233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg481364anandarama shastryಮತದಾರರಿಗೆ ಕೆಲವು ಪ್ರಶ್ನೆಗಳು/news/2009/04/28/few-questions-to-voters-in-karnataka.htmlಸಮಸ್ಯೆಗಳು ಎಲ್ಲಿಲ್ಲ? ರಾಜಕಾರಣಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ವೋಟು ಹಾಕದೆ ಮನೇಲಿ ಕುಳಿತರೆ ಸಮಸ್ಯೆ ಉಲ್ಬಣವಾಗುತ್ತದೆಯೇ ಹೊರತು ಪರಿಹಾರವಾಗುವುದಿಲ್ಲ. ಮತ ಹಾಕದಿರುವುದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ಪರಿಹಾರವಿರುವುದು ನಮ್ಮಲ್ಲಿಯೇ ಅಲ್ವೆ? ಇದಕ್ಕೆ ಪರಿಹಾರ ಕಂಡಕೊಂಡರೆ ತಾನೆ ಉಳಿದ ಸಮಸ್ಯೆಗಳು ಬಗೆಹರಿಯುವುದು? ಹಿಂದಿನಿಂದ ಬಂದು ಯಾರಾದರೂ ದಬ್ಬುವ ಮೊದಲೇ ವೋಟು ಹಾಕಿಬನ್ನಿ.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುರಾಜ್ಯದಲ್ಲಿ 36262http://kannada.oneindia.com/img/2009/04/28-anandram-shastri2.jpg481364anandarama shastryಮಾತಿನ ಭಾರಕ್ಕೆ ಕುಸಿದ ಬಿಜೆಪಿ!/news/2009/05/18/why-bjp-advani-failed-in-lok-sabha-election.htmlಪ್ರಧಾನಿಯಾಗುವ ಕನಸುಗಳನ್ನು ಕಟ್ಟಿಕೊಂಡಿದ್ದ ಲಾಲ್ ಕೃಷ್ಣ ಅಡ್ವಾಣಿಯವರ ಮುಂದಾಳತ್ವದಲ್ಲಿ ಭಾರತೀಯ ಜನತಾ ಪಕ್ಷ ವೋಟುಗಳನ್ನು ಗಿಟ್ಟಿಸುವಲ್ಲಿ ಮುಗ್ಗರಿಸಿದ್ದೆಲ್ಲಿ? ಕಾರಣಗಳು ಅನೇಕವಿದ್ದರೂ, ಮೂಲದಲ್ಲಿ ಎಡವಿದ್ದು ಮಾತುಗಾರಿಕೆಯಲ್ಲಿ. ಮಾತುಗಾರಿಕೆಯಲ್ಲಿ ಕೂಡ ಯುಪಿಎ ವೈಫಲ್ಯವನ್ನು ಬಿಂಬಿಸಲು ವಿಫಲವಾಗಿದೆ. ಮಾತು ಮನೆ ಕೆಡಿಸಿತು, ಕೋತಿ ವನ ಕೆಡಿಸಿತು ಎಂಬ ಗಾದೆ ಮಾತಿಗೆ ಬಿಜೆಪಿ ಕಿವಿಗೊಡಬೇಕು. ಮಾತಿಗಿಂತ ಕೃತಿಯೇ ಮೇಲು ಎಂಬುದನ್ನು ಬಿಜೆಪಿ ಈಗಲಾದರೂ 36730http://kannada.oneindia.com/img/2009/05/18-advani3.jpg481364anandarama shastryಚಂದ್ರನ ಮೇಲೆ ಸೈಟುಗಳು ಮಾರಾಟಕ್ಕಿವೆ!/column/humor/2009/0520-sites-for-sale-chandrayaan-after-effects.htmlಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.* ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರುಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು 36771http://kannada.oneindia.com/img/2009/05/20-moon-smiling1.jpg481364anandarama shastryಎಲ್ಲಾ ಚುಟುಕವೋ, ಪ್ರಭುವೇ, ಎಲ್ಲಾ ಚುಟುಕವೋ!/column/humor/2009/0525-kannada-chutuka-anandarama-shastry.htmlದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಚುಟುಕು, 'ಮುಂದುವರಿದ'ವರ ಮನೆಗಳಲ್ಲಿ - ಆಮಂತ್ರಣ ಪತ್ರಿಕೆ ಸಹಿತ - ಮದುವೆ ಮುಂಜಿ ಚುಟುಕು, ಶ್ರಾದ್ಧವಂತೂ 'ಸಂಕಲ್ಪ ಶ್ರಾದ್ಧ'ವೆಂಬ ಹೆಸರಿನಲ್ಲಿ ಚುಟುಕೋ ಚುಟುಕು, ವಿದ್ಯೆ ಹೆಚ್ಚಾದಂತೆಲ್ಲ ಜನರ ನಡುವಿನ ಸಂಭಾಷಣೆ ಚುಟುಕು, ಪತ್ರ ವ್ಯವಹಾರ ಚುಟುಕು, ಪತ್ರಿಕೆಗಳಲ್ಲಿ ಸ್ಥಳಾಭಾವದಿಂದ ಲೇಖನಗಳೂ ಚುಟುಕು, ರಾಜ್, ಜಯ್, ವಿಷ್, ವಿನು, ಅನು, ಹೀಗೆ ಹೆಸರುಗಳೂ ಚುಟುಕು, 36877http://kannada.oneindia.com/img/2009/05/25-anandram-shastri2.jpg481364anandarama shastryಸರಬ್ಜಿತ್ ಗೆ ಕ್ಷಮಾದಾನ ಕೇಳಬೇಕೆ ಬೇಡವೆ?/response/2009/0629-letter-to-the-editor-bharat-sastry.html'ಪಾಕ್ ಎಂಬ ಕಾದ ಕಬ್ಬಿಣ ಬಡಿಯಲು ಇದು ಸಕಾಲ' ಕುರಿತ ಆನಂದರಾಮ ಶಾಸ್ತ್ರಿ ಲೇಖನ ಓದಿದೆ. ನನ್ನ ಕೆಲವು ಅನಿಸಿಕೆಗಳನ್ನು ವಾಚಕರ ಜತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಶಾಸ್ತ್ರೀ ಅವರ ಲೇಖನದ ಆಶಯವನ್ನು ನಾನು ಅಲ್ಲಗಳೆಯಲು ಪ್ರಯತ್ನಿಸುತ್ತಿಲ್ಲ. ಆದರೆ ಲೇಖನ ಯಾವುದೇ ನಿಖರ ಸಂದೇಶ ನೀಡುತ್ತಿಲ್ಲವಲ್ಲ ಎಂಬ ವಿಷಾದವಿದೆ.* ಭರತ್ ಶಾಸ್ತ್ರಿಸರಬ್ಜಿತ್ ಮತ್ತು ಅಫ್ಜಲ್ ಗುರು ಇಬ್ಬರ ಪ್ರಕರಣಗಳ 37641http://kannada.oneindia.com/img/2009/06/29-bharat-sastry1.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpgnews"> ಮತದಾರರಿಗೆ ಕೆಲವು ಪ್ರಶ್ನೆಗಳು | Lok sabha election 2009 | Voters' responsibility | Anandarama Shastry - ಮತದಾರರಿಗೆ ಕೆಲವು ಪ್ರಶ್ನೆಗಳು - Kannada Oneindia

