233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg453938anandarama shastriಇದೀಗ ತಾನೇ ಬಂದಂತಹ ನಗೆ ಸುದ್ದಿಗಳು/column/humor/2009/0401-humorous-political-news-bytes.htmlರಾಜಕೀಯದಲ್ಲಿ ಕಾಲು ಎಳೆಯುವುದು, ಕೆಸರೆರಚಾಟವಾಡುವುದು, ಕಟಕಿಯಾಡುವುದು ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿದಷ್ಟೇ ಸಹಜ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಾವೂ ನಮ್ಮ ರಾಷ್ಟ್ರೀಯ ಪ್ರತಿನಿಧಿಗಳ ಕಾಲೆಳಿಯೋಣ, ಮಿತಿ ಮೀರದಂತೆ. ಇಲ್ಲಿವೆ ನೋಡಿ ಎಚ್. ಆನಂದರಾಮ ಶಾಸ್ತ್ರೀಯವರ ಹಾಸ್ಯಲೇಪಿತ ರಾಜಕೀಯ ಸುದ್ದಿ ಸ್ವಾರಸ್ಯಗಳು.ವರುಣ್‌ಗೆ ಒಂದು ವರ್ಷ ಶಿಕ್ಷೆವರುಣ್ ಗಾಂಧಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. 35655http://kannada.oneindia.com/img/2009/04/01-anandram-shastri1.jpg453938anandarama shastriಬಂಗಾರ-ಕುಮಾರ-ಮಧು-ಚಂದ್ರ-ಯಾನ/column/humor/2009/0406-madhu-kumar-bangarappa-unite.htmlರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಸ್ನೇಹವೂ ಶಾಶ್ವತವಲ್ಲ, ವೈರತ್ವವೂ. ಅಧಿಕಾರ ಶಾಶ್ವತವಲ್ಲ, ಸಂಬಂಧವಂತೂ ಅಲ್ವೇಅಲ್ಲ, ಹಣ ಮತ್ತು ಕಳಂಕ ಹೊರತಾಗಿ. ಅಂದಿನ ಬದ್ಧ ವೈರಿಗಳು ಇಂದು ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗನೂ ಇಲ್ಲ, ನಿನ್ನಂಥ ಬಂಧುವಿಲ್ಲ ಅಂತ ಅಪ್ಪಿಕೊಳ್ಳುವುದನ್ನು ನೋಡುವುದು ರಾಜಕೀಯದಲ್ಲಿ ಮಾತ್ರ ಸಾಧ್ಯ. ಅದನ್ನು ಸಾಧ್ಯವಾಗಿಸಿದವರು, ಕುಮಾರ್, ಮಧು ಮತ್ತು ಒನ್ ಅಂಡ್ ಓನ್ಲಿ 35761http://kannada.oneindia.com/img/2009/04/06-anandram-shastri2.jpg453938anandarama shastriಸ್ವರ್ಗ-ನರಕದಲ್ಲಿ ಪತ್ರಿಕಾಗೋಷ್ಠಿ!/column/humor/2009/0409-press-conference-in-hell-and-heaven.htmlಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು. ಪತ್ರಕರ್ತರಿಗಾಗಿ ಉಭಯ ಕಡೆಗಳಿಗೂ ದೇವೇಂದ್ರನ ಕಚೇರಿಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿತ್ತು. ಕ್ಯಾಮೆರಾ, ಮೊಬೈಲ್ ಫೋನ್, ಕಂಪ್ಯೂಟರ್, ಚಿತ್ರಗ್ರಾಹಕ ಯಂತ್ರಗಳು ಹಾಗೂ ಧ್ವನಿಮುದ್ರಕ ಯಂತ್ರಗಳನ್ನು ನಿಷೇಧಿಸಲಾಗಿತ್ತು. 35853http://kannada.oneindia.com/img/2009/04/09-anandram-shastri2.jpg453938anandarama shastriಇಂಥ ರಾಜಕಾರಣಿಗಳನ್ನು ಪಡೆದ ನಾವೇ ಧನ್ಯರು!/column/humor/2009/0413-honest-secular-polite-politicians-karnataka.htmlನಮ್ಮ ರಾಜಕಾರಣಿಗಳು ಪಾಪ ಏನೂ ಗಳಿಸಿರುವುದಿಲ್ಲ. ಇವರ ಹೆಂಡತಿ ಟೈಲರಿಂಗೋ ಮತ್ತೊಂದೋ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ.* 35908http://kannada.oneindia.com/img/2009/04/13-politician1.jpg453938anandarama shastriನಮ್ಮ ರಾಜಕಾರಣಿಗಳು ಎಂಥವರೆಂದರೆ.../news/2009/04/23/these-are-our-politicians.htmlಚುನಾವಣೆ ಬಂತೆಂದರೆ ಸಾಕು, 'ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ಪ್ರಿಯ ಮತದಾರ', ಎಂದು ಮತದಾರನನ್ನು ಪ್ರಾರ್ಥಿಸುವ ಇವರು ಚುನಾವಣೆ ಮುಗಿದ ಬೆನ್ನಿಗೇ, 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ವೋಟಿನ ಬಲವೊಂದ್ ಸಿಕ್ತಲ್ಲ, ಸಾಕೋ', ಎಂದು ಮತದಾರನಿಗೆ ಬೆನ್ನುಹಾಕಿ ತಮ್ಮ ದಂತಗೋಪುರಗಳೆಡೆಗೆ ಹೊರಟುಹೋಗುತ್ತಾರೆ.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು ಅವನೊಬ್ಬ ವ್ಯಾಪಾರಿ. ಭಾರೀ ಶ್ರೀಮಂತ. ಆದರೂ 36157http://kannada.oneindia.com/img/2009/04/23-politician2.jpg382435votingಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg382435votingಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg382435votingನಗೆಯು ಬರುತಿದೆ ನಮಗೆ ನಗೆಯು ಬರುತಿದೆ.../column/manikanth/2009/0415-open-letter-to-karnataka-politicians.htmlಸಂಸದರಾಗುವ ಕನಸಿನೊಂದಿಗೇ ಓಡಾಡುತ್ತಿರುವ ನಾಯಕರುಗಳಿಗೆ-ನಮಸ್ಕಾರ.