ಹಿರಿಯ ಕಾಂಗ್ರೆಸ್ಸಿಗ ಚಂದ್ರೇಗೌಡ ಬಿಜೆಪಿ ಸೇರ್ಪಡೆ

D B Chandregowda joins BJP
ಬೆಂಗಳೂರು, ಏ. 2 : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಿ ಬಿ ಚಂದ್ರೇಗೌಡ ಇಂದು ಅಧಿಕೃತವಾಗಿ ಕಮಲದ ತಕ್ಕೆಗೆ ಸೇರುವ ಸಾಧ್ಯತೆಗಳಿವೆ. ಬುಧವಾರ ರಾತ್ರಿಯೇ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀರಾಮೆ ಪತ್ರವನ್ನು ರವಾನಿಸಿರುವ ಅವರು, ಬೆಂಗಳೂರು ಉತ್ತರ ಕ್ಷೇತ್ರದಿಂದ ಬಿಜೆಪಿ ಹುರಿಯಾಳು ಆಗುವುದು ಖಚಿತವಾಗಿದೆ. ಈ ವಿಷಯವನ್ನು ಸ್ವತಃ ಚಂದ್ರೇಗೌಡರೆ ಬಹಿರಂಗಪಡಿಸಿದ್ದಾರೆ.

ಇನ್ನೊಂದಡೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ದೊರೆಯದಿದ್ದಲ್ಲಿ ಬಿಜೆಪಿ ಟಿಕೆಟ್ ನಿಂದ ಕಣಕ್ಕಿಳಿಯುವ ಸಿದ್ಥತೆಯಲ್ಲಿ ನಾಗಮಂಗಲದ ಮಾಜಿ ಶಾಸಕ ಎಲ್ ಆರ್ ಶಿವರಾಮೇಗೌಡ ತಾಲೀಮು ನಡೆಸಿದ್ದಾರೆ. ಈ ಕುರಿತು ಬಿಜೆಪಿ ನಾಯಕರೂ ಕೂಡಾ ಭಾರಿ ಚರ್ಚೆಯಲ್ಲಿ ತೊಡಗಿದ್ದು, ಕಾಂಗ್ರೆಸ್ ಟಿಕೆಟ್ ತಪ್ಪಿದ್ದಲ್ಲಿ ಶಿವರಾಮೇಗೌಡ ಕಮಲಕ್ಕೆ ಹಾರುವುದು ಸೂಕ್ತ ಎಂದು ತಮ್ಮ ಆಪ್ತ ವಲಯದಲ್ಲಿ ಶಿವರಾಮೇಗೌಡ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಶಶಿಕುಮಾರ್ ಜೆಡಿಎಸ್ ಗೆ
ಚಿತ್ರದುರ್ಗದ ಮಾಜಿ ಸಂಸದ ಹಾಗೂ ಚಿತ್ರ ನಟ ಶಶಿಕುಮಾರ್ ಅವರು ಇಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ಶಶಿಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಶಶಿಕುಮಾರ್ ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಸಂಸದರಾಗಿದ್ದರು. ನಂತರ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದು ಸೋಲನುಭವಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಸ್ಪರ್ಧಿ ದಾರುಣ ಸೋಲು ಅನುಭವಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)
ತೀವ್ರ ಕುತೂಹಲ ಕೆರಳಿಸಿದ ಕಾಂಗ್ರೆಸ್ ಪಟ್ಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+