ಮತದಾರರಿಗೆ ಕೆಲವು ಪ್ರಶ್ನೆಗಳು

H. Anandarama Shastry, Bengaluru
ಸಮಸ್ಯೆಗಳು ಎಲ್ಲಿಲ್ಲ? ರಾಜಕಾರಣಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ವೋಟು ಹಾಕದೆ ಮನೇಲಿ ಕುಳಿತರೆ ಸಮಸ್ಯೆ ಉಲ್ಬಣವಾಗುತ್ತದೆಯೇ ಹೊರತು ಪರಿಹಾರವಾಗುವುದಿಲ್ಲ. ಮತ ಹಾಕದಿರುವುದೇ ದೊಡ್ಡ ಸಮಸ್ಯೆ. ಈ ಸಮಸ್ಯೆಗೆ ಪರಿಹಾರವಿರುವುದು ನಮ್ಮಲ್ಲಿಯೇ ಅಲ್ವೆ? ಇದಕ್ಕೆ ಪರಿಹಾರ ಕಂಡಕೊಂಡರೆ ತಾನೆ ಉಳಿದ ಸಮಸ್ಯೆಗಳು ಬಗೆಹರಿಯುವುದು? ಹಿಂದಿನಿಂದ ಬಂದು ಯಾರಾದರೂ ದಬ್ಬುವ ಮೊದಲೇ ವೋಟು ಹಾಕಿಬನ್ನಿ.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ರಾಜ್ಯದಲ್ಲಿ ಇದೇ 30ರಂದು ನಡೆಯಲಿರುವ ಎರಡನೇ ಹಂತದ ಮತದಾನದ ದಿನ ಮತ ನೀಡದಿರಲು ಯೋಚಿಸುತ್ತಿರುವ ವಿದ್ಯಾವಂತ ಮತದಾರರು ಯಾರ್‍ಯಾರಿದ್ದೀರಿ ಅವರೆಲ್ಲರಲ್ಲಿ ನನ್ನ ಕೆಲವು ಪ್ರಶ್ನೆಗಳು:

* ವಿಶ್ರಾಂತಿಗೆ, ಮನೋರಂಜನೆಗೆ, ಒಣಹರಟೆಗೆ ಮತ್ತು ನಿಷ್ಪ್ರಯೋಜಕ ಕೆಲಸಗಳಿಗೆ ಸಾಕಷ್ಟು ಸಮಯ ವ್ಯಯಿಸುವ ನೀವು ಎರಡೋ ಮೂರೋ ವರ್ಷಗಳಿಗೊಮ್ಮೆ ಮತದಾನಕ್ಕಾಗಿ ಒಂದೆರಡು ಗಂಟೆಗಳನ್ನೂ ವಿನಿಯೋಗಿಸಲಾರಿರಾ?

* ಅಯೋಗ್ಯರಿಗೇನು ವೋಟುಮಾಡುವುದು ಎಂದು ಹೇಳಿ ಮನೆಯಲ್ಲಿ ಕೂತರೆ ನೀವೂ ಅಯೋಗ್ಯರಾದಂತಲ್ಲವೆ?

* ಇದ್ದುದರಲ್ಲಿಯೇ ಯೋಗ್ಯರಿಗೆ ಮತ ನೀಡುವ ಮೂಲಕ ನೀವು ರಾಜಕೀಯ ಪಕ್ಷಗಳಿಗೆ ಒಂದು ಸಂದೇಶವನ್ನು ತಲುಪಿಸಬಹುದಲ್ಲವೆ? ಮುಂದಿನ ಸಲ ಅವು ಯೋಗ್ಯನನ್ನೇ ಕಣಕ್ಕಿಳಿಸಬೇಕಾದಂಥ ಪರಿಸ್ಥಿತಿ ಸೃಷ್ಟಿಸಬಹುದಲ್ಲವೆ?

* ನಾನೊಬ್ಬ ವೋಟ್ ಹಾಕದಿದ್ದರೆ ಏನು ವ್ಯತ್ಯಾಸವಾಗುತ್ತದೆ ಎಂದು ಕೇಳುವ ನಿಮಗೆ, ಕೊಪ್ಪರಿಗೆ ಇರಿಸಿ ಅದಕ್ಕೆ ಒಂದೊಂದು ತಂಬಿಗೆ ಹಾಲು ಹಾಕಲು ಪ್ರಜೆಗಳಿಗೆ ಆಜ್ಞಾಪಿಸಿದ ರಾಜನ ಕಥೆ ಗೊತ್ತಿಲ್ಲವೆ? ಎಲ್ಲರೂ ಹಾಲು ಹಾಕುವಾಗ ನಾನೊಬ್ಬ ನೀರು ಹಾಕಿದರೆ ಕೊಪ್ಪರಿಗೆ ನೋಡಿದ ರಾಜನಿಗೇನು ಗೊತ್ತಾಗುತ್ತದೆ ಎಂದು ಬುದ್ಧಿ ಓಡಿಸಿ ಪ್ರತಿಯೊಬ್ಬ ಪ್ರಜೆಯೂ ಕೊಪ್ಪರಿಗೆಗೆ ನೀರನ್ನೇ ಹಾಕಿದ ಕಥೆಯನ್ನು ನೀವು ಕೇಳಿಲ್ಲವೆ? ಆ ಕಥೆಯಂತಾಗಬೇಕೇ ನಮ್ಮ ಪ್ರಜಾಪ್ರಭುತ್ವ?

* ಮತದಾನವನ್ನೇ ಮಾಡದಿದ್ದರೆ ನಿಮಗೆ ರಾಜಕಾರಣಿಗಳನ್ನು ನಿಂದಿಸಲಿಕ್ಕಾಗಲೀ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಆಗ್ರಹಿಸಲಿಕ್ಕಾಗಲೀ ನೈತಿಕ ಹಕ್ಕೆಲ್ಲಿದೆ?

* ನಿರಕ್ಷರಿಗಳು ಹೋಗಿ ವೋಟ್ ಹಾಕುವಾಗ, ವಿದ್ಯಾವಂತರಾದ ನೀವು ಮನೆಯಲ್ಲೇ ಉಳಿದಿರೆಂದರೆ ನೀವು ಕಲಿತ ವಿದ್ಯೆಗೆ ಏನು ಬೆಲೆ? ನಿಮ್ಮ ವಿದ್ಯೆ ಹೊಟ್ಟೆಪಾಡಿಗಾಗಿ ಮಾತ್ರವೆ? ಅವಿದ್ಯಾವಂತರು, ಮಾತ್ರವಲ್ಲ, ಪ್ರಾಣಿಗಳೂ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿಲ್ಲವೆ?

* ಮತದಾನವನ್ನು ಕಡ್ಡಾಯಗೊಳಿಸಿದರೆ ಆಗಲೂ ನೀವು ಮತದಾನ ಮಾಡದೆ ಕೂರುತ್ತಿರಾ? ಇಲ್ಲ ತಾನೆ? ಅಂದರೆ, 'ದಂಡಂ ದಶಗುಣಂ' ಎಂಬ ಮಾತಿಗೇ ಯೋಗ್ಯರೆ ನೀವು?

* ಯಾರು ಆರಿಸಿಬಂದರೂ ಅಷ್ಟೆ ಎಂಬ ಅಭಿಪ್ರಾಯದಿಂದಾಗಿ ನೀವು ಮತದಾನದಿಂದ ವಿಮುಖರಾಗುತ್ತೀರಾ? ಎಷ್ಟು ಚಿಕಿತ್ಸೆ ನೀಡಿದರೂ ಅಷ್ಟೆ ಎಂದು ಗೊತ್ತಿದ್ದೂ ನೀವು ನಿಮ್ಮ ರೋಗಪೀಡಿತ ಬಂಧುವಿಗೆ ಚಿಕಿತ್ಸೆ ಮುಂದುವರಿಸುತ್ತೀರಲ್ಲಾ, ಆ ಬಂಧುವಿಗಿಂತ ಕಡೆಯಾಯಿತೇ ನಿಮಗೆ ನಿಮ್ಮ ದೇಶ?

* ಮತದಾನ ಮಾಡುವುದರಿಂದ ನನಗೇನು ಲಾಭ ಎನ್ನುತ್ತೀರಾ? ನಿಮಗೇ ಸ್ವಾಮೀ ಲಾಭ. ವಿದ್ಯಾವಂತರಾದ ನಿಮಗೆ ಅಷ್ಟೂ ಗೊತ್ತಾಗುವುದಿಲ್ಲವೆ?!

ಆದ್ದರಿಂದ ಹೋಗಿ, 30ರಂದು ವೋಟ್ ಹಾಕಿಬನ್ನಿ.

ಪೂರಕ ಓದಿಗೆ
ಮತದಾರರಾದ ನಾವಾದರೂ ಎಂಥವರು?
ಮತದಾರರೇ, ನಿಮ್ಮ ಓಟು ಯಾರಿಗೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+