ಬೆಂಗಳೂರು ಕೇಂದ್ರದಲ್ಲಿ ಮೋಹನ್ ಗೆಲುವು

ಮುಖ್ಯಮಂತ್ರಿ ತೃಪ್ತಿ
ಫಲಿತಾಂಶ ಬಂದ ಪ್ರಥಮ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಫಲಿತಾಂಶ ತೃಪ್ತಿಕರವಾಗಿದೆ ಎಂದಿದ್ದಾರೆ. ರಾಜ್ಯದ ಜನತೆ ಬಿಜೆಪಿ ಮೇಲೆ ವಿಶ್ವಾಸವಿರಿಸಿ ಮತ ನೀಡಿ ಆರಿಸಿ ಕಳುಹಿಸಿದ್ದಾರೆ. ಕಳೆದ 11 ತಿಂಗಳ ಬಿಜೆಪಿ ಸರಕಾರ ನಡೆಸಿದ ಅಭಿವೃದ್ಧಿ ಕಾರ್ಯಗಳಿಗೆ ತಕ್ಕ ಪ್ರತಿಫಲ ನೀಡಿದ್ದಾರೆ ಎಂದು ಅವರು ಸಮರ್ಥಿಸಿಕೊಂಡರು.
ಪ್ರತಿಪಕ್ಷಗಳು ಈ ಫಲಿತಾಂಶದಿಂದ ಪಾಠ ಕಲಿಯಬೇಕು ಎಂದ ಯಡಿಯೂರಪ್ಪ, ಕಾಂಗ್ರೆಸ್ ಪಕ್ಷ ಘಟಾನುಘಟಿ ನಾಯಕರಾದ ಜನಾರ್ದನ ಪೂಜಾರಿ, ಮಾರ್ಗರೇಟ್ ಆಳ್ವ, ಜಾಫರ್ ಷರೀಫ್ ಅವರಂಥರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications