120341tata nanoನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg120341tata nanoಬೆಂಗಳೂರಿನಲ್ಲಿ ಟೊಯೋಟಾ ಸಣ್ಣ ಕಾರು ಘಟಕ/lifestyle/automobiles/2009/0224-toyota-small-car-plant-in-bengaluru.htmlಯಾವುದೇ ಮಾತುಕತೆ ನಡೆಯುತ್ತಿರಲಿ, ಅದು ಕೊನೆಗೆ ಆರ್ಥಿಕ ಬಿಕ್ಕಟ್ಟಿನೆಡೆಗೇ ಬಂದು ನಿಲ್ಲುತ್ತದೆ. ಇದು ಆಟೋಮೊಬೈಲ್ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಷಾರಾಮಿ ಅನ್ನುವ ಮಾತು ನೇಪಥ್ಯಕ್ಕೆ ಸರಿದಿದ್ದು ಎಲ್ಲ ಕಾರು ತಯಾರಿಕಾ ಕಂಪನಿಗಳು ಸಣ್ಣ ಕಾರುಗಳ ತಯಾರಿಕೆಯತ್ತ ಗಮನ ಹರಿಸಿವೆ. ಆರ್ಥಿಕ ಸಂಕಷ್ಟ ಕಾರಿನ ಇಗ್ನೀಷನ್ ಕೀ ಶುರು ಮಾಡುವ ಮೊದಲೇ ಇಂಜಿನ್ನಿಗೆ ಬಿಸಿ ಮುಟ್ಟಿಸಿದೆ.ಟೊಯೋಟಾ ಕಂಪನಿ ಕೂಡ ಇದಕ್ಕೆ 34833http://kannada.oneindia.com/img/2009/02/24-toyota-small-car1.jpg120341tata nanoವಿದೇಶದಲ್ಲಿ ನ್ಯಾನೋ ಯುರೋಪಾ ದಾಂಗುಡಿ/lifestyle/automobiles/2009/0305-tata-nano-europa-hits-international-market.htmlಟಾಟಾ ಮೋಟರ್ಸ್ ನ ಬಹುನಿರೀಕ್ಷಿತ ಪುಟಾಣಿ ಕಾರು ನ್ಯಾನೋ ಭಾರತದಲ್ಲಿ ಬಿಡುಗಡೆಯಾಗುವ ಮೊದಲೇ ನ್ಯಾನೋ ಯುರೋಪಾವನ್ನು ಜಿನೀವಾ ಆಟೋ ಪ್ರದರ್ಶನದಲ್ಲಿ ಟಾಟಾ ಕಂಪನಿ ಬಿಡುಗಡೆ ಮಾಡಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನ್ಯಾನೋ ಯುರೋಪಾ ತನ್ನ ಬೇಡಿಕೆಯನ್ನು ಕುದುರಿಸಿಕೊಳ್ಳುತ್ತಿದೆ. ಇದರಿಂದಾಗಿ ಇನ್ನು ಎರಡು ವರ್ಷ ನ್ಯಾನೋ ಯುರೋಪಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಅಭಿಯಾನವನ್ನು ಮುಂದುವರಿಸುವ ನಿರೀಕ್ಷೆಯಿದೆ.ಮೂರು ಸಿಲಿಂಡರ್, ಮಲ್ಟಿ ಪಾಯಿಂಟ್ ಫ್ಯೂಯೆಲ್ 35004http://kannada.oneindia.com/img/2009/03/05-nano-europa1.jpg120341tata nanoಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg120341tata nanoಏಪ್ರಿಲ್ 25ರ ವರೆಗೆ ಮಾತ್ರ ನ್ಯಾನೋ ಬುಕ್ಕಿಂಗ್ /lifestyle/automobiles/2009/tmf-offers-special-scheme-for-nano-booking.htmlಬೆಂಗಳೂರು, ಏ.9 : ಬಹುನಿರೀಕ್ಷಿತ ಜನಸಾಮಾನ್ಯರ ಕಾರ್ ಎಂದೇ ಭಾರಿ ಸುದ್ದಿ ಮಾಡಿರುವ ಟಾಟಾ ನ್ಯಾನೋ ಕಾರ್ ನ ಬುಕ್ಕಿಂಗ್ ಇಂದಿನಿಂದ ದೇಶದ್ಯಾಂತ ಆರಂಭವಾಗಿದೆ. ಬುಕ್ಕಿಂಗ್ ಗೆ ಸಂಬಂಧಿಸಿದಂತೆ ದೇಶದ ವಿವಿಧ 18 ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಕೈಜೋಡಿಸಿವೆ. ಏಪ್ರಿಲ್ 9 ರಿಂದ ಏಪ್ರಿಲ್ 25ರ ವರೆಗೆ ಮಾತ್ರ ಬುಕ್ಕಿಂಗ್ ಸೌಲಭ್ಯವಿದೆ. ಮೂರು ಮಾಡೆಲ್ ಗಳನ್ನು 35851http://kannada.oneindia.com/img/2009/04/09-tata-nano-car1.jpg35071mumbaiನಾಡಿನ ತುಂಬ ನವರಾತ್ರಿ ಸಂಭ್ರಮ!/festivals/dasara/stories/2006/250906talaku.htmlಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ. ತಳಕು ಶ್ರೀನಿವಾಸ, ಮುಂಬಯಿನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು 6629http://kannada.oneindia.com/img/2009/09/17-bhuvaneshwari1.jpg35071mumbaiಘಜಿನಿ ನೋಡಿ ಎಂದ ಕಿಂಗ್ ಖಾನ್ ಶಾರೂಕ್/movies/bollywood/2008/12/22-shahrukh-urges-people-to-watch-ghajini-movie.htmlಬಾಲಿವುಡ್ ನಲ್ಲಿರುವ ತ್ರಿವಳಿ ಖಾನ್ ಗಳು ಎದ್ದರೂ ಸುದ್ದಿ, ಬಿದ್ದರೂ ಸುದ್ದಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಕಿಂಗ್ ಖಾನ್ ಶಾರೂಕ್ ಖಾನ್ ಹಾಗೂ ಬ್ಯಾಡ್ ಬಾಯ್ ಎಂದೇ ಖ್ಯಾತರಾಗಿರುವ ಸಲ್ಮಾನ್ ಖಾನ್ ಎಷ್ಟೇ ಖ್ಯಾತಿ ಹೊಂದಿ ಉತ್ತುಂಗದಲ್ಲಿದ್ದರೂ ಕೂಡಾ ಅಸೂಯೆ ಎನ್ನುವುದು ಮನುಷ್ಯನ ರಕ್ತದಲ್ಲಿರುವ ಹುಟ್ಟು ಗುಣ. ಆ ಮೂರು ಖಾನ್ ಗಳು ಅದಕ್ಕೆ ಹೊರತಲ್ಲ. 33628http://kannada.oneindia.com/img/2008/12/amir-ghajini1.jpg35071mumbaiಮುಂಬೈನ ಶಾರುಖ್ ಬಂಗಲೆ ಮೇಲೆ ದಾಳಿ/movies/bollywood/2009/02/13-shah-rukhs-house-in-mumbai-attacked.htmlಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ಬಂಗಲೆ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸೀಮೆ ಎಣ್ಣೆ ತುಂಬಿದ ಬಾಟಲಿಗಳನ್ನು ಶಾರುಖ್ ಬಂಗಲೆ ಕಡೆಗೆ ಎಸೆದು ಪರಾರಿಯಾಗಿದ್ದಾರೆ. ಘಟನೆ ಶುಕ್ರವಾರ ಮುಂಜಾನೆ 2.30 ಗಂಟೆಗೆ ನಡೆದಿದೆ.ಘಟನೆಯಿಂದ ಗಾಬರಿಯಾದ ಶಾರುಖ್ ಖಾನ್ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೂಡಲೆ 34626http://kannada.oneindia.com/img/2009/02/13-sharukh-khan2.jpg35071mumbaiಸ್ಲಂಡಾಗ್ ಮೋಡಿಗೆ ಮರುಳಾದ ಅಮೆರಿಕ ಅಧ್ಯಕ್ಷ/news/2009/02/24/obama-wants-to-see-slumdog-millionaire-white-house.htmlವಾಷಿಂಗ್ ಟನ್, ಫೆ. 24 : ಚಲನಚಿತ್ರ ರಂಗದ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿ ಎನಿಸಿರುವ ಆಸ್ಕರ್ ಪ್ರಶಸ್ತಿಯ ಎಂಟು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಜಗತ್ತಿನ ಸಂಗೀತ ಹಾಗೂ ಚಿತ್ರ ಪ್ರೇಮಿಗಳ ಮನ ಗೆದ್ದಿರುವ  ಸ್ಲಂಡಾಗ್ ಮಿಲೇನಿಯರ್ ಚಿತ್ರವನ್ನು ಅಮೆರಿಕ ಅಧ್ಯಕ್ಷ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ. ಮುಂಬೈ ಸ್ಲಂನಲ್ಲಿ 34837http://kannada.oneindia.com/img/2009/02/24-obama1.jpg35071mumbaiಮಾರ್ಚ್ 23 ರಂದು ನ್ಯಾನೋ ಕಾರು ಮಾರುಕಟ್ಟೆಗೆ/news/2009/02/26/tata-motors-to-launch-nano-car-on-march23.htmlನವದೆಹಲಿ, ಫೆ. 26 : ಅತ್ಯಂತ ಅಗ್ಗದ ಬೆಲೆಯ ಕಾರು ಎಂಬ ಅಗ್ಗಳಿಕೆ ಪಡೆದಿರುವ ಟಾಟಾ ಮೋಟಾರ್ ಕಂಪನಿಯ 'ನ್ಯಾನೋ' ಕಾರು ಮಾರ್ಚ್ 23 ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ. ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಬುಕ್ಕಿಂಗ್ ಆರಂಭಿಸಲಾಗುವುದು ಟಾಟಾ ಕಂಪನಿಯ ಮೂಲಗಳು ತಿಳಿಸಿವೆ. ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ 34884http://kannada.oneindia.com/img/2009/02/26-tata-nano-car1.jpg97548kannadaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97548kannadaಸಾರಿನ ಪುಡಿ, ಮೆಣಸಿನ ಪುಡಿ, ಖಾರದಪುಡಿ/recipe/shelf/2006/311006chilli_powder.htmlಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆ ವಿಧಾನ ಇಲ್ಲಿದೆ.ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ 6224http://kannada.oneindia.com/img/2009/07/14-redchillies1.jpg97548kannadaಸಂಜೆಯ ರಂಗಿಗೆ ಬಿಯರ್‌/ಬೌಲಿಂಗ್‌ ಜೊತೆಗೆ ಶಾಪಿಂಗ್‌/news/2002/05/03/bang_bowl.htmlಬೆಂಗಳೂರಿನ ಕವಲುಗಳು ಅಗಲಗೊಳ್ಳುತ್ತಿದ್ದರೆ ಸಂಜೆಯ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಈ ಸಂಜೆ ಎಲ್ಲಿಗೆ ಹೋಗುವುದು : ಬಿಡುವಿದೆ, ಕಿಸೆಯಲ್ಲಿ ಕಾಸೂ ಇದೆ. ಸಮಸ್ಯೆ ಅದಲ್ಲ - ನೆಮ್ಮದಿ ಹಾಗೂ ಖುಷಿ ಕೊಡುವ ಜಾಗೆಗಳ ಆಯ್ಕೆ ಯಾವತ್ತಿಗೂ ತಲೆ ನೋವಿನ ಸಮಸ್ಯೆಯೇ. ಇದರೊಂದಿಗೆ ಸಾರಿಗೆ ಕಿರಿಕಿರಿ ಬೇರೆ. ಇದರಿಂದಾಗಿ- ರಾಮ ರಾಮ ಸಾಕಪ್ಪಾ ಸಾಕು, ಎಲ್ಲಿಗೆ ಹೋಗುವುದೂ ಬೇಡ, ಮನೆಯೇ 22001http://kannada.oneindia.com/img/2009/06/22-beer-mug1.jpg97548kannadaಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97548kannadaಕರ್ನಾಟಕದ ಹೆಮ್ಮೆಯ ಕಲಾವಿದ ಪಂಡಿತ/literature/people/2009/0107-tribute-to-gulbarga-born-artist-sm-pandit.htmlಬೆಂಗಳೂರು, ಜ 7 : ಗುಲ್ಬರ್ಗ ರಂಗಮಂದಿರಕ್ಕೆ ಸರ್ಕಾರವು ಖ್ಯಾತ ಕಲಾವಿದ ಡಾ. ಎಸ್. ಎಂ. ಪಂಡಿತ್ ಅವರ ಹೆಸರನ್ನಿಟ್ಟಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ. ಎಸ್.ಎಂ. ಪಂಡಿತ್ ಗುಲ್ಬರ್ಗದವರಾಗಿದ್ದು, ದೇಶ ವಿದೇಶಗಳಲ್ಲಿ ಮನ್ನಣೆ ಪಡೆದವರು. 1916ರಲ್ಲಿ ಗುಲ್ಬರ್ಗದಲ್ಲಿ ಜನಿಸಿದ ಡಾ. ಎಸ್.ಎಂ. ಪಂಡಿತ್ ತಮ್ಮ ಹತ್ತನೇ ವಯಸ್ಸಿನಲ್ಲೇ ಕುಂಚವನ್ನು ಕೈಲಿ ಹಿಡಿದವರು. ಮದ್ರಾಸ್ ಸ್ಕೂಲ್ 33948http://kannada.oneindia.com/img/2009/01/07-sm-pandit-rangamandir.jpgnews"> ಟಾಟಾ ಸಂಸ್ಥೆಯಿಂದ ಅಗ್ಗದ ದರದ ಮನೆ ನಿರ್ಮಾಣ | Tata Housing | Ratan Tata | Low Cast | Mumbai | Boisar | SBI | Nano car | ಟಾಟಾ ಸಂಸ್ಥೆಯಿಂದ ಅಗ್ಗದ ದರದ ಮನೆ ನಿರ್ಮಾಣ - Kannada Oneindia

ಟಾಟಾ ಸಂಸ್ಥೆಯಿಂದ ಅಗ್ಗದ ದರದ ಮನೆ ನಿರ್ಮಾಣ

Ratan tata
ಮುಂಬೈ, ಮೇ. 7 : ಜನಸಾಮಾನ್ಯರಿಗೆ ಅಗ್ಗದ ಕಾರು ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಟಾಟಾ ಸಮೂಹ ಇನ್ನೊಂದು ಯೋಜನೆಗೆ ಕೈಹಾಕಿದ್ದು, ಮಧ್ಯಮ ವರ್ಗದ ಜನರಿಗಾಗಿ ಸುಲಭ ದರದಲ್ಲಿ ಮನೆ ನಿರ್ಮಿಸಲು ಮುಂದಾಗಿದೆ.

ಮುಂಬೈ ನಂತಹ ಮಹಾನಗರಿಯಲ್ಲಿ ಬಾಡಿಗೆ ಮನೆಯ ಮುಂಗಡವೇ ಐದಾರು ಲಕ್ಷ ರುಪಾಯಿ ತಲುಪಿರುವಾಗ 3.9 ಲಕ್ಷ ರುಪಾಯಿಯಿಂದ 6.7 ಲಕ್ಷ ರುಪಾಯಿಗೆ ಮನೆ ಕಟ್ಟಿಕೊಡಲು ಟಾಟಾ ಸಂಸ್ಥೆ ನಿರ್ಧರಿಸಿದೆ. ಮಧ್ಯಮ ವರ್ಗದ ಜನರ ಸ್ವಂತಮನೆ ಕನಸನ್ನು ನನಸು ಮಾಡಲು ಟಾಟಾ ಸಂಸ್ಥೆ ಸಹ ಸಂಸ್ಥೆ ಟಾಟಾ ಹೌಸಿಂಗ್ ಮುಂಬೈನ ಹೊರವಲಯದ ಬೊಯ್ಸರ್ ನಲ್ಲಿ ಸುಭಗೃಹ ನಿರ್ಮಾಣ ಮಾಡಲಿದೆ. ಮುಂಬೈ ನಂತರ ಬೆಂಗಳೂರು ಮತ್ತು ನವದೆಹಲಿಯಲ್ಲಿ ಇದೇ ಯೋಜನೆ ಆರಂಭವಾಗಲಿದೆ.

ಟಾಟಾ ಹೌಸಿಂಗ್ ನಿರ್ಮಿಸುವ ಮನೆಯಲ್ಲಿ ಒಂದು ಬೆಡ್ ರೂಂ, ಒಂದು ಹಾಲ್ ಮತ್ತು ಅಡುಗೆ ಮನೆ ಇರುವ ಮನೆಗೆ 3.9 ಲಕ್ಷ ರುಪಾಯಿಯಿಂದ 6.7 ಲಕ್ಷ ರುಪಾಯಿವರೆಗೆ (465 ಚದರಡಿ ವಿಸ್ತೀರ್ಣ) ದರ ನಿಗದಿಪಡಿಸಲಾಗಿದೆ. ಆದರೆ, ಇವು ಪ್ರತ್ಯಕ ಮನೆಗಳಲ್ಲ. ಅಪಾರ್ಟ್ ಮೆಂಟ್ ಮನೆಗಳಾಗಿವೆ. ಮುಂಬೈನ ಕೇಂದ್ರಸ್ಥಾನದಿಂದ 100 ಕಿಮೀ ದೂರವಿರುವ ಬೊಯ್ಸರ್ ನಲ್ಲಿ ನಿರ್ಮಿಸಲಾಗುತ್ತಿರುವ ಟೌನ್ ಶಿಪ್ 63 ಎಕರೆ ವಿಸ್ತೀರ್ಣ ಹೊಂದಿದ್ದು, ಇಲ್ಲಿ ಆಟದ ಮೈದಾನ, ಸಮುದಾಯ ಭವನ, ಆಸ್ಪತ್ರೆ, ಶಾಲೆ ಮತ್ತು ವಿಹಾರಕ್ಕಾಗಿ ಪ್ರತ್ಯೇಕ ಜಾಗ ಕಲ್ಪಿಸಲಾಗುವುದು. ಇದೇ ಅಪಾರ್ಟ್ ಮೆಂಟ್ ನಲ್ಲಿ 10 ರಿಂದ 15 ಲಕ್ಷ ರುಪಾಯಿ ಮನೆಗಳೂ ಲಭ್ಯಲಿವೆ ಎಂದು ಸಂಸ್ಥೆ ತಿಳಿಸಿದೆ.

ಮನೆ ಖರೀದಿ ಹೇಗೆ

ಮುಂಬೈನ ಎಸ್ ಬಿಐನ ಯಾವುದೇ ಶಾಖೆಯಲ್ಲಿ 200 ರುಪಾಯಿ ನೀಡಿ ಅರ್ಜಿ ಖರೀದಿಸಬಹುದು. ಮೇ 6 ರಿಂದ 20 ದಿನಗಳ ಕಾಲ ಬುಕ್ಕಿಂಗ್ ಆರಂಭವಾಗಿರುತ್ತದೆ. 10 ಸಾವಿರ ಮುಂಗಡದೊಂದಿಗೆ ಅರ್ಜಿ ಸಲ್ಲಿಸಬೇಕು. ಬುಕ್ಕಿಂಗ್ ಅವಧಿ ಮುಗಿದ 15 ದಿನದೊಳಗೆ ಯಾರಿಗೆ ಮನೆ ಸಿಗಲಿದೆ ಎಂಬುದನ್ನು ಘೋಷಣೆ ಮಾಡಲಾಗುವುದು. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಕೆಯಾದಕೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸ್ವೀಕರಿಸಿದ 24 ತಿಂಗಳೊಳಗೆ ಫಲಾನುಭವಿಗಳಿಗೆ ಮನೆ ವಿತರಣೆ ಮಾಡಲಾಗುವುದು ಎಂದು ಟಾಟಾ ಸಂಸ್ಥೆ ತಿಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+