233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg389816rajeev chandrasekharರಾಷ್ಟ್ರೀಯ ಪ್ರಣಾಳಿಕೆಗೆ ರಾಜೀವ್ ಚಂದ್ರಶೇಖರ್ ಒತ್ತು/news/2009/03/24/india-need-national-manifesto-rajeev-chandrasekhar.htmlಬೆಂಗಳೂರು, ಮಾ. 24 : ರಾಷ್ಟ್ರಕ್ಕೆ ಬೇಕಾಗಿರುವುದು ಬೇರೆ ಬೇರೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಬೇಕಾಗಿರುವುದು ರಾಷ್ಟ್ರೀಯ ಪ್ರಣಾಳಿಕೆ ಎಂದು ರಾಜ್ಯಸಭೆ ಸದಸ್ಯ ಮತ್ತು ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿನ ಮಾಜಿ ಅಧ್ಯಕ್ಷ, ಕರ್ನಾಟಕದ ರಾಜಕಾರಣಿ ರಾಜೀವ್ ಚಂದ್ರಶೇಖರ್ ಅವರ ಸ್ಪಷ್ಟ ಅಭಿಪ್ರಾಯ.ಭಾರತ ದೇಶ ಆರ್ಥ ವ್ಯವಸ್ಥೆ, 35482http://kannada.oneindia.com/img/2009/03/24-rajeev-chandrasekhar1.jpg389816rajeev chandrasekharಚುನಾವಣೆ : ಅಭಿಪ್ರಾಯ ತಪ್ಪಿದ್ದೆಲ್ಲಿ ಸರಿಯಾಗಿದ್ದೆಲ್ಲಿ?/news/2009/05/17/rajeev-chandrasekhar-predictions-right-and-wrong.html15ನೇ ಲೋಕಸಭೆ ಚುನಾವಣೆ ನಡೆಯುವ ಮುನ್ನವೇ ಕೆಲ ರಾಜಕೀಯ ಪಂಡಿತರ ಮತ್ತು ಕೆಲವು ನನ್ನ ಅಭಿಪ್ರಾಯಗಳನ್ನು, ಮುನ್ಸೂಚನೆಗಳನ್ನು ಇಲ್ಲಿ ಬರೆದಿದ್ದೆ. ಅವುಗಳಲ್ಲಿ ಅನೇಕವು ಸುಳ್ಳಾಗಿವೆ. ಈಗ ನಮ್ಮ ಯಾವು ಅಭಿಪ್ರಾಯಗಳು ಸರಿಯಾಗಿವೆ ಮತ್ತು ಎಲ್ಲಿ ತಪ್ಪಿವೆ ಎಂಬುದನ್ನು ವಿಮರ್ಶಿಸೋಣ.* ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ1. ಸಂಸತ್ತಿನಲ್ಲಿ ಯಾವ ಪಕ್ಷ ಅಥವಾ ಮೈತ್ರಿಕೂಟ ಸಂಪೂರ್ಣ ಬಹುಮತ ಪಡೆಯುವುದಿಲ್ಲ. - 36708http://kannada.oneindia.com/img/2009/05/17-rajeev-chandrasekhar1.jpg389816rajeev chandrasekharಪ್ರವಾಹ ನಿಧಿಗೆ ಐಟಿ ದೇಣಿಗೆ ಸಭೆ/news/2009/10/21/corporates-meet-bsy-for-flood-relief-planing.htmlಬೆಂಗಳೂರು, ಅ. 21: ಬೆಂಗಳೂರಿನ ಐಟಿ ಬಿಟಿ ಇಟೇಸ್ ಕಾರ್ಪೋರೇಟ್ ಕಚೇರಿಗಳಿಂದ ನೆರೆ ಪರಿಹಾರಕ್ಕೆ ದೇಣಿಗೆಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಗುರುವಾರ ಅ 22 ರಂದು ನಗರದಲ್ಲಿ ಮಹತ್ವದ ಸಭೆ ಏರ್ಪಡಿಸಲಾಗಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಕಾರ್ಪೋರೇಟ್ ಕಚೇರಿಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.ಐಟಿ ಬಿಟಿ ನೌಕರರು ಮತ್ತು ಆಡಳಿತ ವರ್ಗ ಯಾವ ರೀತಿಯಲ್ಲಿ ನೆರವಿನ ಹಸ್ತ ಚಾಚಬಹುದು ಎಂಬ 39768http://kannada.oneindia.com/img/2009/10/21-rajeev-chandrasekhar1.jpg389816rajeev chandrasekharಶ್ರೀಸಾಮಾನ್ಯನಿಗೆ ನಮ್ಮ ಬೆಂಗಳೂರು ಪ್ರಶಸ್ತಿ/news/2009/10/23/namma-bengaluru-awards-for-unsung-heros.htmlಬೆಂಗಳೂರು, ಅ. 23 : ಸಮಾಜದಲ್ಲಿ ಸಾಕಷ್ಟು 'ಸೇವೆ' ಸಲ್ಲಿಸಿದ ಅನೇಕರಿಗೆ ಅನೇಕಾನೇಕ ಪ್ರಶಸ್ತಿಗಳು ತಾವೇ ಹುಡುಕಿಕೊಂಡು