲಿ ಅದೊಂದು ಅಪರಾಧವೇ. ಒಂದು ಪಕ್ಷ ಸಮವಸ್ತ್ರ ಹಾಳಾಗಿದ್ದ ಸಂದರ್ಭದಲ್ಲಿ ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಅದಕ್ಕಾಗಿಯೇ ಇರುವ ವಿಭಾಗಕ್ಕೆ ಅದನ್ನು ಒಪ್ಪಿಸಬೇಕು. ಆನಂತರದಲ್ಲಿ ಹೊಸದೊಂದು ಸಮವಸ್ತ್ರವನ್ನು ಪಡೆಯಬೇಕು. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾರೇ ಆಗಲಿ ಸಮವಸ್ತ್ರದ ಬಗ್ಗೆ ನಿರ್ಲಕ್ಷ್ಯವಹಿಸಿದ್ದೇ ಆದಲ್ಲಿ ಅವರಿಗೆ ಇಲಾಖೆ ತಕ್ಕ ದಂಡ ವಿಧಿಸುವುದರಲ್ಲಿ ಅನುಮಾನವಿಲ್ಲ ಎಂದು ಹೇಳುತ್ತಾರೆ.

ಹೀಗೆ ರಸ್ತೆಯಲ್ಲಿ ಪೊಲೀಸ್ ಕ್ಯಾಪನ್ನು ಬಿಸಾಡಿದಂತಹ ಪೊಲೀಸ್ ಪೇದೆ ವಿರುದ್ಧ ಕಾನೂನು ಪ್ರಕಾರ ಶಿಸ್ತಿನ ಕ್ರಮ ಜರುಗಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಹೆಗಲ ಮೇಲಿದೆ. ಹೊರಗಿನ ಅಪರಾಧಿಗಳನ್ನು ಹುಡುಕುವ ಪೊಲೀಸ್ ಇಲಾಖೆಗೆ ಈಗ ಒಳಗಿನ ಆರೋಪಿಯನ್ನು ಹುಡುಕಿ ಕಾನೂನು ಕ್ರಮ ಜರುಗಿಸುವ ಅವಶ್ಯಕತೆ ಇದೆ. ಜಿಲ್ಲಾ ರಕ್ಷಣಾಧಿಕಾರಿ ಮುರುಗನ್‌ರವರು ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮಾಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+