ಸೋಲಿನ ಪರಾಮರ್ಶೆ, ರಾಜನಾಥ್ ಸಿಂಗ್
ನವದೆಹಲಿ, ಮೇ. 16 : ಲೋಕಸಭೆ ಚುನಾವಣೆಯಲ್ಲಿ ದಯನೀಯವಾಗಿ ಸೋಲನುಭಿಸಿರುವ ಭಾರತೀಯ ಜನತಾ ಪಕ್ಷ ಸೋಲಿನ ಪರಾಮರ್ಶೆ ನಡೆಸಲಾಗುವುದು. ಸೋಲಿನಿಂದ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಲು ನಿರಾಕರಿಸಿದ ಅವರು, ಸೋಲಿಗೆ ಯಾರನ್ನು ಹೊಣೆಗಾರರನ್ನಾಗಿಸುವ ಮಾತೇ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಎಲ್ಲ ನಾಯಕರು ಹೊಣೆಗಾರರು. ಒಬ್ಬರ ಮೇಲೆ ಬೆಟ್ಟು ಮಾಡಿತೋರಿಸುವುದು ಸರಿಯಲ್ಲ. ಸೋಲಿನ ಪರಾಮರ್ಶೆ ನಡೆಸುತ್ತೇವೆ. ಎಲ್ಲಿ ಎಡವಿದ್ದೇವೆ ಗುರುತಿಸಿಕೊಂಡು, ಮುಂದಿನ ದಿನಗಳಲ್ಲಿ ಅಂಥ ತಪ್ಪು ಮಾಡದಂತೆ ಎಚ್ಚರ ವಹಿಸಲಾಗುವುದು ಎಂದರು. ಬಿಜೆಪಿ ನೇತೃತ್ವದ ಎನ್ ಡಿಎಗೆ ದೆಹಲಿ, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿ ಭಾರಿ ಹೊಡೆತ ಬಿದ್ದಿದೆ. ಬಿಜೆಪಿ ಹಾಗೂ ಅದರ ಅಂಗ ಪಕ್ಷಗಳು ಭಾರಿ ಪ್ರಮಾಣದಲ್ಲಿ ಸೋತಿದ್ದಾರೆ. ಈ ಎಲ್ಲ ಅಂಶಗಳ ಕುರಿತು ಕೂಡಲೇ ಚರ್ಚೆ ನಡೆಸಲಾಗುವುದು ರಾಜನಾಥ್ ಸಿಂಗ್ ವಿವರಿಸಿದರು.
(ಏಜನ್ಸೀಸ್)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications