136020softwareಸಿಇಓ ಯಮಧರ್ಮರಾಯನ ಪಿಂಕ್ ಸ್ಲಿಪ್ ಪುರಾಣ/column/humor/2008/0919-yamaloka-software-company-pink-slip-episode.htmlನೋಡನೋಡುತ್ತಿದ್ದಂತೆ ಯಮಲೋಕದ ಗೆಟಪ್ಪೇ ಬದಲಾಗಲು ಪ್ರಾರಂಭಿಸಿತು. ಬೋಳು ತಲೆ, ಫ್ರೆಂಚ್ ಗಡ್ಡ, ಬ್ಲಾಕ್ ಟೀಶರ್ಟು, ಜೀನ್ಸ್ ಪ್ಯಾಂಟು, ಕಾಲಿಗೆ ಹವಾಯಿ ಚಪ್ಲಿ ಹಾಕ್ಕೊಂಡು ಸಣಕಲ ಕಡ್ಡಿಯಂತಿದ್ದ ಯಮ ಕಣ್ಣು ಮಿಟುಕಿಸುವುದರೊಳಗಾಗಿ ತನ್ನ ಮೂಲರೂಪ ಪಡೆದಿದ್ದ. ತಲೆಯನ್ನೊಮ್ಮೆ ಕೊಡವಿ ಕಿರೀಟ ಧರಿಸಿದ ನೋಡು ಆತನ ಖದರೇ ಬದಲಾಗಿಹೋಯಿತು. ಕಣ್ಣೆಲ್ಲ ಬೆಂಕಿಯ ಉಂಡೆ, ಕಿವಿಯಿಂದ ಬುಸ್ಸನೆ ಹೊಗೆ. ಲೇಖನ 743http://kannada.oneindia.com/img/2009/07/21-yama1e.jpg136020softwareಯಮಲೋಕದ ಸಿಇಓ ಯಮಣ್ಣನ ಪೀಕಲಾಟ/column/humor/2008/0912-yamaloka-software-company.htmlಸಾಫ್ಟ್ ವೇರ್ ಕಂಪನಿಯಾಗಿ ನರಕವನ್ನು ಬದಲಾಯಿಸಿದ್ದ ಯಮ ಕಂಪ್ಯೂಟರ್ ಆಪರೇಟ್ ಹೇಗೆ ಮಾಡಬೇಕೆಂದು ತಿಳಿಯದೇ ಚಿಂತಾಕ್ರಾಂತನಾಗಿ ಕುಳಿತಿದ್ದ. ಆತ ಬಳಸುವ ಕಂಪ್ಯೂಟರ್ ಆನ್ ಅಗಿದ್ದೇ ಇಲ್ಲ. ಪವರ್ ಕೇಬಲ್ ಕಿತ್ತುಕೊಂಡು ಬಂದಿತ್ತು. ಯಮನಿಗೆ ಅಷ್ಟೂ ಗೊತ್ತಾಗಿರಲಿಲ್ಲ. ಇಷ್ಟೇ ಅಂತ ಹೇಳಿದೆ. ಪೆಕ್ರನ ಥರಾ ನನ್ನತ್ತ ನೋಡಿ ನಕ್ಕ. ಆಮೇಲೆ ಇದ್ದಕ್ಕಿದ್ದಂತೆ ಯಮನ ಮುಖ ಕಳೆಗುಂದಿತು. ಯಾಕೆ ಯಮಣ್ಣ 873http://kannada.oneindia.com/img/2009/07/21-yama1e.jpg136020softwareಇನ್ಫಿಯಲ್ಲಿ ನೇಮಕಾತಿಯಿಲ್ಲ ವೇತನ ಹೆಚ್ಚಳವೂ ಇಲ್ಲ/news/2009/04/15/infosys-no-wage-hike-no-appointments.htmlಬೆಂಗಳೂರು, ಏ. 15 : ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕ ಲಾಭಾಂಶದಲ್ಲಿ ತುಸು ಹಿನ್ನೆಡೆಯಾಗಿರುವ ಬೆನ್ನ ಹಿಂದೆಯೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.ಆರ್ಥಿಕ ಸಂಕಷ್ಟದ ಬಿಸಿ ಇನ್ನೂ ಆರುವ ಲಕ್ಷಣ ಗೋಚರಿಸದ ಕಾರಣ ಇನ್ಫೋಸಿಸ್ ಕಂಪನಿ 2009-10ರ ಹಣಕಾಸು ವರ್ಷದಲ್ಲಿ ತನ್ನ ನೌಕರರಿಗೆ ವೇತನ 35980http://kannada.oneindia.com/img/2009/04/15-mohandas-pai2.jpg136020softwareಪ್ರತಿಭಾ ಪಲಾಯನದಿಂದ ಲಾಭವೋ ನಷ್ಟವೋ?/literature/my-karnataka/2009/0425-brain-drain-swarnagowri-venkatesh.htmlಸುಮಾರು ಇಪ್ಪತ್ತು ವರ್ಷಗಳ ಹಿ೦ದೆ ಪ್ರಸಿದ್ಧ ಕನ್ನಡ ವಾರ ಪತ್ರಿಕೆಯೊದು ಓದುಗರ ಪ್ರತಿಕ್ರಿಯೆಗೆ ಅಹ್ವಾನಿಸಿತ್ತು. ವಿಷಯ; "ಪ್ರತಿಭಾ ಪಲಾಯನ". ಅದರಲ್ಲಿ ಎಷ್ಟು ಜನ ಭಾಗವಹಿಸಿದ್ದರು ಅ೦ದರೆ ಪತ್ರಿಕೆಗೆ ಬರೋಬರಿ ಒಳ್ಳೆ ವ್ಯಾಪಾರ ಆಗಿತ್ತು. ಪ್ರತಿಕ್ರಿಯೆಗೆ ಪ್ರತಿಕ್ರಿಯೆ, ಮತ್ತೆ ಬರೆಯುವುದು, ಮತ್ತೆ ವಾದ-ವಿವಾದ. ಇದೇವಿಷಯ ಮೂರು ನಾಲ್ಕುವಾರ ಓಡಿ ಹಾಕಿಸಿದ ಪ್ರಿ೦ಟೆಲ್ಲಾ ಖರ್ಚಾಯಿತು. ಬಹುಶ ಆಗಿನಕಾಲದಲ್ಲಿ ಇ೦ಟರ್ನೆಟ್ ಇದ್ದಿದ್ದರೆ 36214http://kannada.oneindia.com/img/2009/04/25-swarnagowri-venkatesh1.jpg136020softwareಚಂದ್ರನ ಮೇಲೆ ಸೈಟುಗಳು ಮಾರಾಟಕ್ಕಿವೆ!/column/humor/2009/0520-sites-for-sale-chandrayaan-after-effects.htmlಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.* ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರುಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು 36771http://kannada.oneindia.com/img/2009/05/20-moon-smiling1.jpg127217recessionಪಬ್ ಬಾರ್‌ಗಳ ಕಿಕ್ ಇಳಿಸಿದ ಆರ್ಥಿಕ ಹಿಂಜರಿತ/news/2009/01/05/bar-crisis-in-bengaluru.htmlಬೆಂಗಳೂರು, ಜ. 5 : ಮುಗ್ಗರಿಸಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯಿಂದಾಗಿ ಕೆಲಸ ಕಳೆದುಕೊಳ್ಳುವಿಕೆ, ಸಂಬಳದಲ್ಲಿ ಕಡಿತ, ಕಂಪನಿಗಳ ಮುಚ್ಚುವಿಕೆಯಂಥ ಪ್ರತ್ಯಕ್ಷ ದುಷ್ಪರಿಣಾಮ ಉಂಟಾಗಿದ್ದರೆ ಪರೋಕ್ಷವಾಗಿ ಕುಡಿತದಿಂದ ಸರ್ವನಾಶವಾಗುತ್ತಿದ್ದ ಕುಟಂಬಗಳಿಗೆ ಮಾನಸಿಕ ನೆಮ್ಮದಿಯನ್ನು ತಂದಿದೆ.