ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ ಪ್ರ : 14 ಕ್ಷೇತ್ರಗಳಲ್ಲಿ ಮುಸ್ಲಿಂರದ್ದೇ ಕಾರುಬಾರು

By Staff
|
Google Oneindia Kannada News

ಲಖನೌ, ಮೇ. 12 : ಉತ್ತರ ಪ್ರದೇಶದ ಚುನಾವಣೆ ಫಲಿತಾಂಶಕ್ಕೆ ರಾಷ್ಟ್ರ ರಾಜಕಾರಣದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಬಿಎಸ್ಪಿ, ಎಸ್ಪಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮತದಾರರ ಮನವೂಲಿಸುವ ಪ್ರಯತ್ನ ತೀವ್ರಗೊಂಡಿದೆ. ಮೇ 13 ರಂದು ಮತದಾನ ನಡೆಯಬೇಕಿರುವ 14 ಲೋಕಸಭೆ ಕ್ಷೇತ್ರಗಳಲ್ಲಿ ಚುನಾವಣೆಯ ರಂಗು, ಸಂಭ್ರಮ ಸಾಮಾನ್ಯವಾಗಿದೆ.

ಅಂತಿಮ ಹಂತದಲ್ಲಿ ಉತ್ತರ ಪ್ರದೇಶದ 14 ಲೋಕಸಭೆ ಕ್ಷೇತ್ರಗಳಾದ ರಾಮಪುರ್, ಪಿಲಿಭಿತ್, ಬುಧಾನ್, ಮೊರಾದಾಬಾದ್, ದೌರಾರ್ಹ, ಬಿಜನೋರ್, ಬರೇಲಿ, ಆನೋಲಾ, ಶಹಜಾನ್ ಪುರ್, ಕೇರಿ, ಸಂಬಾಲ್, ಅಮ್ರೋಹಿ, ನಾಗಿನಾ, ಸಹರಾನ್ ಪುರ್ ಗಳಲ್ಲಿ ಮತದಾನ ನಡೆಯಲಿದೆ. ಆದರೆ, ಒಂದು ವಿಶೇಷವೆಂದರೆ ಈ 14 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳದ್ದೇ ಕಾರುಬಾರು.

ಪ್ರತಿ ಕ್ಷೇತ್ರದಲ್ಲಿ ಅನ್ಯ ಜನಾಂಗಕ್ಕಿಂತ ಮುಸ್ಲಿಂ ಮತದಾರರ ಶೇ 10 ರಷ್ಟು ಹೆಚ್ಚಿದ್ದಾರೆ. ಈ ಕಾರಣಕ್ಕಾಗಿ ಈವರೆಗೂ ಬಹತೇಕ ಅಲ್ಪಸಂಖ್ಯಾತ ಅಭ್ಯರ್ಥಿಗಳು ಇಲ್ಲಿಂದ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿದ್ದಾರೆ. ಕೋಮುವಾದಿ ಪಕ್ಷವಾಗಿರುವ ಬಿಜೆಪಿಗೆ ಇಲ್ಲಿನ ಮತದಾನ ಅಷ್ಟಾಗಿ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿ ಮುಖಂಡ ಜಾಫರ್ ಯಾಬ್ ಜಿಲಾನಿ ತಿಳಿಸಿದ್ದಾರೆ. ಆದರೆ, ಮನೇಕಾ ಗಾಂಧಿ ಅವರು ಪಿಲಿಭಿತ್ ಕ್ಷೇತ್ರದಿಂದ ಸತತ 5 ಬಾರಿ ಆಯ್ಕೆಯಾಗಿದ್ದಾರೆ. ಈ ಸಲ ಅವರ ಆನೋಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಪಿಲಿಭಿತ್ ನಲ್ಲಿ ವರುಣ್ ಗಾಂಧಿ ಸ್ಪರ್ಧಿಸಿದ್ದಾರೆ.

ನಾಳಿನ ಮತದಾನದಲ್ಲಿ 20,807 ಮತಗಟ್ಟೆಗಳು, 1 ಲಕ್ಷ ಮತಗಟ್ಟೆ ಅಧಿಕಾರಿಗಳು, 2 ಲಕ್ಷ ಭದ್ರತಾ ಸಿಬ್ಬಂದಿ, 42 ಆಬ್ಸರ್ವರ್ ಗಳು, 330 ಮೈಕ್ರೋ ಅಬ್ಸರ್ವರ್ ಗಳನ್ನು ನೇಮಿಸಲಾಗಿದೆ. 1.95 ಕೋಟಿ ಮತದಾನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

(ಏಜೆನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X