ಮಹನೀಯರೆ, ಚುನಾವಣೆ ನಡೆವ ದಿನ ಹತ್ತಿರಾಗುತ್ತಿದೆ. ಈ ಸಂದರ್ಭದಲ್ಲಿಯೇ ನೀವು ಮನೆ ಮನೆಯ ಬಾಗಿಲು ತಟ್ಟುತ್ತಿದ್ದೀರಿ. ದೊಡ್ಡವರು, ಚಿಕ್ಕವರು, ಮುದುಕರು, ಮಕ್ಕಳಿಗೂ ಡೈವ್ ಹೊಡೆಯುತ್ತಿದ್ದೀರಿ. ಅಪರಿಚಿತರಿಗೂ ಕೈ ಮುಗಿಯುತ್ತಿದ್ದೀರಿ. ಕಂಡವರ ಮುಂದೆಲ್ಲಾ ಇಷ್ಟಗಲ ಹಲ್ಲು ಕಿಸಿದು, ಅವರ ಕೈ ಹಿಡಿದು- ಇದನ್ನು ಕಾಲು ಅಂತ ತಿಳ್ಕೊಳ್ಳಿ. ಮನೆ ಬಾಗಿಲಿಗೆ ಬಂದು ಭಿಕ್ಷೆ ಕೇಳ್ತಾ 35961http://kannada.oneindia.com/img/2009/04/15-politician2.jpg382435votingಮತದಾನ : ನಕ್ಸಲರ ಅಟ್ಟಹಾಸಕ್ಕೆ 17 ಸಾವು/news/2009/04/16/lok-sabha-election-first-phase-naxals-attack.htmlನವದೆಹಲಿ, ಏ. 16 : ಮೊದಲ ಹಂತದ ಚುನಾವಣೆ ನಡೆದ ಬಿಹಾರ್, ಜಾರ್ಖಂಡ್, ಛತ್ತೀಸ್ ಗಢ್ ಹಾಗೂ ಒರಿಸ್ಸಾದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. 5 ಮಂದಿ ಚುನಾವಣೆ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 17 ಮಂದಿಯನ್ನು ನಕ್ಸಲರು ಹತ್ಯೆಗೈದಿದ್ದಾರೆ. ಕೆಲವಡೆ ಮತದಾನದ ಕೇಂದ್ರಗಳಿಗೆ ನುಗ್ಗಿ ಅಲ್ಲಿದ್ದ ಮತಯಂತ್ರಗಳನ್ನು ಅಪಹರಣ ಮತ್ತು ನಾಶ ಮಾಡಿರುವ ಘಟನೆಗಳು ನಡೆದಿರುವುದು ದೇಶದ 36007http://kannada.oneindia.com/img/2009/04/16-naxal-attack1.jpg382435votingಮತದಾರರೇ, ನಿಮ್ಮ ಓಟು ಯಾರಿಗೆ?/news/2009/04/22/golden-opportunity-to-elect-right-candidate.htmlಇದು ಸಮ್ಮಿಶ್ರ ಸರಕಾರಗಳ ಯುಗ. ನಾಲ್ಕುನಾಲ್ಕು ರಂಗಗಳು ಉದ್ಭವವಾಗಿರುವುದರಿಂದ ಏಕೈಕ ರಾಷ್ಟ್ರೀಯ ಪಕ್ಷಕ್ಕೆ ಇನ್ನೆಂದೂ ಬಹುಮತ ಪಡೆಯುವ ಸಾಧ್ಯತೆ ಬರಲಾರದು. ಸಣ್ಣಪುಟ್ಟ ಪಕ್ಷಗಳು ಅಷ್ಟೇ ಏಕೆ ಒಬ್ಬಂಟಿ ಸಂಸದನೂ ಸರಕಾರವನ್ನು ಉಳಿಸುವಲ್ಲಿ ಅಥವಾ ಉರುಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸಬಲ್ಲ. ಆದ್ದರಿಂದ ಸಮರ್ಥ ನಾಯಕನನ್ನು ನೋಡಿ ಜನ ಮತ ಹಾಕಬೇಕೆ ಹೊರತು ಪಕ್ಷ ನೋಡಿ ಅಲ್ಲ.* ಪ್ರಸಾದ ನಾಯಿಕ15ನೇ ಲೋಕಸಭೆ 36143http://kannada.oneindia.com/img/2009/04/22-vote1.jpgnews"> ನಮ್ಮ ರಾಜಕಾರಣಿಗಳು ಎಂಥವರೆಂದರೆ... | Our politicians | Anandarama Shastri | Dasara Padagalu - ನಮ್ಮ ರಾಜಕಾರಣಿಗಳು ಎಂಥವರೆಂದರೆ... - Kannada Oneindia

ನಮ್ಮ ರಾಜಕಾರಣಿಗಳು ಎಂಥವರೆಂದರೆ...

These are our politicians!
ಚುನಾವಣೆ ಬಂತೆಂದರೆ ಸಾಕು, 'ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ಪ್ರಿಯ ಮತದಾರ', ಎಂದು ಮತದಾರನನ್ನು ಪ್ರಾರ್ಥಿಸುವ ಇವರು ಚುನಾವಣೆ ಮುಗಿದ ಬೆನ್ನಿಗೇ, 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ವೋಟಿನ ಬಲವೊಂದ್ ಸಿಕ್ತಲ್ಲ, ಸಾಕೋ', ಎಂದು ಮತದಾರನಿಗೆ ಬೆನ್ನುಹಾಕಿ ತಮ್ಮ ದಂತಗೋಪುರಗಳೆಡೆಗೆ ಹೊರಟುಹೋಗುತ್ತಾರೆ.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಅವನೊಬ್ಬ ವ್ಯಾಪಾರಿ. ಭಾರೀ ಶ್ರೀಮಂತ. ಆದರೂ ತೀರದ ಧನದಾಹ. ವರದಕ್ಷಿಣೆ ವಿಷಯದಲ್ಲಿ ಸೊಸೆಯೊಡನೆ ಜಟಾಪಟಿಗಿಳಿದ ಆತ ಅದೊಂದು ದಿನ ಮಗನೊಡಗೂಡಿ ಸೀಮೆಎಣ್ಣೆ ಸುರಿದು ಸೊಸೆಯನ್ನು ಸುಟ್ಟುಹಾಕಿಬಿಟ್ಟ. ಕಾನೂನಿನ ಕೈಗೆ ತಾವಿಬ್ಬರು ಸಿಕ್ಕಿಬೀಳದಂತೆ ಎಲ್ಲ ಏರ್ಪಾಡುಗಳನ್ನೂ ಮಾಡಿದ. ಆದರೆ ಆ ಊರಿನ ಮಹಿಳಾ ಸಂಘಟನೆಗಳವರು ಅವನ ವಿರುದ್ಧ ಸಿಡಿದೆದ್ದರು. ಅವನ ಅಂಗಡಿಯ ಮುಂದೆ ಪ್ರತಿದಿನ ಧರಣಿ ಕೂತು ಅವನ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಅವನ ಬಣ್ಣ ಬಯಲಿಗೆಳೆಯುವಂಥ ಭಿತ್ತಿಪತ್ರಗಳನ್ನು ಪ್ರದರ್ಶಿಸತೊಡಗಿದರು. ಅವನ ಅಂಗಡಿಯೆದುರೇ ಸಾರ್ವಜನಿಕವಾಗಿ ಅವನಿಗೆ ಛೀಮಾರಿ ಹಾಕತೊಡಗಿದರು.

ಅಂಗಡಿಯೊಳಗೆ ತಣ್ಣಗೆ ಕೂತು ಇವೆಲ್ಲವನ್ನೂ ಗಮನಿಸುತ್ತಿದ್ದ ಆ ವ್ಯಾಪಾರಿ ಅದೊಂದು ದಿನ ಹೊರಗೆ ಬಂದು ತನ್ನ ಅಂಗಡಿಯ ಕಟ್ಟೆಯಮೇಲೆ ಕುರ್ಚಿ ಹಾಕಿಕೊಂಡು ಈ ಪ್ರತಿಭಟನಕಾರರ ಎದುರೇ ಕೂತುಬಿಟ್ಟ. ಮಹಿಳೆಯರ ಪ್ರತಿಭಟನೆ ಕಾವೇರಿತು. ಈತ ನೋಡುತ್ತ ತಣ್ಣಗೆ ಕುಳಿತಿದ್ದ. ಹೀಗೇ ಹಲವು ದಿನಗಳು ಕಳೆದವು. ಮೊದಮೊದಲು ಕುತೂಹಲದಿಂದ ಅಂಗಡಿಯೆದುರು ಜಮಾಯಿಸುತ್ತಿದ್ದ ದಾರಿಹೋಕರು ಕ್ರಮೇಣ ಈ ಪ್ರತಿಭಟನೆಯೊಂದು ನಿತ್ಯವಿಧಿ ಎಂಬ ಧೋರಣೆಹೊಂದಿ ಆ ಕಡೆಗೆ ತಿರುಗಿಯೂ ನೋಡದೆ ತಮ್ಮ ಪಾಡಿಗೆ ತಾವು ಹೋಗತೊಡಗಿದರು. ಆ ಕೊಲೆಗಡುಕ ವ್ಯಾಪಾರಿ ಮಾತ್ರ ನಿತ್ಯವೂ ಪ್ರತಿಭಟನಕಾರರೆದುರು ಕುರ್ಚಿ ಹಾಕಿಕೊಂಡು ಕೂತು ಅವರ ಪ್ರತಿಭಟನೆಯನ್ನು ಎಂಜಾಯ್ ಮಾಡತೊಡಗಿದ.

ಮುಂದೇನಾಯಿತೆಂಬುದನ್ನು ಯಾರೂ ಊಹಿಸಬಹುದು. ದಿನಗಳೆದಂತೆ ಪ್ರತಿಭಟನೆಯ ಕಾವು ಇಳಿಯತೊಡಗಿತು. ಆ ವ್ಯಾಪಾರಿಯ ಭಂಡತನದೆದುರು ಪ್ರತಿಭಟನಕಾರರು ಸೋತುಹೋದರು. ಪ್ರತಿಭಟನೆ ಸ್ಥಗಿತಗೊಂಡಿತು. ಅದಾದ ಕೆಲವೇ ತಿಂಗಳುಗಳಲ್ಲಿ ಆ ಧೂರ್ತ ತನ್ನ ಮಗನಿಗೆ ಇನ್ನೊಂದು ಮದುವೆ ಮಾಡಿದ! ಭರ್ಜರಿ ವರದಕ್ಷಿಣೆ ಪೀಕಿದ. ಈಗಾತ ಆರಾಮಾಗಿದ್ದಾನೆ. ಇದು ಉತ್ತರ ಭಾರತದ ನಗರವೊಂದರಲ್ಲಿ ಕೆಲ ವರ್ಷಗಳ ಕೆಳಗೆ ನಡೆದ ಘಟನೆ. ನಮ್ಮ ಇಂದಿನ ರಾಜಕೀಯ ರಂಗವನ್ನು ಈ ಘಟನೆಗೆ ಪಸಂದಾಗಿ ಹೋಲಿಸಬಹುದು.

ನಮ್ಮ ರಾಜಕಾರಣಿಗಳು ಇಂದು ಪ್ರಜಾಪ್ರಭುತ್ವವನ್ನು ಸುಟ್ಟುಹಾಕುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಆಮಿಷವೆಂಬ ಸೀಮೆಎಣ್ಣೆ ಸುರಿದು ಪ್ರಚೋದನೆಯೆಂಬ ಬೆಂಕಿ ಹಚ್ಚಿ ಪ್ರಜೆಯ ಪ್ರಭುತ್ವವನ್ನು ದಹಿಸಿ ಆ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಂಡು ತಿಂದು ತೇಗುತ್ತಿದ್ದಾರೆ. ಅಧಿಕಾರ, ಕಾನೂನು ಮತ್ತು ವ್ಯವಸ್ಥೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡ ಅವರೆದುರು ಬಡಪಾಯಿ ಪ್ರಜೆಗಳ ಪ್ರತಿಭಟನೆಯೆಂಬುದು ಅರಣ್ಯರೋದನವಾಗುತ್ತಿದೆ. ಕೂಗಿ ಕೂಗಿ ಗಂಟಲು ಸೋತು ಸುಮ್ಮನಾಗುವುದೇ ಪ್ರಜೆಯ ಗತಿಯಾಗಿದೆ.

ಪ್ರತಿಭಟನಕಾರರೆದುರು ಭಂಡನಂತೆ ಕೂತು ಎಂಜಾಯ್ ಮಾಡುವ ಮೂಲಕ ಪ್ರತಿಭಟನೆಯ ಸೊಲ್ಲಡಗಿಸಿ ಕೊಲೆಯ ಕೃತ್ಯವನ್ನು ಗಪ್ ಮಾಡಿದ ಆ ದುಷ್ಟ ವ್ಯಾಪಾರಿಯಂತೆ ನಮ್ಮೀ ಭ್ರಷ್ಟ ರಾಜಕಾರಣಿಗಳು ಚುನಾವಣೆಯ ವೇಳೆ ಮತದಾರರೆದುರು ಜಗಭಂಡರಾಗಿ ನಿಂತು ಅದ್ಭುತವಾಗಿ ನಾಟಕವಾಡಿ ಮತ್ತು ಅಮಾಯಕ ಮತದಾರರನ್ನು ನಾನಾ ಆಮಿಷಗಳಿಗೆ ಬಲಿಯಾಗಿಸಿ ಗೆಲುವು ಸಾಧಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆಗೈದು ಅಧಿಕಾರಕ್ಕೇರುತ್ತಾರೆ.

ಇವರ ನಾಟಕ ಎಂಥ ಅದ್ಭುತ. ಬೇರೆ ಸಮಯದಲ್ಲಿ 'ಮೋಡಗಳ ಮಹಾಮಹಿಮ'ರಂತಾಡುವ ಇವರು ಚುನಾವಣೆಯ ಸಂದರ್ಭದಲ್ಲಿ 'ಧರೆಗಿಳಿದ ದಿವ್ಯತೇಜ'ರ ಪೋಸು ಕೊಡುತ್ತಾರೆ. ಜನಸಾಮಾನ್ಯರಿಂದ ದೂರವಾಗಿ ಸದಾಕಾಲ ದಂತಗೋಪುರಗಳಲ್ಲಿ ವಾಸಿಸುವ ಇವರು ಚುನಾವಣೆ ಘೋಷಿತವಾದಕೂಡಲೇ ಕೊಳೆಗೇರಿಗಳಿಗೆ ನುಗ್ಗಿ ಗುಡಿಸಲುಗಳ ಒಳಹೊಕ್ಕು ಬಡವರ ಸುಖಕಷ್ಟ ವಿಚಾರಿಸತೊಡಗುತ್ತಾರೆ. ಮನೆಯಲ್ಲಿ ತಮ್ಮ ಮಕ್ಕಳನ್ನೇ ಎತ್ತಿಕೊಳ್ಳದವರು ಕೊಳೆಗೇರಿಯಲ್ಲಿ ಹಸುಗೂಸುಗಳನ್ನು ಎತ್ತಿ ಮುದ್ದಾಡುತ್ತಾರೆ! ಸದಾಕಾಲ ಅಟ್ಟಹಾಸದಿಂದ ಮೆರೆಯುವ ಇವರು ಚುನಾವಣೆ ಬಂತೆಂದರೆ ಸಾಕು, ಕಂಡಕಂಡ ವೃದ್ಧರ ಕಾಲುಗಳಿಗೆ ಬೀಳುತ್ತಾರೆ. ಮನದೊಳಗೆ ಗಾಢವಾದ ಜಾತಿಭಾವವನ್ನೂ ಮತಮತ್ಸರವನ್ನೂ ಇಟ್ಟುಕೊಂಡು ಇವರು ಹೊರಗೆ ಜಾತ್ಯತೀತರ ಪೋಸು ಕೊಡುತ್ತಾರೆ, ಮತೀಯ ಸೌಹಾರ್ದದ ಉಪದೇಶ ನೀಡುತ್ತಾರೆ. ತಮ್ಮ ಮಠಮಂದಿರ ಮಸೀದಿ ಚರ್ಚುಗಳಲ್ಲೇ ಜಾತಿ, ಉಪಜಾತಿ, ವರ್ಗ, ಇತ್ಯಾದಿ ಆಧಾರದಲ್ಲಿ ವಿಂಗಡಣೆ ಮಾಡುವ ಇವರು ಚುನಾವಣೆಯ ಸಂದರ್ಭದಲ್ಲಿ ಎಲ್ಲರೂ ಎಲ್ಲ ಮಠಮಂದಿರ ಮಸೀದಿ ಚರ್ಚು ಎಲ್ಲವಕ್ಕೂ ಹೋಗಿ ಭಕ್ತಿಯ ಪರಾಕಾಷ್ಠೆಯನ್ನು ಮೆರೆಯುತ್ತಾರೆ.

(ಸಿಕ್ಕಿದ್ದು ಬಿಟ್ಟಿದ್ದಕ್ಕೆಲ್ಲ ಫತ್ವಾ ಹೊರಡಿಸುವ ಮುಸ್ಲಿಂ 'ಧರ್ಮಿಷ್ಠ'ರು ಚುನಾವಣೆ ವೇಳೆ ತಮ್ಮ ಕೋಮಿನ (ಜಮೀರ್ ಅಹಮದ್‌ನಂಥ) ರಾಜಕಾರಣಿ ಹಿಂದು ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿದರೂ ಸುಮ್ಮನಿರುತ್ತಾರೆ, ಹೋಮ ಹವನ ಮಾಡಿದರೂ ಸುಮ್ಮನಿರುತ್ತಾರೆ!)

ಈ ರಾಜಕಾರಣಿಗಳ ಚುನಾವಣಾ ಪ್ರಚಾರ ಭಾಷಣ ಅದು ಇನ್ನೊಂದು ಮಹಾನಾಟ. ಸುಳ್ಳು ಆವೇಶ, ಪೊಳ್ಳು ಭರವಸೆ ಮತ್ತು ಕಳ್ಳ ಕಣ್ಣೀರಿನ ಮೂಲಕ ಇವರದು ಅತ್ಯದ್ಭುತ ಅಭಿನಯ. ಅದನ್ನು ನಿಜವೆಂದು ನಂಬಿದ ಮುಗ್ಧ ಮತದಾರನಿಗೆ ಮಕ್ಮಲ್ ಟೋಪಿ! ತನ್ಮೂಲಕ ಮತದ ಅಪಹರಣ, ಪ್ರಜಾಪ್ರಭುತ್ವದ ಕೊಲೆ. (ಈ ಅಪಹರಣ ಸಾಲದೆಂಬಂತೆ ಮತದಾನದ ದಿನ ನಕಲಿ ಮತದಾನ ಬೇರೆ!)

ಇನ್ನು, ಇವರ ಚುನಾವಣಾ ಪ್ರಚಾರ ಭಾಷಣವನ್ನೊಂದಿಷ್ಟು ಗಮನಿಸಿ. ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯಾಗಲೀ ತಮ್ಮ ನಿರ್ದಿಷ್ಟ ಯೋಜನೆಗಳ ಬಗೆಗಾಗಲೀ ಈ ನೇತಾರರು ಜನರಿಗೆ ಏನಾದರೂ ಸ್ಪಷ್ಟ ಚಿತ್ರಣ ನೀಡುತ್ತಾರೆಯೇ? ಇಲ್ಲವೇ ಇಲ್ಲ. ಸ್ವರ್ಗವನ್ನೇ ನಿಮ್ಮೆದುರು ತಂದಿಕ್ಕುತ್ತೇವೆಂದು ಒಂದು ಬುರುಡೆ ಒಗಾಯಿಸಿ ಮಿಕ್ಕಂತೆ ವಿರೋಧ ಪಕ್ಷಗಳ ಜನ್ಮ ಜಾಲಾಡುವುದರಲ್ಲೇ ಸಮಯ ಕಳೆಯುತ್ತಾರೆ. ತಾನೆಂಥವನು, ತನ್ನ ಸಾಮರ್ಥ್ಯ ಎಂಥದು ಎಂಬುದನ್ನು ಮತದಾರರಿಗೆ ಮನದಟ್ಟು ಮಾಡಿಕೊಡುವ ಬದಲು ಹೈಕಮಾಂಡ್‌ನ ಗುಣಗಾನದಲ್ಲೇ ಮುಳುಗೇಳುತ್ತಾರೆ. ನಾವು ವೋಟು ಹಾಕಬೇಕಾದುದು ಈ ಅಭ್ಯರ್ಥಿಗೋ ಅಥವಾ ಸೋನಿಯಾ, ರಾಹುಲ್, ಅಡ್ವಾಣಿ, ದೇವೇಗೌಡ, ಕುಮಾರಸ್ವಾಮಿ ಇವರಲ್ಲೊಬ್ಬರಿಗೋ ಎಂದು ನಮಗೇ ಒಮ್ಮೊಮ್ಮೆ ಅನುಮಾನ ಬರುತ್ತದೆ. ಹೈಕಮಾಂಡ್ ವೀರರ ಭಾಷಣ ಇನ್ನೂ ಅಧ್ವಾನ. ಆವೇಶಭರಿತ ಕೆಸರೆರಚುವಿಕೆ ಬಿಟ್ಟು ಆ ಭಾಷಣದಲ್ಲಿ ಇನ್ನೇನೂ ಇರುವುದಿಲ್ಲ.

ತಮ್ಮ ವಿರೋಧಿಗಳನ್ನು ಜರಿಯುವ ಈ ಪುಢಾರಿಗಳ ಮಾತೆಲ್ಲ ನಿಜವೆಂದಾದರೆ ಆಗ ಎಲ್ಲ ಪಕ್ಷಗಳ ಎಲ್ಲ ರಾಜಕಾರಣಿಗಳೂ ಭ್ರಷ್ಟರು, ದುಷ್ಟರು, ವಂಚಕರು ಮತ್ತು ಜೈಲು ಸೇರಬೇಕಾದ ಅಪರಾಧಿಗಳು ಎಂದಾಯಿತು. ಆದರೆ ಜೈಲು ಸೇರಬೇಕಾದ ಇವರು ಲೋಕಸಭೆ ಮತ್ತು ವಿಧಾನಸಭೆ ಸೇರುತ್ತಾರೆ. ಇದು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವವೆನ್ನುವುದು ಈ ನಮ್ಮ ರಾಜಕಾರಣಿಗಳಿಗೆ ಆಟದ ವಸ್ತುವಾಗಿದೆ. ನಾಟಕದ ಡೈಲಾಗ್ ಆಗಿದೆ. ವೋಟಿನ ಸಾಧನವಾಗಿದೆ. ಸೀಟಿನ ಲೈಸೆನ್ಸ್ ಆಗಿದೆ.

ಎಂದೇ, ಚುನಾವಣೆ ಬಂತೆಂದರೆ ಸಾಕು, 'ದಾಸನ ಮಾಡಿಕೊ ಎನ್ನ, ಸ್ವಾಮಿ, ಸಾಸಿರ ನಾಮದ ಪ್ರಿಯ ಮತದಾರ', ಎಂದು ಮತದಾರನನ್ನು ಪ್ರಾರ್ಥಿಸುವ ಇವರು ಚುನಾವಣೆ ಮುಗಿದ ಬೆನ್ನಿಗೇ, 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ವೋಟಿನ ಬಲವೊಂದ್ ಸಿಕ್ತಲ್ಲ, ಸಾಕೋ', ಎಂದು ಮತದಾರನಿಗೆ ಬೆನ್ನುಹಾಕಿ ತಮ್ಮ ದಂತಗೋಪುರಗಳೆಡೆಗೆ ಹೊರಟುಹೋಗುತ್ತಾರೆ. ರಾಜಕಾರಣಿಗಳೇನೋ ಇಂಥವರು; ಆದರೆ ಮತದಾರ ಎಂಥವನು? ಅದು ಬೇರೆಯೇ ಕಥೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+