ಆರ್ಥಿಕ ಸಂಕಷ್ಟದಿಂದಾಗಿ ಕುಡುಕರು ಎಚ್ಚೆತ್ತಿರುವುದರಿಂದ ಬೆಂಗಳೂರಿನ ಬಾರ್ ಮತ್ತು ಪಬ್ ಮಾಲಿಕರು ಬಾಯಿಬಡಿದುಕೊಳ್ಳುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮದ್ಯ ಮಾರಾಟದ ಪ್ರಮಾಣ ಶೇ.40ಕ್ಕೂ ಹೆಚ್ಚು 33894http://kannada.oneindia.com/img/2009/01/05-liquor.jpg127217recessionಸುದ್ದಿಗೋಷ್ಠಿಗಳಲ್ಲಿ ಒಣಹವೆಗೆ ಕ್ಷಣಗಣನೆ/movies/headlines/2009/01/13-count-down-for-dry-eve-parties-began-kfcc.htmlಕನ್ನಡ ಚಲನಚಿತ್ರಗಳಿಗೆ ಸಂಬಂಧಿಸಿದ ಪತ್ರಿಕಾಗೋಷ್ಠಿ, ಆಡಿಯೋ ಕ್ಯಾಸೆಟ್ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಸಂಜೆ ಹೊತ್ತು ಇಟ್ಟುಕೊಳ್ಳಬಾರದು ಎಂಬ ವಾಣಿಜ್ಯ ಮಂಡಳಿಯ ಆದೇಶ ಜಾರಿಯಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 1 ನೇ ತೇದಿಯಿಂದಲೇ ಜಾರಿಗೆ ಬರಬೇಕಾಗಿದ್ದ ಈ ಆದೇಶ ಕಾರಣಾಂತರಗಳಿಂದ 15ನೇ ತಾರೀಖಿಗೆ ಮುಂದೂಡಲಾಗಿತ್ತು. ವಾಣಿಜ್ಯ ಮಂಡಳಿ ಮತ್ತೆ ಮನಸ್ಸು ಬದಲಾಯಿಸದಿದ್ದರೆ, ಇದೇ ಗುರುವಾರ ಉತ್ತರಾಯಣ ಪುಣ್ಯಕಾಲದ ಆರಂಭದಿಂದ 34046http://kannada.oneindia.com/img/2009/01/13-kcn-chandrashekar2.jpg127217recessionನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg127217recessionರಾಕ್ ಲೈನ್ ನಿರ್ಮಾಣದಲ್ಲಿ ಮೂರು ಚಿತ್ರಗಳು/movies/studio/2009/02/19-rockline-venkatesh-starts-two-new-films.htmlಸದ್ದಿಲ್ಲದಂತೆ ರಾಕ್ ಲೈನ್ ವೆಂಕಟೇಶ್ ರ ಎರಡು ಹೊಸ ಚಿತ್ರಗಳು ವಾರದ ಹಿಂದೆಯೇ ಸೆಟ್ಟೇರಿವೆ. ರಾಕ್ ಲೈನ್ ರ ಎರಡು ಚಿತ್ರಗಳ ನಾಯಕರಾಗಿ ವಿಜಯ್ ಮತ್ತು ದಿಗಂತ್ ನಟಿಸುತ್ತಿದ್ದಾರೆ. ಈ ಚಿತ್ರಗಳ ನಾಯಕಿ ಪಾತ್ರಕ್ಕೆ ಹುಡುಕಾಟ ಆರಂಭವಾಗಿದೆ. ಮಾಧ್ಯಮದವರ ಹಂಗ್ಯಾಕೆ ಎಂದು ರಾಕ್ ಲೈನ್ ವೆಂಕಟೇಶ್ ಒಂಚೂರು ಸುಳಿವು ಕೊಡದೆ ಈ ಎರಡು ಚಿತ್ರಗಳ 34752http://kannada.oneindia.com/img/2009/02/19-rockline-venkatesh1.jpg127217recessionಬೆಂಗಳೂರಿನಲ್ಲಿ ಟೊಯೋಟಾ ಸಣ್ಣ ಕಾರು ಘಟಕ/lifestyle/automobiles/2009/0224-toyota-small-car-plant-in-bengaluru.htmlಯಾವುದೇ ಮಾತುಕತೆ ನಡೆಯುತ್ತಿರಲಿ, ಅದು ಕೊನೆಗೆ ಆರ್ಥಿಕ ಬಿಕ್ಕಟ್ಟಿನೆಡೆಗೇ ಬಂದು ನಿಲ್ಲುತ್ತದೆ. ಇದು ಆಟೋಮೊಬೈಲ್ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಷಾರಾಮಿ ಅನ್ನುವ ಮಾತು ನೇಪಥ್ಯಕ್ಕೆ ಸರಿದಿದ್ದು ಎಲ್ಲ ಕಾರು ತಯಾರಿಕಾ ಕಂಪನಿಗಳು ಸಣ್ಣ ಕಾರುಗಳ ತಯಾರಿಕೆಯತ್ತ ಗಮನ ಹರಿಸಿವೆ. ಆರ್ಥಿಕ ಸಂಕಷ್ಟ ಕಾರಿನ ಇಗ್ನೀಷನ್ ಕೀ ಶುರು ಮಾಡುವ ಮೊದಲೇ ಇಂಜಿನ್ನಿಗೆ ಬಿಸಿ ಮುಟ್ಟಿಸಿದೆ.ಟೊಯೋಟಾ ಕಂಪನಿ ಕೂಡ ಇದಕ್ಕೆ 34833http://kannada.oneindia.com/img/2009/02/24-toyota-small-car1.jpg108913ಆರ್ಥಿಕ ಬಿಕ್ಕಟ್ಟುಆರ್ಥಿಕ ಬಿಕ್ಕಟ್ಟಿನಲ್ಲೂ ಬಾಲಿವುಡ್ ಜೂಜಾಟ/movies/bollywood/2008/12/10-bollywood-gamble-economic-crisis-sharukh-khan.htmlಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಎಷ್ಟೊ ದೊಡ್ಡ ದೊಡ್ಡ ಬ್ಯಾನರ್ ಸಿನಿಮಾಗಳು ಶೂಟಿಂಗ್ ಗೆ ಪ್ಯಾಕ್ ಅಪ್ ಹೇಳಿ ಪ್ರಾಜೆಕ್ಟ್ ಮುಂದೂಡಿದ್ದು ಈಗ ಹಳೆ ಸುದ್ದಿ. ಇದಕ್ಕೆ ಪೂರಕವಾಗಿ ಸಾಲು ಸಾಲಾಗಿ ಕಳಪೆ ಚಿತ್ರಗಳು ತೆರೆಯ ಮೇಲೆ ಹೀಗೆ ಬಂದು ಹೋಗಲಾರಂಭಿಸಿರುವುದು ಬಾಲಿವುಡ್ ಮಂದಿಗೆ ಚಿಂತೆಯ ವಿಷಯವಾಗಿದೆ. ಮುಂಬೈ ಭಯೋತ್ಪಾದನೆ ದಾಳಿಯ ನಂತರ ಮತ್ತೆ ಸಹಜ ಸ್ಥಿತಿಗೆ ಕನಸಿನ 33342http://kannada.oneindia.com/img/2008/12/amir-khan-ghajini1.jpg108913ಆರ್ಥಿಕ ಬಿಕ್ಕಟ್ಟುಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpg108913ಆರ್ಥಿಕ ಬಿಕ್ಕಟ್ಟುಬಸವನಗುಡಿ ರಸ್ತೆಯಲ್ಲಿ ರಕ್ತಪಾತ!/nri/article/2009/0102-blood-stained-streets-of-bull-temple.htmlಪ್ರಪಂಚದ ಹಣಕಾಸು ಪರಿಸ್ಥಿತಿ ಕೆಟ್ಟು ಮೂರಾಬಟ್ಟೆಯಾಗುತ್ತಿರುವುದಕ್ಕೆ ಚಪ್ಪರ ಶಾಸ್ತ್ರ ಆಗಿದ್ದು ಇದೇ ರಸ್ತೆಯಲ್ಲಿ. ಡಾಲರುಗಳ ಮತ್ತು ನಮ್ಮ ರೂಪಾಯಿಗಳ ಮಾರಣಹೋಮಕ್ಕೆ ಸಾಕ್ಷಿಯಾದ ಈ ರಕ್ತಸಿಕ್ತ ಬಸವನಗುಡಿ ರಸ್ತೆಯಲ್ಲಿ ಒಂದು ಹಿಮ್ಮುಖ ನಡಿಗೆ..