ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಫಕೀರಪ್ಪ ರಾಯಚೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ

By Staff
|
Google Oneindia Kannada News

ಬೆಂಗಳೂರು, ಏ. 6 : ಮಹತ್ವದ ಬೆಳವಣಿಗೆಯೊಂದರಲ್ಲಿ ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮೇರೇಶ ನಾಯಕರ ನಾಮಪತ್ರವನ್ನು ಹಿಂದಕ್ಕೆ ಪಡೆಯಲಾಗಿದ್ದು, ಸಚಿವ ಶ್ರೀರಾಮುಲು ಸಂಬಂಧಿ ಸಣ್ಣಫಕೀರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದೆ. ಈ ಸಂದರ್ಭದಲ್ಲಿ ರಾಜಾ ಅಮರೇಶ್ ನಾಯಕ ಅವರ ಬೆಂಬಲಿಗರು ವಿಧಾನ ಪರಿಷತ್ ಸದಸ್ಯ ಮನೋಹರ ಮಸ್ಕಿ ಅವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ.

ರಾಜಾ ಅಮರೇಶ ನಾಯಕ್ ಅವರ ಜಾತಿಗೆ ಸಂಬಂಧಿದಂತೆ ಸಮಸ್ಯೆ ತಲೆದೋರಿತ್ತು. ಜಾತಿ ಆಧಾರದ ಮೇಲೆ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಳ್ಳಲಿದೆ ಎನ್ನುವ ಸುದ್ದಿಯೂ ಹಬ್ಬಿತ್ತು. ಇದನ್ನು ಗಮನದಲ್ಲಿರಿಸಿಕೊಂಡ ಬಿಜೆಪಿ ಹೈಕಮಾಂಡ್ ಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಚಿವ ಶ್ರೀರಾಮುಲು ಅವರ ಸಹೋದರ ಸಂಬಂಧಿ ಎನ್ನಲಾದ ಸಣ್ಣಫಕೀರಪ್ಪ ಅವರೆ ರಾಯಚೂರು ಲೋಕಸಭೆ ಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲಾಯಿತು.

ಸಣ್ಣಫಕೀರಪ್ಪ ಬಿಜೆಪಿ ಎಂದು ಅಧಿಕೃತಗೊಂಡ ನಂತರ ರಾಜಾ ಅಮರೇಶ್ ಅವರ ಬೆಂಬಲಿಗರು ತೀವ್ರ ಅಸಮಾಧಾನಗೊಂಡು ಬಿಜೆಪಿ ವಿರುದ್ದ ಘೋಷಣೆ ಕೂಗತೊಡಗಿದರು. ಎಂಎಲ್ ಸಿ ಮನೋಹರ್ ಮಸ್ಕಿ ಅವರೇ ಅಮರೇಶ ನಾಯಕ ಅವರಿಗೆ ಟಿಕೆಟ್ ತಪ್ಪಸಲು ಕಾರಣ ಎಂದು ಮಸ್ಕಿ ಅವರ ಮೇಲೆ ಬೆಂಬಲಗರು ಹಲ್ಲೆ ನಡೆಸುವ ವಿಫಲ ಯತ್ನ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜಾ ಅಮೇರೇಶ ನಾಯಕ, ಪಕ್ಷ ವರಿಷ್ಠರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ನಾಮಪತ್ರ ನಾಪಸ್ ಪಜೆಯುವಂತೆ ಸಲಹೆ ನೀಡಿದ್ದರು. ಜಾತಿ ಆಧಾರಿತ ಗೊಂದಲ ತಲೆದೋರಿದ್ದರಿಂದ ಬಿಜೆಪಿ ಎರಡನೇ ಅಭ್ಯರ್ಥಿ ಸಣ್ಣಫಕೀರಪ್ಪ ಅಧಿಕೃತ ಅಭ್ಯರ್ಥಿಯಾಗಿದ್ದಾರೆ ಎಂದರು.

(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X