ಶೇ. 50ರ ರಿಯಾಯ್ತಿಯಲ್ಲಿ ಅಟಲ್ ಸಾರಿಗೆ
ಬೆಂಗಳೂರು,
ಮೇ. 30 : ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿಗಳು ಹಾಗೂ ಬಡವರ್ಗದ ಜನರಿಗೆ ಕೊಡುಗೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಕೊಳಗೇರಿ ಹಾಗೂ ಕೆಳ ವರ್ಗದ ಜನರಿಗೆ ರಿಯಾಯಿತಿ ದರದಲ್ಲಿ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಲು ಅಟಲ್ ಸಾರಿಗೆ ಹೆಸರಿನ 25 ಬಸ್ ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದರು. ಇದಕ್ಕಾಗಿ ವಿಶೇಷ ಮಿನಿ ಬಸ್ ಗಳನ್ನು ವಿನ್ಯಾಸಗೊಳಿಸಲಾಗಿದ್ದು, ಪ್ರಯಾಣ ದರದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಅವರು ಹೇಳಿದರು. id="toptextpromo">ಭಾನುವಾರ
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಿದ್ಧಗೊಳ್ಳುತ್ತಿರುವ ವೇದಿಕೆ ಹಾಗೂ ವಸ್ತು ಪ್ರದರ್ಶನ ಮಳಿಗೆಯ ಕಾಮಗಾರಿಯನ್ನು ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮೊದಲ ಹಂತದಲ್ಲಿ 25 ಬಸ್ ಸಂಚರಿಸಲಿವೆ. ಜನರ ಪ್ರತಿಕ್ರಿಯೆ ನೋಡಿಕೊಂಡು ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಸರಕಾರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವುದು ಸಮಾವೇಶದ ಉದ್ದೇಶವಾಗಿದೆ ಎಂದು ಅಶೋಕ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications