ಶ್ರೀನಿವಾಸಗೌಡ ಸೇರಿ ಒಂಬತ್ತು ಮಂದಿ ಉಚ್ಚಾಟನೆ
ಕೋಲಾರ, ಮೇ. 14 : ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ ಶ್ರೀನಿವಾಸಗೌಡ ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಎನ್ ಶ್ರೀನಿವಾಸ್ ಹಾಗೂ 9 ಕಾಂಗ್ರೆಸ್ ಸದಸ್ಯರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಚುನಾವಣೆ ವೀಕ್ಷರಾಗಿದ್ದ ಎ ಕೃಷ್ಣಪ್ಪ ಕಾಂಗ್ರೆಸ್ ನ ಒಂಬತ್ತು ಮಂದಿಯನ್ನು ಜತೆಗೂಡಿಸಿಕೊಂಡ ಮಾಜಿ ಸಚಿವ ಶ್ರಿನಿವಾಸಗೌಡರು ಜೆಡಿಎಸ್ ಅಧಿಕಾರ ಹಿಡಿಯಲು ನೆರವಾಗಿದ್ದಾರೆ. ಪಕ್ಷದ ವಿರೋಧಿ ಕೆಲಸ ಮಾಡಿದ ಅವರ ವಿರುದ್ದ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದರು. ಜಿಪಂ ನಲ್ಲಿ ಅಧಿಕಾರ ಕಾಯ್ದುಕೊಳ್ಳುವಷ್ಟು ಸಮರ್ಥವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಶ್ರಿನಿವಾಸಗೌಡರ ವರ್ತನೆಯಿಂದಾಗಿ ಪಕ್ಷ ಅಧಿಕಾರ ಕಳೆದುಕೊಂಡಿತು. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡಿದ ಗೌಡರು, ಬಿಜೆಪಿ ಹಾಗೂ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡು ಪಕ್ಷಕ್ಕೆ ಅಪಮಾನ ಮಾಡಿದ್ದಾರೆ ಎಂದು ಕೃಷ್ಣಪ್ಪ ದೂರಿದರು.
(ದಟ್ಸ್ ಕನ್ನಡ ವಾರ್ತೆ)
ಕೋಲಾರ ಜಿ.ಪಂ. ಅಧ್ಯಕ್ಷರಾಗಿ ಎಂ.ಶ್ರೀನಿವಾಸನ್












Click it and Unblock the Notifications