ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ಲೋಕಸಭೆ ಕ್ಷೇತ್ರದ ವಿವರ

By Staff
|
Google Oneindia Kannada News

ಬೆಂಗಳೂರು, ಏ. 9 : ಬೆಂಗಳೂರಿನಿಂದ ಕೇವಲ 75 ಕಿಮೀ ದೂರದಲ್ಲಿದ್ದರೂ ಅಭಿವೃದ್ದಿ ಕಾಣದ ಕ್ಷೇತ್ರ. ರಾಗಿ, ತೆಂಗು, ಅಡಿಕೆ, ಶೇಂಗಾ, ರೇಷ್ಮೆ ಕ್ಷೇತ್ರದ ಪ್ರಮುಖ ಬೆಳೆ. ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು, ಶೈಕ್ಷಣಿಕ ಸಂಸ್ಥೆಯನ್ನು ಯಾವ ರೀತಿ ನಡೆಸಬೇಕೆನ್ನುವುದಕ್ಕೆ ಮಾದರಿಯಾಗಿರುವ ಸಿದ್ದಗಂಗಾ ಮಠ, ಕೈದಾಳ, ಗೊರವನಹಳ್ಳಿಯಂತ ದೇವಸ್ಥಾನಗಳು ಕ್ಷೇತ್ರದ ಪ್ರಮುಖ ಆಕರ್ಷಣೆ. ರಾಜ್ಯದ ರಾಜಧಾನಿಗೆ ಸಮೀಪದಲ್ಲಿದ್ದರೂ ಹಿಂದುಳಿದ ಜಿಲ್ಲೆಗಳಲ್ಲಿ ಎರಡನೇ ಸ್ಥಾನ ಪಡೆದಿದೆ ಎನ್ನುವ ಕುಖ್ಯಾತಿ.

ಕ್ಷೇತ್ರ ವಿಂಗಡಣೆಯ ನಂತರ ಚಿಕ್ಕಬಳ್ಳಾಪುರಕ್ಕೆ ಸೇರಿದ್ದ ಕೊರಟಗೆರೆ ಮತ್ತು ಮಧುಗಿರಿ ತಾಲೂಕುಗಳು ಈಗ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹಾಗೇ ಹುಲಿಯೂರು ದುರ್ಗಾ ಮತ್ತು ಕುಣಿಗಲ್ ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಹೋಗಿದೆ. ಕ್ಷೇತ್ರದ ಕಿರು ಪರಿಚಯ ಈ ರೀತಿ ಇದೆ.

ಕ್ಷೇತ್ರ - ತುಮಕೂರು
ಸ್ಪರ್ಧಿಸಿರುವ ಅಭ್ಯರ್ಥಿಗಳು
* ಕಾಂಗ್ರೆಸ್ - ಕೋದಂಡರಾಮಯ್ಯ
* ಬಿಜೆಪಿ - ಜಿ ಎಸ್ ಬಸವರಾಜ್
* ಜನತಾದಳ - ಮುದ್ದಹನುಮೇ ಗೌಡ
* ಬಿಎಸ್ಪಿ - ಚಿತ್ರನಟ ಅಶೋಕ್
* ಎಸ್ಪಿ - ಗೌರಿಶಂಕರ್ ಸ್ವಾಮೀಜಿ

ಕ್ಷೇತ್ರ ವ್ಯಾಪ್ತಿಯ ತಾಲೂಕುಗಳು -
* ಚಿಕ್ಕನಾಯಕನ ಹಳ್ಳಿ
* ಮಧುಗಿರಿ
* ಗುಬ್ಬಿ
* ಕೊರಟಗೆರೆ
* ತುರುವೇಕೆರೆ
* ತಿಪಟೂರು
* ತುಮಕೂರು ನಗರ
* ತುಮಕೂರು ಗ್ರಾಮಾಂತರ.

* ಮತದಾನದ ದಿನಾಂಕ - ಏಪ್ರಿಲ್ 23

* ಒಟ್ಟು ಮತದಾರರು - 13.70 ಲಕ್ಷ
* ಪುರುಷರು - 6.96 ಲಕ್ಷ
* ಮಹಿಳೆಯರು - 6.74 ಲಕ್ಷ

ಜಾತಿವಾರು ಲೆಕ್ಕಾಚಾರ
* ಒಕ್ಕಲಿಗ -2.57 ಲಕ್ಷ
* ಲಿಂಗಾಯತ - 2.49 ಲಕ್ಷ,
* ಒಬಿಸಿ - 3.99 ಲಕ್ಷ
* ಮುಸ್ಲಿಂ 1.35 ಲಕ್ಷ
* ಕುರುಬ - 1.88 ಲಕ್ಷ
* ಎಸ್ ಸಿ - 1.43 ಲಕ್ಷ * ಎಸ್ ಟಿ - 83 ಸಾವಿರ
* ತಿಗಳ - 77 ಸಾವಿರ
* ಗೊಲ್ಲ - 66 ಸಾವಿರ
* ಉಪ್ಪಾರ 35 ಸಾವಿರ
* ದೇವಾಂಗ 22 ಸಾವಿರ

ಕ್ಷೇತ್ರದಿಂದ ಆಯ್ಕೆ ಬಯಸಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಗಮನಕ್ಕೆ ಕೆಲವೊಂದು ಸಮಸ್ಯೆಗಳ ಪಟ್ಟಿ :

* ಹಿಂದುಳಿದಿರುವುದರಿಂದ ಉದ್ಯೋಗ ಅರಸಿ ನಗರಕ್ಕೆ ಯುವಜನತೆಯ ಗುಳೇ
* ಬಡತನ, ಕೊಳೆಗೇರಿ, ಕುಡಿಯುವ ನೀರಿನ ಕೊರತೆ ಹಾಗು ನೀರಾವರಿ
* ವಸತಿ ಸಮಸ್ಯೆ,
* ರಾಜಧಾನಿಗೆ ಸಮೀಪವಿರುವುದರಿಂದ ರಿಯಲ್ ಎಸ್ಟೇಟ್ ಪ್ರಾಭಲ್ಯ
* ಕೃಷಿಭೂಮಿ ಪರಭಾರೆ

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X