ಟಿಸಿಎಸ್ ಮುಖ್ಯಸ್ಥರ ಸಂಭಾವನೆ ಕೋಟಿ ಕೋಟಿ

2008-09 ನೇ ಸಾಲಿನಲ್ಲಿ ಸಂಸ್ಥೆಯ ಪ್ರಮುಖ ಹುದ್ದೆಯಲ್ಲಿರುವವರು ಹಾಗೂ ನಿರ್ದೇಶಕ ಮಂಡಳಿ ಸದಸ್ಯರು 12.80 ಕೋಟಿ ರುಪಾಯಿ ಸಂಭಾವನೆ ಪಡೆದಿದ್ದಾರೆ. ಈ ಹಿಂದಿನ ವರ್ಷದಲ್ಲಿ ಅವರ ವೇತನ 11.08 ಕೋಟಿ ರುಪಾಯಿ ಆಗಿತ್ತು. ಟಿಸಿಎಸ್ ವಾರ್ಷಿಕ ವರದಿಯ ಪ್ರಕಾರ, ರಾಮದೊರೈ 4.1 ಕೋಟಿ ರುಪಾಯಿ ವೇತನದೊಂದಿಗೆ ಮೊದಲಿಗರಾಗಿದ್ದರೆ, ಸಿಒಒ ಎನ್ ಚಂದ್ರಶೇಖರನ್ ಅವರು ಪಡೆದಿರುವ ವೇತನ 1.92 ಕೋಟಿ ರುಪಾಯಿ. ಕಾರ್ಯಕಾರಿ ನಿರ್ದೇಶಕ ಫಿರೋಜ್ ವಂದ್ರೆವಾಲಾ ಅತ್ಯಧಿಕ ಪ್ರಮಾಣ ಅಂದರೆ ಶೇ. 41 ರಷ್ಟು ಹೆಚ್ಚಳ ಪಡೆದಿದ್ದು, ಅವರ ವೇತನ 1 ರಿಂದ 1.40 ಕೋಟಿಗೆ ಏರಿದೆ.
ಇವರಿಬ್ಬರ ಸಂಬಳ ಹೆಚ್ಚಾಗಿದ್ದರಿಂದ ಪ್ರತಿಯೊಬ್ಬ ಸಿಬ್ಬಂದಿ ವೆಚ್ಚ ಕೂಡಾ ಶೇ 25 ರಷ್ಟು ಹೆಚ್ಚಾಗಿದೆ. ಇದೇ ವೇಳೆ ಟಿಸಿಎಸ್ ನ ನಾನ್ ಎಕ್ಸಿಕ್ಯೂಟಿವ್ ಚೇರಮನ್ ರತ್ನ ಟಾಟಾ ಅವರ ಸಂಭಾವನೆ ಹೆಚ್ಚಾಗಿಲ್ಲ. ವೇತನ, ಕಮೀಷನ್ ಹಾಗೂ ಶುಲ್ಕ ಸೇರಿ 55.60 ಲಕ್ಷ ರುಪಾಯಿ ಪಡೆಯುತ್ತಿದ್ದಾರೆ.
(ಏಜನ್ಸೀಸ್)












Click it and Unblock the Notifications