ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ : ಭಾರತದಲ್ಲಿ ಶೇ. 1ರಷ್ಟು ಕಟ್

By Staff
|
Google Oneindia Kannada News

ಬೆಂಗಳೂರು, ಮೇ. 11 : ಆರ್ಥಿಕ ಹಿಂಜರಿತದಿಂದ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಸಾಫ್ಟವೇರ್ ದಿಗ್ಗಜ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಪಿಂಕ್ ಸ್ಲಿಪ್ ಹಾವಳಿ ಆರಂಭವಾಗಿದ್ದು, ಭಾರತದ ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿರುವ ಕಂಪನಿ ಶೇ. 1 ರಷ್ಟು ಉದ್ಯೋಗಿಗಳನ್ನು ಮನೆಗೆ ಕಳಿಹಿಸಲು ಅದು ನಿರ್ಧರಿಸಿದೆ. ಭಾರತದ ಉದ್ಯೋಗಿಗಳಿಗೆ ಈಗಾಗಲೇ ಮೇಲ್ ರವಾನಿಸಲಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಬೆಂಗಳೂರು ಮತ್ತು ಹೈದರಾಬಾದ್ ನ ಕಂಪನಿಯಲ್ಲಿರುವ ವಿಂಡೋ ತಂತ್ರಜ್ಞರು, ಮಾರುಕಟ್ಟೆ ಮತ್ತು ಸಪೋರ್ಟ್ ಟೀಮ್ ನಲ್ಲಿರುವ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇದೇ ಜನವರಿಯಿಂದ ಪಿಂಕ್ ಸ್ಲಿಪ್ ಕಾರ್ಯ ಆರಂಭಿಸಿರುವ ಮೈಕ್ರೋಸಾಫ್ಟ್ ಜಗತ್ತಿನಾದ್ಯಂತ ಒಟ್ಟು 5 ಸಾವಿರ ಉದ್ಯೋಗಿಗಳನ್ನು ಮನಗೆ ಕಳುಸುವುದಾಗಿ ಹೇಳಿತ್ತು. ಅಮೆರಿಕ 1500 ಉದ್ಯೋಗಿಗಳನ್ನು ಮನೆ ಕಳುಹಿಸಲಾಗಿದ್ದು, ಭಾರತ ಸೇರಿ ಉಳಿದೆಡೆ 3500 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಮೇ 5 ಕ್ಕೆ 3000 ಸಾವಿರ ಮಂದಿ ಮೈಕ್ರೋಸಾಫ್ಟ್ ನಿಂದ ಹೊರಬಿದ್ದಿದ್ದಾರೆ.

(ಏಜನ್ಸೀಸ್)

ಮೈಕ್ರೋಸಾಫ್ಟ್ 3000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X