ಬರುತ್ತವೆ ಮತ್ತು ಕೆಲವರಿಗೆ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುವ ಚಾಣಾಕ್ಷತನವೂ ಗೊತ್ತಿರುತ್ತದೆ. ಆದರೆ, ನಿಸ್ವಾರ್ಥದಿಂದ, ಯಾವುದೇ ಲಾಭಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುವವರು ಎಲೆಮರೆ ಕಾಯಿಯಾಗಿಯೇ ಉಳಿದುಬಿಡುತ್ತಾರೆ. ಅಂಥವರಿಗೆ ಪ್ರಶಸ್ತಿಯನ್ನು ಬೆನ್ನತ್ತುವ ಚಾಕಚಕ್ಯತೆಯೂ ಗೊತ್ತಿರುವುದಿಲ್ಲ, ಅದು ಅವರಿಗೆ ಬೇಕಾಗಿಯೂ ಇರುವುದಿಲ್ಲ.ಅಂಥ, ಅಸಾಮಾನ್ಯ ಸೇವೆ 39837http://kannada.oneindia.com/img/2009/10/23-namma-bengaluru-award1.jpg99736karnatakaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg99736karnatakaಸಾರಿನ ಪುಡಿ, ಮೆಣಸಿನ ಪುಡಿ, ಖಾರದಪುಡಿ/recipe/shelf/2006/311006chilli_powder.htmlಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆ ವಿಧಾನ ಇಲ್ಲಿದೆ.ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ 6224http://kannada.oneindia.com/img/2009/07/14-redchillies1.jpg99736karnatakaಗೋಕಾಕ್‌ ಕನ್ನಡದ ಪೀಕಾಕ್‌/literature/jnanapeetha/2001/gokak.htmlಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು ಎಂದವರು ಎಲ್ಲವೂ ಆಗಿದ್ದು ಎಲ್ಲಿಯೂ ನಿಲ್ಲದಂತಿದ್ದರು. *ಸತ್ಯವ್ರತ ಹೊಸಬೆಟ್ಟುವಿನಾಯಕ ಕೃಷ್ಣ ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕರು ಹುಬ್ಬೇರಿಸಿದ್ದುಂಟು. ವೈಎನ್ಕೆಯವರಂತೂ ಜ್ಞಾನವಿರುವುದು ಪೀಠದಲ್ಲಲ್ಲ , but at the other end ಎಂದು ಗೇಲಿ ಮಾಡಿದ್ದೂ ಉಂಟು. ಇದು ತನ್ನನ್ನು ಕುರಿತಾದ ತಮಾಷೆ 7766http://kannada.oneindia.com/img/2009/08/03-vk-gokak4.jpg99736karnatakaಸಂಜೆಯ ರಂಗಿಗೆ ಬಿಯರ್‌/ಬೌಲಿಂಗ್‌ ಜೊತೆಗೆ ಶಾಪಿಂಗ್‌/news/2002/05/03/bang_bowl.htmlಬೆಂಗಳೂರಿನ ಕವಲುಗಳು ಅಗಲಗೊಳ್ಳುತ್ತಿದ್ದರೆ ಸಂಜೆಯ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಈ ಸಂಜೆ ಎಲ್ಲಿಗೆ ಹೋಗುವುದು : ಬಿಡುವಿದೆ, ಕಿಸೆಯಲ್ಲಿ ಕಾಸೂ ಇದೆ. ಸಮಸ್ಯೆ ಅದಲ್ಲ - ನೆಮ್ಮದಿ ಹಾಗೂ ಖುಷಿ ಕೊಡುವ ಜಾಗೆಗಳ ಆಯ್ಕೆ ಯಾವತ್ತಿಗೂ ತಲೆ ನೋವಿನ ಸಮಸ್ಯೆಯೇ. ಇದರೊಂದಿಗೆ ಸಾರಿಗೆ ಕಿರಿಕಿರಿ ಬೇರೆ. ಇದರಿಂದಾಗಿ- ರಾಮ ರಾಮ ಸಾಕಪ್ಪಾ ಸಾಕು, ಎಲ್ಲಿಗೆ ಹೋಗುವುದೂ ಬೇಡ, ಮನೆಯೇ 22001http://kannada.oneindia.com/img/2009/06/22-beer-mug1.jpg99736karnatakaಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpgnews"> ಚುನಾವಣೆ : ಅಭಿಪ್ರಾಯ ತಪ್ಪಿದ್ದೆಲ್ಲಿ ಸರಿಯಾಗಿದ್ದೆಲ್ಲಿ? | Elections 2009: India – An Amazing democracy! - ಚುನಾವಣೆ : ಅಭಿಪ್ರಾಯ ತಪ್ಪಿದ್ದೆಲ್ಲಿ ಸರಿಯಾಗಿದ್ದೆಲ್ಲಿ? - Kannada Oneindia

ಚುನಾವಣೆ : ಅಭಿಪ್ರಾಯ ತಪ್ಪಿದ್ದೆಲ್ಲಿ ಸರಿಯಾಗಿದ್ದೆಲ್ಲಿ?

Rajeev Chandrasekhar, Rajyasabha member
15ನೇ ಲೋಕಸಭೆ ಚುನಾವಣೆ ನಡೆಯುವ ಮುನ್ನವೇ ಕೆಲ ರಾಜಕೀಯ ಪಂಡಿತರ ಮತ್ತು ಕೆಲವು ನನ್ನ ಅಭಿಪ್ರಾಯಗಳನ್ನು, ಮುನ್ಸೂಚನೆಗಳನ್ನು ಇಲ್ಲಿ ಬರೆದಿದ್ದೆ. ಅವುಗಳಲ್ಲಿ ಅನೇಕವು ಸುಳ್ಳಾಗಿವೆ. ಈಗ ನಮ್ಮ ಯಾವು ಅಭಿಪ್ರಾಯಗಳು ಸರಿಯಾಗಿವೆ ಮತ್ತು ಎಲ್ಲಿ ತಪ್ಪಿವೆ ಎಂಬುದನ್ನು ವಿಮರ್ಶಿಸೋಣ.

* ರಾಜೀವ್ ಚಂದ್ರಶೇಖರ್, ರಾಜ್ಯಸಭಾ ಸದಸ್ಯ

1. ಸಂಸತ್ತಿನಲ್ಲಿ ಯಾವ ಪಕ್ಷ ಅಥವಾ ಮೈತ್ರಿಕೂಟ ಸಂಪೂರ್ಣ ಬಹುಮತ ಪಡೆಯುವುದಿಲ್ಲ. - ಸರಿ.

2. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಬಹುಮತ ಪಡೆಯುವುದಿಲ್ಲ. - ಸರಿ.

