ತಾಕತ್ತಿದ್ದರೆ ನನ್ನ ಕತ್ತು ಕತ್ತರಿಸಿ : ಸಿದ್ದು

 Siddu slams BJP idealogy
ಕುಂದಗೋಳ (ಹುಬ್ಬಳ್ಳಿ), ಏ. 21 : ಹಿಂದೂತ್ವ ವಿರುದ್ಧ ಮಾತನಾಡುವೆ, ತಾಕತ್ತಿದ್ದರೆ ನನ್ನ ಕತ್ತು ಕತ್ತರಿಸಿ ನೋಡೋಣ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ಹಿಂದೂತ್ವ ವಿರೋಧಿಸುವವರ ಕತ್ತು ಕತ್ತರಿಸುವೆ ಎಂದು ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಕಾಗೋಡಿ ತಿಮ್ಮಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕಾಂಗ್ರೆಸ್ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ವಿರುದ್ದ ದೊಡ್ಡ ಆರೋಪ ಪಟ್ಟಿಯನ್ನೇ ಮಾಡಿದರು. ಯಡಿಯೂರಪ್ಪ ಸುಳ್ಳಿನ ಸರದಾರ. ಬಿಜೆಪಿ ಸರಕಾರ ಏನೂ ಘನಂಧಾರಿ ಕಾರ್ಯಗಳನ್ನು ಮಾಡಿದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸುತ್ತಿದ್ದಾರೆ. ಆವರ ಕಾರ್ಯಕ್ರಮಗಳು ಜನರ ಉಪಯೋಗಕ್ಕೆ ಬಂದಿವೆಯೇ ಎಂದು ಸಿದ್ದು ಪ್ರಶ್ನಿಸಿದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕೆಲವು ಭಾರಿ ಬದಲಾವಣೆಯಾಗಿವೆ, ಕೋಮುವಾದಿತನ ಇನ್ನಷ್ಟು ಗಟ್ಟಿಕೊಂಡಿದೆ. ಅಲ್ಪಸಂಖ್ಯಾತರು ಭಯದ ನೆರಳಲ್ಲಿ ಬದುಕುವಂತಾಗಿದೆ. ಪಬ್ ದಾಳಿ, ಚರ್ಚ್ ಮೇಲಿನ ದಾಳಿ ಯಾವುದೇ ಮುಲಾಜಿಲ್ಲದೇ ನಡೆದಿವೆ. ಇದು ಯಡಿಯೂರಪ್ಪ ನೇತೃತ್ವ ಸರಕಾರದ ಸಾಧನೆ ಎಂದು ಟೀಕಿಸಿದರು.

ಎನ್ ಡಿಎ ಅಧಿಕಾರದಲ್ಲಿದ್ದಾಗ ರಾಮಮಂದಿರ ಕಟ್ಟುವ ಕೆಲಸ ಇವರಿಗೆ ಏಕೆ ನೆನಪಾಗಲಿಲ್ಲ. ರಾಮಮಂದಿರ ಕಟ್ಟುತ್ತೇವೆ ಎಂದು ದೇಶ-ವಿದೇಶಗಳಿಂದ ಕೋಟ್ಯಂತರ ರುಪಾಯಿ ವಸೂಲಿ ಮಾಡಿದ ಬಿಜೆಪಿ ನಾಯಕರು ಅದರ ಲೆಕ್ಕ ಕೊಟ್ಟಿದ್ದಾರೆಯೇ ಪ್ರಶ್ನಿಸಿದರು. ಮೀಸಲಾತಿ ವಿರೋಧಿ ಆಗಿರುವ ಬಿಜೆಪಿಯಿಂದ ದೇಶದ ಉದ್ಧಾರ ಕನಸಿನ ಮಾತೇ ಸರಿ. ಆಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಮುಂದಾದ ಸರಕಾರವಿದೆ. ಇವರ ಅಧಿಕಾರಕ್ಕೆ ಬಂದರೆ ದೇಶದ ಗಂಡಾಂತರ ತಪ್ಪಿದ್ದಲ್ಲ ಎಂದು ಸಿದ್ದು ಗುಡುಗಿದರು.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+