ಉತ್ತರಕನ್ನಡ (ಕೆನರಾ) ಕ್ಷೇತ್ರದ ಪರಿಚಯ

ಅಪರಿಮಿತ ಮತ್ಸ್ಯ ಸಂಪತ್ತಿರುವ ಕಡಲು, ಕರಾವಳಿ, ಕೃಷಿಯಿಂದ ನಳನಳಿಸುವ ಬಯಲು ಸೀಮೆ, ಅತ್ಯಮೂಲ್ಯ ಸಸ್ಯಗಳು ಮತ್ತು ನಿಸರ್ಗ ರಮಣೀಯ ಭೌಗೋಳಿಕತೆಗಳಿರುವ ಕ್ಷೇತ್ರ. ವರ್ಷವಿಡೀ ತುಂಬಿ ತುಳುಕುವ ನದಿಗಳು, ಜಲಪಾತಗಳು ಇಲ್ಲಿನ ಪ್ರಕೃತಿಯ ಆಭರಣಗಳು. ಅಡಿಕೆ, ತೆಂಗು, ಏಲಕ್ಕಿ, ಭತ್ತ,ಶೇಂಗ, ಕಾಳುಮೆಣಸು, ಜಾಯಿಕಾಯಿ ಇತ್ಯಾದಿ ಕೃಷಿ ಹಾಗು ತೋಟಗಾರಿಕ ಉತ್ಪನ್ನಗಳು ಕ್ಷೇತ್ರದ ಪ್ರಮುಖ ಬೆಳೆ. ಗೋಕರ್ಣ, ಯಾಣ, ಮುರುಡೇಶ್ವರ ಮುಂತಾದ ಪ್ರಸಿದ್ದ ಯಾತ್ರಾಸ್ಥಳಗಳಿವೆ, ಕೈಗಾ, ಅಣುವಿದ್ಯುತ್ ಯೋಜನೆ, ಸುಸಜ್ಜಿತ ಸೀಬರ್ಡ ನೌಕಾನೆಲೆ, ಕಾಳಿ, ಶರಾವತಿ ಜಲವಿದ್ಯುತ್ ಯೋಜನೆ, ಕೊಂಕಣ ರೈಲ್ವೆ ಇತ್ಯಾದಿ ಪ್ರತಿಷ್ಠಿತ ಯೋಜನೆಗಳ ತವರೂರು.
* ಕ್ಷೇತ್ರ - ಉತ್ತರಕನ್ನಡ (ಕೆನರಾ)
* ಚುನಾವಣೆ ದಿನಾಂಕ - ಏಪ್ರಿಲ್ 23
ಅಭ್ಯರ್ಥಿಗಳು
* ಕಾಂಗ್ರೆಸ್ - ಮಾರ್ಗರೆಟ್ ಆಳ್ವ
* ಬಿಜೆಪಿ - ಅನಂತ ಕುಮಾರ್ ಹೆಗಡೆ
* ಜನತಾದಳ -ವಿ ಡಿ ಹೆಗಡೆ
ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು
* ಹಳಿಯಾಳ
* ಕಾರವಾರ
* ಯಲ್ಲಾಪುರ
* ಶಿರಸಿ
* ಕುಮಟ
* ಭಟ್ಕಳ
* ಒಟ್ಟು ಮತದಾರರು - 12.74 ಲಕ್ಷ
* ಪುರುಷರು - 6.87 ಲಕ್ಷ
* ಮಹಿಳೆಯರು - 6.67 ಲಕ್ಷ
ಜಾತಿವಾರು ಲೆಕ್ಕಾಚಾರ
*ನಾಮಧಾರಿಗಳು 2.25 ಲಕ್ಷ
* ಬ್ರಾಹ್ಮಣ 2 ಲಕ್ಷ
* ಹಾಲಕ್ಕಿ 2 ಲಕ್ಷ
* ಲಿಂಗಾಯತರು 1.5 ಲಕ್ಷ
* ಎಸ್ ಸಿ 1.2 ಲಕ್ಷ
* ಎಸ್ ಟಿ 24 ಸಾವಿರ
* ಮರಾಠ 1.75 ಲಕ್ಷ
* ಮುಸ್ಲಿಂ 2 ಲಕ್ಷ
ಕ್ಷೇತ್ರದ ಸಮಸ್ಯೆಗಳು
* ಅಪಾರ ಪ್ರಮಾಣದ ಕಬ್ಬಿಣದ ಅದಿರಿನ ವಹಿವಾಟಿನಿಂದ ಸಾವು, ನೋವು ಮತ್ತು ಪರಿಸರ ಹಾನಿ
* ಸೀಬರ್ಡ್ ಯೋಜನೆಯ ನಿರಾಶ್ರಿತರಿಗೆ ಸಿಗದ ಸೂಕ್ತ ಪರಿಹಾರ
* ಕ್ಷೇತ್ರದ ಅನೇಕ ಹಳ್ಳಿಗಳಲ್ಲಿ ವಿದ್ಯುತ್, ರಸ್ತೆ , ಇತರ ಮೂಲ ಸೌಕರ್ಯಗಳಿಲ್ಲ.
* ಇತ್ತೀಚಿಗೆ ಆತಂಕವಾದಿಗಳ ಅಡಗುತಾಣ
* ಹೆದ್ದಾರಿಗಳ ದುರಸ್ತಿ ಮತ್ತು ಕಡಲ್ಗೊರೆತ
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications