ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ವರ್ಷದೊಳಗೆ ಎಲ್ಲರಿಗೂ ಸೂರು, ದೇವೇಗೌಡ

By Staff
|
Google Oneindia Kannada News

Devegowda releases kannada version election manifesto
ಬೆಂಗಳೂರು, ಏ. 9 : ಮುಂದಿನ ಐದು ವರ್ಷದೊಳಗೆ ದೇಶದಲ್ಲಿ ಮನೆಯಿಲ್ಲದ ಪ್ರತಿಯೊಬ್ಬರಿಗೂ ಕೂಡ ನೆತ್ತಿ ಮೇಲೊಂದು ಸೂರು ಕಲ್ಪಿಸುವ ದೃಡಸಂಕಲ್ಪವನ್ನು ಜೆಡಿಎಸ್ ಮಾಡಿದೆ ಎಂದು ಮಾಜಿ ಪ್ರಧಾನಿ ಹಾಗೂ ತೃತೀಯ ರಂಗದ ಮುಖಂಡ ಎಚ್ ಡಿ ದೇವೇಗೌಡ ಹೇಳಿದರು. ಪಕ್ಷದ ಕಚೇರಿಯಲ್ಲಿಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರಣಾಳಿಕೆಯ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಬಡವರ ಕಂಬನಿ ಒರೆಸುತ್ತೇವೆ. ಇಂದು ನಮ್ಮ ಸಂಕಲ್ಪ ಎಂದು ಗೌಡರು ಹೇಳಿದರು. ಮುಂದಿನ ಐದು ವರ್ಷದೊಳಗೆ ದೇಶಾದ್ಯಂತ ಸೂರಿಲ್ಲದವರನ್ನು ಗುರುತಿಸಿ ಪ್ರತಿಯೊಬ್ಬರಿಗೂ ಮನೆ ಹಂಚಿಕೆ ಮಾಡುವುದಾಗಿ ಭರವೆಸೆ ನೀಡಿದರು.

ಗ್ರಾಮೀಣ ಬಡವರಿಗಾಗಿ ಸರ್ಕಾರ ಪ್ರಾಯೋಜಿತ ವಸತಿ ಯೋಜನೆಯಡಿ ನೀಡುವ ಸಹಾಯಧನ ಹೆಚ್ಚಿಸಲಾಗುವುದು. ಅತ್ಯಂತ ಕಡಿಮೆ ದರದಲ್ಲಿ ಮನೆ ಸಾಲ ನೀಡುವ ರಾಷ್ಟ್ರೀಯ ವಸತಿ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು. ರೈತರ ಆತ್ಮಹತ್ಯೆ ತಡೆಗಟ್ಟಲು 1991 ರಿಂದ ಸುಸ್ತಿಯಾಗಿ ಬಾಕಿ ಉಳಿದಿರುವ ಸಣ್ಣ, ಅತಿ ಸಣ್ಣ ರೈತರು ಸಾರ್ವಜನಿಕ ಹಾಗೂ ಸಹಕಾರ ಬ್ಯಾಂಕ್ ಗಳ ಮೂಲಕ ಪಡೆದಿರುವ ಎಲ್ಲ ಸಾಲವನ್ನು ಮನ್ನಾ ಮಾಡಲಾಗುವುದು. ಬ್ಯಾಂಕ್ ಗಳಿಗೆ ಸಾಲದ ಹಣವನ್ನು ಕಂತಿನ ರೂಪದಲ್ಲಿ ನೀಡಲಾಗುವುದು ಎಂದು ಗೌಡರು ವಿವರಿಸಿದರು.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X