ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಾಪುರ ಲೋಕಸಭೆ ಕ್ಷೇತ್ರ ಪರಿಚಯ

By Staff
|
Google Oneindia Kannada News

ಬೆಂಗಳೂರು, ಏ. 17 : ಈ ಬಾರಿಯಿಂದ ಬಿಜಾಪುರ ಪರಿಶಿಷ್ಟ ಜಾತಿಗೆ ಮೀಸಲು. ಎಲ್ಲಾ ಇದ್ದರೂ ಜನರಿಗೆ ಏನೂ ಇಲ್ಲದ ಪರಿಸ್ಥಿತಿ. ನದಿ ಇದ್ದರೂ ಬರ, ಐತಿಹಾಸಿಕ ಪ್ರವಾಸಿ ಸ್ಥಳವಿದ್ದರೂ ಬಿಸಿಲೂರು. ಆಲಮಟ್ಟಿ ಅಣೆಕಟ್ಟು ಇಲ್ಲಿನ ಜನತೆಗೆ ವರ ಮತ್ತು ಶಾಪ. ಮುದ್ದೇಬಿಹಾಳ, ಬಸವನ ಬಾಗೇವಾಡಿ, ಸಿಂಧಗಿ ಮತ್ತು ಇಂಡಿ ತಾಲೂಕು ಮುಕ್ತಿ ಪಡೆದಿದ್ದರೆ ಬಿಜಾಪುರ ತಾಲೂಕಿನ ಬಹುತೇಕ ಹಳ್ಳಿಗಳು ನೀರಾವರಿ ಯೋಜನೆಯಿಂದ ವಂಚಿತವಾಗಿದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಡುವೆ ನೇರ ಹಣಾಹಣಿ. ಇಲ್ಲಿನ ಬಿಜೆಪಿಗೆ ಅಭ್ಯರ್ಥಿ ರಮೇಶ್ ಜಿಗಜಿಣಗಿ ಮೂಲತಃ ದ್ರಾಕ್ಷಿ ವ್ಯಾಪಾರಿ. ಇಷ್ಟು ದಿನ ಚಿಕ್ಕೋಡಿಯಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇನ್ನು ಒಂದು ಕಾಲದ ಸ್ಪಿನ್ ಬೌಲರ್, ಕ್ರಿಕೆಟಿಗ ಪ್ರಕಾಶ್ ರಾಥೋಡ ಕಾಂಗ್ರೆಸ್ ಅಭ್ಯರ್ಥಿ. ಚುನಾವಣೆ ಇರುವುದರಿಂದ ಇಲ್ಲೇ ವಾಸವಾಗಿದ್ದಾರೆ, ಇಲ್ಲವಾದರೆ ಬೆಂಗಳೂರಿನಲ್ಲೇ ಹೆಚ್ಚು ವಾಸ. ಒಟ್ಟಿನಲ್ಲಿ ಕ್ಷೇತ್ರದ ಜನತೆಗೆ ಇಬ್ಬರು ಹೊಸಬರೇ.

ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಐದು ಬಿಜೆಪಿ ಮತ್ತು ಮೂರರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕ್ಷೇತ್ರದ ಸದ್ಯದ ಲೆಕ್ಕಾಚಾರ ನೋಡಿದರೆ ಏಕದಿನ ಪಂದ್ಯದ ತರ. ಕೊನೆ ಓವರ್ ನಲ್ಲಿ ವಿಜಯಲಕ್ಷಿ ಯಾರಿಗೆ ಒಲಿಯುತ್ತಾಳೋ ನೋಡಬೇಕು. ಲಂಬಾಣಿ ಜನಾಂಗದ ಮೇಲೆ ಎಲ್ಲರ ಕಣ್ಣು, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿಯವರ ಮತವಿದೆ. ಕ್ಷೇತ್ರದ ಕೆಲವೊಂದು ಕಾಂಗ್ರೆಸ್ ಶಾಸಕರು ಶತಾಯುಗತಾಯು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಹೀಗಾಗಿ ಮೂರು ಕ್ಷೇತ್ರಗಳಲ್ಲಿ ಪಕ್ಷದ ಸ್ಥಿತಿ ಉತ್ತಮವಾಗಿದೆ. ಆದರೆ ಸುಮಾರು 3 ಲಕ್ಷವಿರುವ ಲಿಂಗಾಯಿತ ಸಮಾಜದಲ್ಲಿ ಹೆಚ್ಚು ಪ್ರೀತಿ ಸಂಪಾದಿಸಿರುವ ರಮೇಶ್ ಜಿಗಜಿಣಗಿ ಯಾವ ಜಾದು ಮಾಡುತ್ತಾರೆಂದು ಕಾದುನೋಡಬೇಕಿದೆ.

* ಕ್ಷೇತ್ರ - ಬಿಜಾಪುರ ಲೋಕಸಭೆ ಕ್ಷೇತ್ರ (ಮೀಸಲು ಪರಿಶಿಷ್ಟ ಜಾತಿ)
* ಚುನಾವಣೆ ದಿನಾಂಕ - ಏಪ್ರಿಲ್ 23

ಅಭ್ಯರ್ಥಿಗಳು

* ಕಾಂಗ್ರೆಸ್ - ಪ್ರಕಾಶ್ ರಾಥೋಡ
* ಬಿಜೆಪಿ - ರಮೇಶ್ ಜಿಗಜಿಣಗಿ
* ಜನತಾದಳ (ಎಸ್) - ವಿಲಾಸರಾವ್ ಆಲಮೇಲಕರ
* ಎಸ್ಪಿ - ಕನಮಡಿ ಸುಧಾಕರ ಮಲ್ಲೇಶ್

ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು

* ಮುದ್ದೇಬಿಹಾಳ
* ದೇವರ ಹಿಪ್ಪರಗಿ
* ಬಸವನ ಬಾಗೇವಾಡಿ
* ಬಬ್ಬಲೇಶ್ವರ
* ನಾಗಠಾಣ
* ಇಂಡಿ
* ಸಿಂಧಗಿ
* ಬಿಜಾಪುರ ನಗರ

* ಒಟ್ಟು ಮತದಾರರು - 13.52 ಲಕ್ಷ
* ಪುರುಷರು - 6.99 ಲಕ್ಷ
* ಮಹಿಳೆಯರು - 6.53 ಲಕ್ಷ

ಜಾತಿವಾರು ಲೆಕ್ಕಾಚಾರ (ಅಂದಾಜು)

* ಲಿ೦ಗಾಯಿತ 3 ಲಕ್ಷ
* ಲ೦ಬಾಣಿ 2.3 ಲಕ್ಷ
* ಪರಿಶಿಷ್ಟ ಜಾತಿ ಮತ್ತು ಪ೦ಗಡ 2.40 ಲಕ್ಷ
* ಕುರುಬರು 2.3 ಲಕ್ಷ
* ಮುಸ್ಲಿ೦ 1.60 ಲಕ್ಷ
* ಕ್ರೈಸ್ತರು 65 ಸಾವಿರ
* ಇತರರು - 1.3 ಲಕ್ಷ

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X