ಭಾರಿ ಮುಖಭಂಗ ಅನುಭವಿಸಿದ ಕಟ್ಟಾಳುಗಳು
ಕೇಂದ್ರ ಗೃಹಸಚಿವ ಪಿ ಚಿದಂಬರಂ (ಕಾಂಗ್ರೆಸ್) ಅವರು ಎಐಎಡಿಎಂಕೆಯ ರಾಜ ಕಣ್ಣಪ್ಪ ವಿರುದ್ಧ 3,555 ಮತಗಳ ಅಂತರದಲ್ಲಿ ಶಿವಗಂಗೆ ಲೋಕಭೆ ಕ್ಷೇತ್ರದಿಂದ ಸೋಲನುಭವಿಸಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಗೆ ಗೇಟ್ ಪಾಸ್
ಪ್ರತಿಷ್ಠಿತ ಅನ್ನಿಸಿದ್ದ ಬಿಹಾರದ ಹಾಜಿಪುರ ಕ್ಷೇತ್ರದ ಸ್ಪರ್ಧಿರಾಮ್ ವಿಲಾಸ್ ಪಾಸ್ವಾನ್ ಸೋಲನುಭವಿಸಿದ್ದಾರೆ. ಜೆಡಿ(ಯು)ನ ರಾಮ್ ಸುಂದರ್ ದಾಸ್ ವಿರುದ್ಧ 25,000 ಮತಗಳ ಭಾರಿ ಅಂತರದಿಂದ ಸೋತಿದ್ದಾರೆ. ಬಿಹಾರದ ಮಾಜಿ ಮುಖ್ಯಮಂತ್ರಿಯಾಗಿದ್ದ ದಾಸ್ ರಾಜ್ಯ ರಾಜಕಾರಣದಲ್ಲಿ ಉತ್ತಮ ಹೆಸರು ಮಾಡಿದ್ದರು.
ದಕ್ಷಿಣ ಕನ್ನಡದಲ್ಲಿ ಪೂಜಾರಿಗೆ ಮಂಗಳಾರತಿ
ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ಮುಖಂಡ ಬಿ ಜನಾರ್ದನ ಪೂಜಾರಿ ಅವರು ಬಿಜೆಪಿಯ ನಳಿನ್ ಕುಮಾರ್ ಕಟೀಲ್ ವಿರುದ್ಧ 40,420ಮತಗಳ ಅಂತರದಿಂದ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ.
ಮೇನಕಾಗಾಂಧಿಯನ್ನು ಕೈಬಿಟ್ಟ ಮತದಾರ
ಅನೋಲ(ಉತ್ತರ ಪ್ರದೇಶ) ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಅಭ್ಯರ್ಥಿ ಮೇನಕಾ ಗಾಂಧಿ ಅವರನ್ನು ಸಮಾಜವಾದಿ ಪಕ್ಷದ ಧರ್ಮೇಂದ್ರ ಕಶ್ಯಪ್ ಪರಾಭವಗೊಳಿಸಿದ್ದಾರೆ.
ಪಂಚಮಹಲ್ಸ್ ನ್ನು ಕಳೆದುಕೊಂಡ ವಗೇಲಾ
ಕಾಂಗ್ರೆಸ್ ನ ಕಟ್ಟಾಳು ಕೇಂದ್ರ ಸಚಿವ ಶಂಕರ್ ಸಿನ್ಹಾ ವಗೇಲಾ ಅವರು ಗುಜರಾತ್ ನ ಪಂಚಮಹಲ್ಸ್ ಕ್ಷೇತ್ರದಲ್ಲಿ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದಾರೆ. ಬಿಜೆಪಿಯ ಪ್ರಭಾತ್ ಸಿನ್ಹಾ ಚೌಹಾಣ್ ರ ವಿರುದ್ಧ 2,090 ಮತಗಳ ಅಂತರದಿಂದ ಸೋತಿದ್ದಾರೆ.
ಉತ್ತರ ಕನ್ನಡದಲ್ಲಿ ಮ್ಯಾಗಿ ಪಟಾಕಿ ಠುಸ್
ಕಾಂಗ್ರೆಸ್ ನ ಹಿರಿಯ ನಾಯಕಿ ಮಾರ್ಗರೇಟ್ ಆಳ್ವ ಉತ್ತರ ಕನ್ನಡದಲ್ಲಿ ಬಿಜೆಪಿಯ ಅನಂತಕುಮಾರ್ ಹೆಗಡೆ ವಿರುದ್ಧ 22, 769 ಮತಗಳ ಅಂತರದಿಂದ ಸೋತು ಸುಣ್ಣವಾಗಿದ್ದಾರೆ. 2004ರ ಚುನಾವಣೆಯಲ್ಲೂ ಮ್ಯಾಗಿ ಹೆಗಡೆ ವಿರುದ್ಧ ಸೋತಿದ್ದರು.
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications