ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರು ಲೋಕಸಭಾ ಕ್ಷೇತ್ರ ಪರಿಚಯ

By Staff
|
Google Oneindia Kannada News

ಬೆಂಗಳೂರು, ಏ. 16 : ಗಂಡುಮೆಟ್ಟಿನ ನೆಲವೆಂದೇ ಪ್ರತೀತಿ. ಕಳೆದ ಎರಡು ದಶಕಗಳಿಂದ ವಾಲ್ಮೀಕಿ ಜನಾಂಗದವರಿಗೆ ಮಣೆ ಹಾಕುತ್ತಾ ಬಂದ ಕ್ಷೇತ್ರ. ಸಂಸದರ ಅಸಡ್ಡೆ ಹಾಗೂ ಅಭಿವೃದ್ದಿ ಕುಂಠಿತ ಎಂಬುದು ಇಲ್ಲಿ ದಿನನಿತ್ಯದ ಹಾಡು. ಕ್ಷೇತ್ರದಲ್ಲಿರುವ ಶೇ. 40ರಷ್ಟು ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ದೈನಂದಿನ ಹೊಟ್ಟೆಪಾಡಿನ ಚಿಂತೆ. ಇದುವರೆಗೆ ಕೇಂದ್ರ ಮಂತ್ರಿಮಂಡಲದಲ್ಲಿ ಇಲ್ಲಿಯ ಯಾರೊಬ್ಬರೂ ಸ್ಥಾನ ಪಡೆದಿಲ್ಲ. ಕ್ಷೇತ್ರ ಮರುವಿಂಗಡಣೆಯ ನಂತರ ಕಲ್ಮಲಾ ವಿಧಾನಸಭಾ ಕ್ಷೇತ್ರ ರೂಪಾಂತರಗೊಂಡು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷತ್ರವಾಗಿ ಜನ್ಮತಾಳಿದೆ. ಈಗ ತಾನೇ ಉದಯಿಸಿದ್ದ ಮಸ್ಕಿ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ.

ಮುಂಬಯಿ - ಚೆನ್ನೈ ಬ್ರಾಡಗೇಜ್ ಮತ್ತು ಗದ್ವಾಲ್ - ರಾಯಚೂರು ಹೊಸ ರೈಲ್ವೆ ಮಾರ್ಗ ನಿರ್ಮಾಣದ ಅಂತಿಮ ಹಂತದಲ್ಲಿದೆ. ಹಟ್ಟಿ ಚಿನ್ನದಗಣಿ, ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ, 100 ಕ್ಕೂ ಅಕ್ಕಿಗಿರಣಿಗಳು, ಹತ್ತಿ ಜಿನ್ನಿಂಗ್ ಫ್ಯಾಕ್ಟರಿಗಳು ಸಾವಿರಾರು ಜನರಿಗೆ ಕೆಲಸಕೊಟ್ಟಿದೆ. ಇತಿಹಾಸ ಪ್ರಸಿದ್ದ ಜಲದುರ್ಗ, ಮಲಯ ಬಾದ್ ಮುಂತಾದ ತಾಣಗಳು ಕ್ಷೇತ್ರದ ವಿಶೇಷ. ಭತ್ತ, ಹತ್ತಿ, ಮೆಣಸಿನಕಾಯಿ, ಶೇಂಗಾ, ಹೈಬ್ರಿಡ್ ಜೋಳ, ಸೂರ್ಯಕಾಂತಿ ಪ್ರಧಾನ ಬೆಳೆಗಳು.

* ಕ್ಷೇತ್ರ - ರಾಯಚೂರು (ಎಸ್ ಟಿ ಮೀಸಲು)
* ಚುನಾವಣೆ ದಿನಾಂಕ - ಎಪ್ರಿಲ್ 23

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು

* ಯಾದಗಿರಿ
* ಶಹಾಪುರ
* ಸುರಪುರ
* ಲಿಂಗಸುಗೂರು
* ದೇವದುರ್ಗ
* ಮಾನ್ವಿ
* ರಾಯಚೂರು ನಗರ
* ರಾಯಚೂರು ಗ್ರಾಮೀಣ

ಅಭ್ಯರ್ಥಿಗಳು

* ಕಾಂಗ್ರೆಸ್ - ವೆಂಕಟೇಶ ನಾಯಕ,
* ಬಿಜೆಪಿ - ಸಣ್ಣಫಕೀರಪ್ಪ
* ಜೆಡಿಎಸ್ - ರಾಜಾ ರಂಗಪ್ಪ ನಾಯಕ

* ಒಟ್ಟು ಮತದಾರರು: 14.76 ಲಕ್ಷ
* ಪುರುಷರು 7.34 ಲಕ್ಷ
* ಮಹಿಳೆಯರು 7.42 ಲಕ್ಷ

ಜಾತಿವಾರು ಲೆಕ್ಕಾಚಾರ

* ಎಸ್ ಸಿ 3.32 ಲಕ್ಷ
* ಎಸ್ ಟಿ 2.91 ಲಕ್ಷ
* ಲಿಂಗಾಯಿತ 1.95 ಲಕ್ಷ
* ಕುರುಬ 1.73 ಲಕ್ಷ
* ಮುಸ್ಲಿಂ 1.61 ಲಕ್ಷ
* ಗಂಗಾಮತಸ್ಥ 36,000 ಸಾವಿರ
* ಕ್ರೈಸ್ತರು 22,000 ಸಾವಿರ
* ಬ್ರಾಹ್ಮಣರು 19,000 ಸಾವಿರ
* ವೈಶ್ಯರು 12,000 ಸಾವಿರ
* ಈಡಿಗರು 17,900 ಸಾವಿರ
* ಯಾದವ 14,500 ಸಾವಿರ
* ಮಡಿವಾಳರು 10,000 ಸಾವಿರ
* ಇತರರು 83,000 ಸಾವಿರ.

ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ

* ಅನಕ್ಷರತೆ ನಿವಾರಣೆ
* ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತಂದು ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ.
* ನಾರಾಯಣಪುರ ಬಲದಂಡೆ ಕಾಲುವೆ 157ನೇ ಕಿ.ಮೀ ವರೆಗೆ ವಿಸ್ತರಣೆ.
* ಹಟ್ಟಿ ಚಿನ್ನದಗಣೆ ಕಂಪನಿಗೆ ಉತ್ತರಭಾಗದ ಗಣಿಗಾರಿಕೆ ಪರವಾನಿಗೆ.
* ಮುನಿರಾಬಾದ್ - ಮೆಹಬೂಬನಗರ ಹೊಸ ಬ್ರಾಡ್ ರೈಲ್ವೆ ಮರ್ಗ ನಿರ್ಮಾಣ ಚುರುಕು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X