* ಮಲ್ಲಿ ಸಣ್ಣಪ್ಪನವರ್, ನ್ಯೂಯಾಕ್೯ಹೊಸ ವಷ೯ಕ್ಕೆ ಸ್ವಾಗತ ಕೋರುತ್ತಾ ಹಾಗೂ 2008 ವಷ೯ಕ್ಕೆ ದೊಡ್ಡ ನಮಸ್ಕಾರ ಹಾಕುತ್ತಾ ಇಡೀ ಅಮೆರಿಕಾ ತಲೆ ಮೇಲೆ ಕೈ ಇಟ್ಟುಕೊಂಡು 33831http://kannada.oneindia.com/img/2009/01/02-wallstreet-malli1.jpg108913ಆರ್ಥಿಕ ಬಿಕ್ಕಟ್ಟುಹೈದರಾಬಾದಿನಲ್ಲಿ ಸತ್ಯಂ ಸುದ್ದಿಗೋಷ್ಠಿ/news/2009/01/08/satyams-damage-control-news-conf-interim-ceo-ram.htmlಹೈದರಾಬಾದ್, ಜ. 8 :7 ಸಾವಿರ ಕೋಟಿ ರೂ ಕಾರ್ಪೋರೇಟ್ ಹಗರಣದಲ್ಲಿ ಸಿಲುಕಿ ತೊಳಲಾಡುತ್ತಿರುವ ಸತ್ಯಂ ಕಂಪ್ಯೂಟರ್ಸ್ ಕಂಪನಿ ಇಂದು ಸಂಜೆ ಸಾರ್ವಜನಿಕರ ಮುಂದೆ ಪ್ರತ್ಯಕ್ಷವಾಯಿತು.ಹೈದರಾಬಾದಿನಲ್ಲಿ ಗುರುವಾರ ಸಂಜೆ 5 ಗಂಟೆಗೆ ಕಂಪನಿಯ ವಕ್ತಾರರು ಪತ್ರಿಕಾಗೋಷ್ಠಿ ನಡೆಸಿದರು. ಗೋಷ್ಠಿಯ ಮುಖ್ಯಾಂಶಗಳು ಕೆಳಕಂಡಂತಿವೆ :*ಪತ್ರಿಕಾಗೋಷ್ಠಿ ಗುರುವಾರ ಸಂಜೆ 5 ಗಂಟೆಗೆ ಸತ್ಯಂ ಕಂಪ್ಯೂಟರ್ಸ್ ನ ಪ್ರಧಾನ ಕಾರ್ಯಾಲಯದಲ್ಲಿ ಆರಂಭವಾಯಿತು.*ಸತ್ಯಂ 33967http://kannada.oneindia.com/img/2009/01/08-ram-mynampati1e.jpg108913ಆರ್ಥಿಕ ಬಿಕ್ಕಟ್ಟುಆರ್ಥಿಕ ಬಿಕ್ಕಟ್ಟು ಮೆಟ್ಟಿ ನಿಂತ ನಾನು ಗಾಂಧಿ/movies/headlines/2009/02/11-naanu-gandhi-completes-fifty-days.html*ಜಯಂತಿಸಿನಿಮಾ ರಿಸೆಷನ್ನಿನ ಕಾಲದಲ್ಲೂ ನಾನು ಗಾಂಧಿ ಹಾಫ್ ಸೆಂಚುರಿ ಬಾರಿಸಿದೆ. ಅರ್ಥಾತ್ ಐವತ್ತು ದಿನ ಓಡಿದೆ. ನಂಜುಂಡೇಗೌಡರು ಈ ಸಂತೋಷವನ್ನು ಊಟ ಹಾಕಿಸುವ ಮೂಲಕ ಹಂಚಿಕೊಂಡರು. ಊಟದ ನಡುವೆ ನೆಂಚಿಕೊಳ್ಳಲು ಪುಕ್ಕಟೆ ಸಲಹೆಗಳನ್ನು ಕೊಟ್ಟರು. ಅವುಗಳ ಸಣ್ಣ ಪಟ್ಟಿ ಹೀಗಿದೆ.1. ಮಕ್ಕಳ ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಮಕ್ಕಳ ಸಮಿತಿಯೇ ಇರಬೇಕು.2. ಚಿತ್ರಮಂದಿರಗಳು ಮಕ್ಕಳ ಸಿನಿಮಾಗೆ 34596http://kannada.oneindia.com/img/2009/02/11-naanugandhi1.jpgnews"> ಸತ್ಯಂನಲ್ಲಿ ಉದ್ಯೋಗ ಕಡಿತ : ಕೇಂದ್ರದ ಕೆಂಗಣ್ಣು | Satyam | Recession | Job cut | Tech Mahindra | Salman Khursheed - ಸತ್ಯಂನಲ್ಲಿ ಉದ್ಯೋಗ ಕಡಿತ : ಕೇಂದ್ರದ ಕೆಂಗಣ್ಣು - Kannada Oneindia

ಸತ್ಯಂನಲ್ಲಿ ಉದ್ಯೋಗ ಕಡಿತ : ಕೇಂದ್ರದ ಕೆಂಗಣ್ಣು

ನವದೆಹಲಿ, ಜೂ 2 : ಕೋಟ್ಯಂತರ ರುಪಾಯಿ ಅವ್ಯವಹಾರಕ್ಕೆ ತುತ್ತಾಗಿ ಚೇತರಿಸಿಕೊಳ್ಳುತ್ತಿರುವ ಸಾಫ್ಟ್ ವೇರ್ ಕಂಪನಿ ಸತ್ಯಂನಲ್ಲಿ ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡಲು ಕೇಂದ್ರ ಸರಕಾರಕ್ಕೆ ಅಧಿಕಾರವಿದೆಯೇ? ಅಥವಾ ಹಸ್ತಕ್ಷೇಪ ಮಾಡುತ್ತಿರುವುದು ಸರಿಯೆ? ಎಂಬ ಜಿಜ್ಞಾಸೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸತ್ಯಂ ಕಂಪನಿಯಲ್ಲಿ 10 ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳು ಕಂಪನಿಗೆ ಭಾರವಾಗಿದ್ದು ಅವರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಸತ್ಯಂ ಕಂಪನಿಯ ಸಾಫ್ಟ್ ವೇರ್ ವಿಭಾಗವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಟೆಕ್ ಮಹೀಂದ್ರ ಘೋಷಿಸಿರುವ ಹಿನ್ನೆಲೆಯಲ್ಲಿ ನೌಕರನ್ನು ಕಾಪಾಡಲು ಕೇಂದ್ರ ಸರಕಾರ ಮುಂದಾಗಿದೆ. ಕಾರ್ಪೋರೇಟ್ ವ್ಯವಹಾರಗಳ ಸಚಿವ ಸಲ್ಮಾನ್ ಖರ್ಷೀದ್ ಅವರು ನೌಕರರನ್ನು ತೆಗೆದುಹಾಕಲು ಬಿಡುವುದಿಲ್ಲ ಎಂದು ಹೇಳಿದ್ದರಿಂದ ಸರಕಾರದ ಹಸ್ತಕ್ಷೇಪದ ಪ್ರಶ್ನೆ ಉದ್ಭವಿಸಿದೆ.

ಮಾರ್ಕೆಟಿಂಗ್, ಮಾನವ ಸಂಪನ್ಮೂಲ, ಆಡಳಿತ ವಿಭಾಗದಲ್ಲಿನ ಸುಮಾರು 8 ಸಾವಿರದಿಂದ 10 ಸಾವಿರದವರೆಗೆ ನೌಕರರನ್ನು ಕೆಲಸದಿಂದ ಸತ್ಯಂ ತೆಗೆದುಹಾಕುತ್ತಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಖುರ್ಷೀದ್, ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕಣ್ಣುಮುಚ್ಚಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸತ್ಯಂ ಕಂಪನಿಯ ಸ್ಥಾಪಕ ರಾಮಲಿಂಗ ರಾಜು ಕೋಟ್ಯಂತರ ರುಪಾಯಿ ಪಂಗನಾಮ ಹಾಕಿ ಸಾವಿರಾರು ನೌಕರರನ್ನು ಸಂಕಷ್ಟಕ್ಕೆ ದೂಡಿದಾಗ ಸರಕಾರ ಮಧ್ಯಸ್ಥಿಕೆ ವಹಿಸಿ ಕಂಪನಿಯನ್ನು ಮತ್ತು ನೌಕರರನ್ನು ಪಾರು ಮಾಡಲು ಮುಂದಾಗಿದ್ದು ಸರಿ. ಆದರೆ, ಕಂಪನಿಯ ನೌಕರರನ್ನು ಕಾಪಾಡಲು ಮತ್ತು ಅವರನ್ನು ಕೆಲಸದಿಂದ ತೆಗೆದುಹಾಕಲಾಗದಂತೆ ತಡೆಯಲು ಪ್ರಯತ್ನಿಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ.

ಸರಕಾರ ಹಸ್ತಕ್ಷೇಪ ಮಾಡಬಾರದು ಎಂದು ಐಟಿ ಪರಿಣತರು ಹೇಳುತ್ತಿದ್ದಾರೆ. ಉದ್ಯೋಗ ಕಡಿತ ಸಂಪೂರ್ಣ ಕಂಪನಿಯ ವಿವೇಚನೆಗೆ ಬಿಟ್ಟಿದ್ದು, ಅದು ಸರಕಾರದ ವ್ಯವಹಾರವೇ ಅಲ್ಲ ಎಂಬುದು ಮೊದಲನೆಯ ವಾದ. ಎರಡನೆಯದಾಗಿ, ಸಾಫ್ಟ್ ವೇರ್ ಇಂಜಿನಿಯರೇ ಇರಲಿ, ಮಾರ್ಕೆಟಿಂಗ್ ಕ್ಷೇತ್ರದಲ್ಲೇ ಇರಲಿ ನೌಕರರಿಗೆ ಬೇರೆ ಕಂಪನಿಗಳಲ್ಲಿ ನೌಕರಿ ಸಿಕ್ಕೇ ಸಿಗುತ್ತದೆ, ಸಂಬಳ ಕಡಿಮೆಯಿದ್ದರೂ ಸಹ. ಅಂಥವರನ್ನು ಕಾಪಾಡಲು ಮುಂದಾಗಿ ಗೊಂದಲಕ್ಕೆ ಸರಕಾರ ದೂಡಬಾರದು. ಮೂರನೆಯದಾಗಿ, ಸರಕಾರ ಕಂಪನಿಯಲ್ಲಿ ಬಂಡವಾಳ ಹೂಡಿಲ್ಲ.

ಆಡಳಿತ ಮಂಡಳಿಯಲ್ಲಿದ್ದ ಸರಕಾರದ ಪ್ರತಿನಿಧಿ ಕಂಪನಿಯನ್ನು ಸಂಕಷ್ಟದಿಂದ ಹೊರತರಲು ಪ್ರಯತ್ನಿಸಿದ್ದರೂ ನಂತರ ಕಂಪನಿಗೆ ಯಾವುದೇ ಪ್ರತಿಷ್ಠಿತ ಸರಕಾರಿ ಯೋಜನೆಗಳನ್ನು ನೀಡಿಲ್ಲ. ಟೆಕ್ ಮಹೇಂದ್ರ ವ್ಯವಹಾರದಲ್ಲೂ ಹಸ್ತಕ್ಷೇಪ ಮಾಡುವುದು ಸಲ್ಲ ಎಂಬುದು ಐಟಿ ಪರಿಣತ ಅಭಿಮತ. ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ಕೆಲಬಾರಿ ಆಡಳಿತ ಮಂಡಳಿಯಲ್ಲಿನ ಸರಕಾರದ ಪ್ರತಿನಿಧಿ ನಿರ್ಧಾರ ತೆಗೆದುಕೊಳ್ಳುತ್ತಾರಾದರೂ ಅದು ವಿರಳ.

ಸತ್ಯಂ ಮಾತ್ರವಲ್ಲ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ಅನೇಕ ಕಂಪನಿಗಳು ಖರ್ಚುವೆಚ್ಚಗಳನ್ನು ಸರಿದೂಗಿಸಲು ನೌಕರರನ್ನು ತೆಗೆದುಹಾಕುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಅದು ಸಹಜ ಕೂಡ. ಆ ಕಂಪನಿಗಳ ವ್ಯವಹಾರದಲ್ಲಿ ಅಥವಾ ನೌಕರರನ್ನು ಕಾಪಾಡುವಲ್ಲಿ ಯಾವ ಸರಕಾರಗಳೂ ಹಸ್ತಕ್ಷೇಪ ಮಾಡಿಲ್ಲ. ಹೀಗಿದ್ದಾಗ, ಸತ್ಯಂ ಕಂಪನಿಯಲ್ಲಿ ಸರಕಾರವೇಕೆ ಕೈಯಾಡಿಸಬೇಕು?

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+