ಮಧ್ಯಪ್ರದೇಶದಲ್ಲಿ ಅಡ್ವಾಣಿ ಮೇಲೆ ಚಪ್ಪಲಿ ಎಸೆತ
ಭೋಪಾಲ್,
ಏ. 16 : ಮಧ್ಯಪ್ರದೇಶದ ಕತ್ನಿ ಎಂಬಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಅಡ್ವಾಣಿ ಅವರ ಮೇಲೆ ಕಾರ್ಯಕರ್ತನೋರ್ವ ಚಪ್ಪಲಿ ಎಸೆದು ರಾದ್ಧಾಂತ ಎಬ್ಬಿಸಿದ್ದಾನೆ. id="toptextpromo">ಕೆಲ
ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಸಿಖ್ ವಿರೋಧಿ ನೀತಿಯನ್ನು ವಿರೋಧಿಸಿ ಪತ್ರಕರ್ತ ದೈನಿಕ್ ಜಾಗರಣ್ ಜರ್ನೇಲ್ ಸಿಂಗ್ ಗೃಹ ಸಚಿವ ಪಿ. ಚಿದಂಬರಂ ಮೇಲೆ ಪಾದರಕ್ಷೆ ಎಸೆದು ಬಂಧಿತನಾಗಿದ್ದ. ಆದರೆ, ಈ ಬಾರಿ ಅಡ್ವಾಣಿ ಮೇಲೆ ಚಪ್ಪಲಿ ಎಸೆದಿರುವುದು ಸ್ವತಃ ಬಿಜೆಪಿ ಪಕ್ಷದ ಕಾರ್ಯಕರ್ತನೆಂಬುದು ಗಮನಾರ್ಹ. id='are-slot-1' class='oiad oi-axt oiadv'> id='top-searched-articles'>ಚಪ್ಪಲಿ
ಎಸೆದವನನ್ನು ಪಾವಸ್ ಅಗರವಾಲ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.











Click it and Unblock the Notifications