3. 2004ರ ಚುನಾವಣೆಗೆ ಹೋಲಿಸಿದರೆ ಯುಪಿಎ ಮೈತ್ರಿಕೂಟದ ಸಂಖ್ಯಾಬಲ ಕುಗ್ಗಲಿದೆ ಮತ್ತು ಎನ್ ಡಿಎ ತನ್ನ ಸಂಖ್ಯೆಗಳನ್ನು ವೃದ್ಧಿಸಿಕೊಳ್ಳಲಿದೆ. - ಸಂಪೂರ್ಣ ತಪ್ಪು.

4. ಯುಪಿಎ ಅಂಗಪಕ್ಷಗಳಾದ ಆರ್ ಜೆಡಿ, ಸಮಾಜವಾದಿ ಪಕ್ಷ ಮತ್ತು ಡಿಎಂಕೆ ಪಕ್ಷಗಳು 2004ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಸೀಟು ಮತ್ತು ಅಸ್ತಿತ್ವವನ್ನು ಗಮನಾರ್ಹವಾಗಿ ಕಳೆದುಕೊಳ್ಳಲಿವೆ. - ಆರ್ ಜೆಡಿ ಮತ್ತು ಎಸ್ಪಿ ಕುರಿತು ಊಹೆ ಸರಿಯಾಗಿದೆ. ಡಿಎಂಕೆ ಊಹೆ ತಪ್ಪಾಗಿದೆ.

5. ಎಡರಂಗ ಸಂಪೂರ್ಣ ಬುಡಮೇಲಾಗಲಿದೆ. ಸರಿ.

6. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯ ನಿರ್ವಹಣೆ ಸ್ಪಷ್ಟತೆಯಿಂದ ಕೂಡಿಲ್ಲ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತದೆ. ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಫಲಿತಾಂಶ ಕಾಂಗ್ರೆಸ್ ಹಣೆಬರಹವನ್ನು ನಿರ್ಧರಿಸಲಿದೆ. ಬಿಜೆಪಿಗೆ ಸಂಬಂಧಿಸಿದ ಅಭಿಪ್ರಾಯ ತಪ್ಪಾಗಿದೆ. ಆದರೆ ಯುಪಿ, ಆಂಧ್ರ ಮತ್ತು ರಾಜಸ್ಥಾನದ ಫಲಿತಾಂಶ ನಮ್ಮ ಅಭಿಪ್ರಾಯ ಸರಿಯಾಗಿಸಿದೆ.

7. ಈ ಚುನಾವಣೆ ಉತ್ತರ ಪ್ರದೇಶದ ರಾಜಕೀಯ ನಕ್ಷೆಯನ್ನೇ ಬದಲಾಯಿಸಲಿದೆ. ಅನೇಕ ವರ್ಷಗಳ ನಂತರ ಪ್ರಥಮ ಬಾರಿಗೆ ಎಸ್ಪಿ ಮತ್ತು ಬಿಎಸ್ಪಿಯ ಪ್ರಾಬಲ್ಯ ಕುಸಿಯಲಿದೆ ಮತ್ತು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿವೆ. - ತಪ್ಪು.

8. ಈ ಚುನಾವಣೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ರಾಜಶೇಖರ ರೆಡ್ಡಿ ಮತ್ತು ಓರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಹಣೆಬರಹ ನಿರ್ಧಾರವಾಗಲಿದೆ. ಆಂಧ್ರದಲ್ಲಿ ಕಾಂಗ್ರೆಸ್ ಮುಗ್ಗರಿಸಲಿದೆ ಮತ್ತು ಸರಕಾರ ರಚಿಸುವಲ್ಲಿ ಚಿರಂಜೀವಿ ಪ್ರಮುಖ ಪಾತ್ರ ವಹಿಸಲಿದ್ದಾರೆ. - ತಪ್ಪು. ಆಂಧ್ರದಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ.

9. ನವೀನ್ ಪಟ್ನಾಯಕ್ ಓರಿಸ್ಸಾದಲ್ಲಿ ಸರಳ ಬಹುಮತ ಪಡೆಯುವುದಿಲ್ಲ. ಸರಕಾರ ರಚಿಸಲು ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲಕ್ಕೆ ಬಿಜು ಜನತಾದಳ ಅಗಲಾಚಲಿದೆ. ಪ್ರತಿಯಾಗಿ ಬಿಜೆಡಿ ಕೇಂದ್ರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ನೀಡಲಿದೆ. - ತಪ್ಪು. ಓರಿಸ್ಸಾದಲ್ಲಿ ಬಿಜೆಡಿ ಸರಳ ಬಹುಮತ ಪಡೆದಿದೆ.

10. ಚುನಾವಣೆಯ ನಂತರ ಯಾವ ರಾಜಕೀಯ ಪಕ್ಷವನ್ನು, ಮೈತ್ರಿಕೂಟವನ್ನು ಸರಕಾರ ರಚಿಸಲು ಆಹ್ವಾನಿಸಬೇಕು ಎಂಬ ಬಗ್ಗೆ ರಾಷ್ಟ್ರಪತಿ ದ್ವಂದ್ವಕ್ಕೆ ಸಿಲುಕಲಿದ್ದಾರೆ. ಅತಿ ದೊಡ್ಡ ಪಕ್ಷವನ್ನು ಕರೆಯಬೇಕೋ ಅಥವಾ ಅತಿ ದೊಡ್ಡ ಚುನಾವಣಾಮುನ್ನ ಮೈತ್ರಿಕೂಟವನ್ನು ಕರೆಯಬೇಕೋ ಎಂಬ ಬಗ್ಗೆ ಅಧಿಕಾರವನ್ನು ಬಳಸುವ ಅಥವಾ ದುರ್ಬಳಸುವಂಥ ಪರಿಸ್ಥಿತಿ ಬರಲಿದೆ. - ಸಂಪೂರ್ಣ ತಪ್ಪು. ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

11. ಪ್ರಧಾನಿ ಯಾರಾಗಲಿದ್ದಾರೆ? ಈ ಪ್ರಶ್ನೆಗೆ ಅನೇಕ ಉತ್ತರಗಳು ಲಭಿಸಲಿವೆ. ಆದ್ದರಿಂದ ಫಲಿತಾಂಶ ಬರುವವರೆಗೆ ಕಾಯೋಣ. - ಉತ್ತರ ಸುಲಭವಾಗಿ ಲಭಿಸಿದೆ, ಮನಮೋಹನ ಸಿಂಗ್.

ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು ಮತ್ತು ಕಾಂಗ್ರೆಸ್ಸಿನ ಅದ್ಭುತ ಗೆಲುವಿನ ಬಗ್ಗೆ ಅನೇಕ ಮತ್ತು ವಿಭಿನ್ನ ವಿಶ್ಲೇಷಣೆಗಳು ಮತ್ತು ಸಿದ್ಧಾಂತಗಳು ಮಂಡನೆಯಾಗಲಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದ ಜನತೆ ಅತ್ಯಂತ ಸ್ಪಷ್ಟವಾಗಿ ಮತ್ತು ವಿಚಾರಪೂರ್ವಕವಾಗಿ ಸರಕಾರವನ್ನು ಆಯ್ಕೆ ಮಾಡಿದ್ದಾರೆ. ಈ ಜನಮತ ಹಿಂದಿನ ಅಂದರೆ 2004ರ ಚುನಾವಣೆಗಿಂತ ಬಲಿಷ್ಠವಾಗಿದೆ ಎಂಬುದು ಅತ್ಯಂತ ಪ್ರಶಂಸನೀಯ ಸಂಗತಿ. ಕಾಂಗ್ರೆಸ್ ಪಕ್ಷಕ್ಕೆ ಈಬಾರಿ ಕಡಿಮೆ ಮಿತ್ರಪಕ್ಷಗಳ ಬೆಂಬಲದ ಅಗತ್ಯವಿದೆ. ಮಿತ್ರಪಕ್ಷಗಳ ಹಂಗಿಲ್ಲದೆ ಮತ್ತು ಒತ್ತಡವಿಲ್ಲದೆ ಸರಕಾರ ಮುನ್ನಡೆಸುವ ಅವಕಾಶ ಯುಪಿಎ ಪಕ್ಷಕ್ಕೆ ಲಭಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+