ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಭೆಯಲ್ಲಿ ವಿಷ ಸೇವಿಸಿ ಸಾಯುತ್ತೇನೆ:ಶರದ್ ಎಚ್ಚರಿಕೆ

By Staff
|
Google Oneindia Kannada News

'Will consume poison if Women's bill is passed'
ನವದೆಹಲಿ, ಜೂ.6: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಈಗಿನ ರೂಪದಲ್ಲೇ ಅಂಗೀಕರಿಸಿದರೆ ತಾನು ವಿಷ ಸೇವಿಸಿ ಸಾಯುತ್ತೇನೆ ಎಂದು ಜೆಡಿ (ಯು) ಅಧ್ಯಕ್ಷ ಶರದ್ ಯಾದವ್ ಶುಕ್ರವಾರ ಬೆದರಿಕೆ ಹಾಕಿದ್ದಾರೆ. ಮಹಿಳೆಯರನ್ನು ರಾಷ್ಟ್ರಪತಿ, ಸ್ಪೀಕರ್ ಹುದ್ದೆಗಳಲ್ಲಿ ಕುಳ್ಳರಿಸಿದ ಮಾತ್ರಕ್ಕೆ ಅಥವಾ ಅವರಿಗೆ ಮೀಸಲಾತಿ ಕಲ್ಪಿಸುವುದರಿಂದ ಸ್ವಾತ್ರಂತ್ರ್ಯ ಸಿಗುವುದಿಲ್ಲ ಎಂದು ಶರದ್ ಯಾದವ್ ಅಭಿಪ್ರಾಯಪಟ್ಟರು.

ಶುಕ್ರವಾರ ಅವರು ಉಭಯ ಸದನಗಳನ್ನೂ ಉದ್ದೇಶಿಸಿ ಮಾತನಾಡುತ್ತಿದ್ದರು. ನಮಗೆ ಸಂಖ್ಯಾಬಲ ಇಲ್ಲದಿರಬಹುದು. ವಿಷ ಸೇವಿಸಿ ಸಾಯುತ್ತೇನೆಯೇ ಹೊರತು ಮಹಿಳಾ ಮೀಸಲಾತಿ ಮಸೂದೆಯನ್ನು ಮಾತ್ರ ಅಂಗೀಕರಿಸಲು ಬಿಡುವುದಿಲ್ಲ. ಕಾಂಗ್ರೆಸ್ ನ ಕಣ್ಣೊರೆಸುವ ತಂತ್ರವಾಗಿ ಈ ಮಸೂದೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಶರದ್ ಸ್ಪಷ್ಟಪಡಿಸಿದರು.

ರಾಷ್ಟ್ರಪತಿ, ಸ್ಪೀಕರ್ ಹುದ್ದೆಗಳಿಗೆ ಮಹಿಳೆಯನ್ನು ಆಯ್ಕೆ ಮಾಡುವುದು ಕಣ್ಣೊರೆಸುವ ತಂತ್ರ ಎಂದು ಆರೋಪಿಸಿದ ಶರದ್, ವಾಸ್ತವಾಗಿ ಹಿಂದುಳಿದ, ತೀರಾ ಹಿಂದುಳಿದ ವರ್ಗಗಳಿಗೆ ಬೇಕಾಗಿರುವುದು ನಿರ್ಗತಿಕ ಪರಿಸ್ಥಿತಿಗಳಿಂದ ಪಾರಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಮೊದಲು ಮುಸ್ಲಿಂ ಮಹಿಳೆಯರನ್ನು ವೈಯಕ್ತಿಕ ಕಾನೂನು ತೊಡಕುಗಳಿಂದ ಪಾರು ಮಾಡಿ ಎಂದು ಅವರು ವಿನಂತಿಸಿಕೊಂಡರು.

ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದಂತೆ, ಧೈರ್ಯವಿದ್ದರೆ 100 ದಿನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲಿ ನೋಡೋಣ ಎಂದು ಅವರು ಬಹಿರಂಗ ಸವಾಲೆಸಿದಿದ್ದಾರೆ. ಸರಕಾರಕ್ಕೆ 80 ಮಂದಿ ಸಂಸದರು ಹೊರಗಿನಿಂದ ಬೆಂಬಲ ಕೊಟ್ಟಿದ್ದಾರೆ ಎಂಬ ವಿಷಯವನ್ನು ಮರೆಯದಿರಿ. ಅವರೊಂದಿಗೆ ತಾವೂ ಕಲೆತು ಕೆಲಸ ಮಾಡಿದ ಸಂಗತಿಯನ್ನು ನೆನಪಿಸಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X