ಬೆಂ. ದಕ್ಷಿಣದಲ್ಲಿ ಅನಂತ ಗೆಲುವಿನ ನಾಗಾಲೋಟ
ಬೆಂಗಳೂರು, ಮೇ. 16 : ಪ್ರಜ್ಞಾವಂತರ ಕ್ಷೇತ್ರವೆಂದೇ ಪರಿಗಣಿಲ್ಪಟ್ಟಿದ್ದ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ಅನಂತಕುಮಾರ್ ಅವರು ಸತತ 5ನೇ ಬಾರಿ ಜಯಭೇರಿ ಬಾರಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷ ಕೃಷ್ಣ ಭೈರೇಗೌಡ ಅವರನ್ನು ಸುಮಾರು 35 ಮತಗಳ ಅಂತರದಿಂದ ಸೋಲಿಸಿದ್ದಾರೆ. ಆದರೆ, ವೈಮಾನಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಉದ್ಯಮಿ ಕ್ಯಾಪ್ಟನ್ ಗೋಪಿನಾಥ, ವಾಟಾಳ್ ನಾಗರಾಜ್ ಠೇವಣಿ ಕಳೆದುಕೊಂಡಿದ್ದಾರೆ.
ಚಾಮರಾಜನಗರದಲ್ಲಿ ಕೂಡಾ ಕೈ ತನ್ನ ಕರಾಮತ್ತು ತೋರಿದ್ದು, ಕೊಳ್ಳೇಗಾಲ ಶಾಸಕ ಆರ್ ಧ್ರುವನಾರಾಯಣ ಅವರು ಬಿಜೆಪಿಯ ಶ್ರೀಕಂಠಮೂರ್ತಿ ಅವರನ್ನು ಸೋಲಿಸಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿದೆ. ತುಮಕೂರಿನಲ್ಲಿ ಬಿಜೆಪಿ ಮುಂದಿದೆ.
ಬೀದರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯ
ಗುರುಪಾದಪ್ಪ ನಾಗಮಾರಪಲ್ಲಿ ಅವರಿಂದ ತೆರವಾಗಿದ್ದ ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರಹೀಂಖಾನ್ ಗೆಲುವು ಸಾಧಿಸಿದ್ದಾರೆ. ಗುರುಪಾದಪ್ಪ ನಾಗಮಾರಪಲ್ಲಿ ಅವರ ಮಗ ಸೂರ್ಯಕಾಂತ ನಾಗಮಾರಪಲ್ಲಿ ಅವರನ್ನು ಸುಮಾರು ನಾಲ್ಕು ಸಾವಿರ ಮಕಗಳ ಅಂತರದಿಂದ ಸೋಲಿಸುವ ಮೂಲಕ ರಹೀಂಖಾನ್ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಪರೇಶನ್ ಕಮಲದ ಮೂಲಕ ಗುರುಪಾದಪ್ಪ ನಾಗಮಾರಪಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications