ಪಿಎಂ ಅಭ್ಯರ್ಥಿ ಮಾಧ್ಯಮದ ಸೃಷ್ಟಿ : ಮೋದಿ

ಮೋದಿ ಅವರನ್ನು ಮುಂದಿನ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎನ್ ಡಿಎ ಸೋಲಿಗೆ ಕಾರಣವಾಗಿದೆ ಎಂದು ಜೆಡಿಯು ಮುಖಂಡ ಹಾಗೂ ಎನ್ ಡಿಎ ಸಂಚಾಲಕ ಶರದ್ ಯಾದವ್ ಆರೋಪಕ್ಕೆ ಮೋದಿ ಉತ್ತರ ನೀಡಿದ್ದಾರೆ. ನನಗೆ ಗುಜರಾತಿನ ಅಭಿವೃದ್ಧಿ ಮುಖ್ಯ. ಅದರ ಕಡೆಗೆ ನಾನು ಹೆಚ್ಚು ಗಮನ ಹರಿಸಿದ್ದೇನೆ. ನಾನು ಎಂದಿಗೂ ಪ್ರಧಾನಿ ಅಭ್ಯರ್ಥಿ ಎಂದು ಹೇಳಿಲ್ಲ. ಮಾಧ್ಯಮದವರೆ ಈ ಸುದ್ದಿಯನ್ನು ಹಬ್ಬಿಸಿದ್ದಾರೆ ಎಂದು ಮೋದಿ ಆರೋಪಿಸಿದರು.
ಎನ್ ಡಿಎಗೆ ಈ ಲೋಕಸಭೆ ಚುನಾವಣೆಯಲ್ಲಿ ಸೋತಿದೆ. ಜನಾದೇಶವನ್ನು ನಾವು ಸ್ವೀಕರಿಸುತ್ತೇವೆ. ಚುನಾವಣೆಗಳು ಇಂದಿಗೆ ಮುಗಿದಿಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೆ ನಾವು ಎದ್ದು ಬರುತ್ತೇವೆ. ನಾವು ಆಶಾವಾದಿಗಳು. ಸೋಲಿಗೆ ಕಾರಣ ಹುಡುಕುತ್ತೇವೆ. ಇನ್ನೊಂದು ಸಾರಿ ತಪ್ಪಾಗದಂತೆ ಮುನ್ನೆಚ್ಚರಿಕೆ ವಹಿಸಿ ಚುನಾವಣೆ ಎದುರಿ ಗೆಲುವು ಸಾಧಿಸುತ್ತೇವೆ ಎಂದು ಮೋದಿ ಹೇಳಿದರು.
(ಏಜನ್ಸೀಸ್)
ಎನ್ ಡಿಎ ಸೋಲಿಗೆ ವರುಣ್ ಕಾರಣ: ಶರದ್
ಚುನಾವಣೆ : ಅಭಿಪ್ರಾಯ ತಪ್ಪಿದ್ದೆಲ್ಲಿ ಸರಿಯಾಗಿದ್ದೆಲ್ಲಿ?
ಮೋದಿ ಪಿಎಂ ಹೇಳಿಕೆ ಸೋಲಿಗೆ ಕಾರಣ, ಬಿಜೆಡಿ












Click it and Unblock the Notifications