442981bypollಉಪ-ಚುನಾವಣೆ ನಿಷೇಧಿಸಬೇಕೆ?/news/2009/03/31/should-by-polls-be-banned-in-india.htmlಇನ್ಮುಂದೆ ಭಾರತದಲ್ಲಿ ಉಪ-ಚುನಾವಣೆಗಳನ್ನು ನಿಷೇಧಿಸಬೇಕೆ? ಈ ಪ್ರಶ್ನೆಗೆ ನಾವು, ನಮ್ಮ ಪ್ರತಿನಿಧಿಗಳು ಮತ್ತು ಚುನಾವಣಾ ಆಯೋಗ ಕೂಡಲೆ ಉತ್ತರ ಕಂಡುಕೊಳ್ಳದಿದ್ದರೆ ಪ್ರಜಾತಂತ್ರಕ್ಕೆ ಅರ್ಥವಿರುವುದಿಲ್ಲ ಮತ್ತು ಮತದಾರನ ಒಂದೊಂದು ಮತಕ್ಕೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ.ಈ ಪ್ರಶ್ನೆ ಖಂಡಿತ ಚರ್ಚೆಯಲ್ಲಿದೆ ಮತ್ತು ಚರ್ಚೆಯಲ್ಲಿಯೇ ಇದೆ. ಭಾರತದ ಅರ್ಥವ್ಯವಸ್ಥೆ, ಸದ್ಯದ ಆರ್ಥಿಕ ಬಿಕ್ಕಟ್ಟು, ಚುನಾವಣೆಯಲ್ಲಿ ನಡೆಯುವ ಹಣ-ಹೆಂಡದ ಹೊಳೆ, ಭ್ರಷ್ಟಾಚಾರವನ್ನು ಗಮನದಲ್ಲಿಸಿರಿಕೊಂಡರೆ ಮೇಲಿನ 35620http://kannada.oneindia.com/img/2009/03/31-election-commission1.jpg442981bypollರಾಮನಗರ : ಜೆಡಿಎಸ್ ನಿಂದ ಕೆ ರಾಜು ಸ್ಪರ್ಧೆ/cj/poornachandra/2009/0729-k-raju-jds-candidate-from-ramanagara-assmbly.htmlರಾಮನಗರ, ಜು. 29 : ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿರುವ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತ ಕೆ ರಾಜು ಅವರನ್ನು ಅಖಾಡಕ್ಕಿಳಿಸಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತೀರ್ಮಾನಿಸಿದ್ದಾರೆ.ರಾಮನಗರ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರನ್ನು ಅಖಾಡಕ್ಕೆ ಇಳಿಸುವ ಚಿಂತನೆ ನಡೆದಿತ್ತಾದರೂ ಕುಟುಂಬದ 38287http://kannada.oneindia.com/img/2009/07/29-k-raju-family.jpg442981bypollಪ್ರಿಯಕೃಷ್ಣನ ಒಟ್ಟು ಆಸ್ತಿ 770 ಕೋ ರು!/news/2009/07/30/congress-candidate-priya-assests-worth-rs-770-cr.htmlಬೆಂಗಳೂರು, ಜು. 30 : ವಿಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರ ಮಗ ಹಾಗೂ ಪ್ರಸ್ತುತ ಉಪಚುನಾವಣೆಯ ಗೋವಿಂದರಾಜ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ 25 ರ ಹರೆಯದ ಪ್ರಿಯಾಕೃಷ್ಣ ಅವರು 770 ಕೋಟಿ ರುಪಾಯಿ ಮೊತ್ತದ ಸ್ಥಿರ ಮತ್ತು ಚರ ಆಸ್ತಿಯನ್ನು ಹೊಂದಿದ್ದಾರೆ. ಅಂತಿಮ ದಿನವಾದ ಬುಧವಾರ ನಾಮಪತ್ರ ಸಲ್ಲಿಸಿದ ಪ್ರಿಯಾಕೃಷ್ಣ ಅವರು, ತಮ್ಮ 38315http://kannada.oneindia.com/img/2009/07/30-congress-logo1e.jpg442981bypollತಿರುವಳ್ಳುವರ್ ಪ್ರತಿಮೆ ಅನಾವರಣ ಮುಂದೂಡಿಕೆ ?/news/2009/07/31/tiruvalluvar-statue-unveil-likely-to-postpone.htmlಬೆಂಗಳೂರು, ಜು. 31 : ತೀವ್ರ ವಿವಾದಕ್ಕೆ ಕಾರಣವಾಗಿರುವ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮ ಮುಂದೂಡಲು ರಾಜ್ಯ ಸರಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯದ ಐದು ಕ್ಷೇತ್ರಗಳಲ್ಲಿ ಆಗಸ್ಟ್ 18 ರಂದು ಉಪಚುನಾವಣೆಗಳು ನಡೆಯುತ್ತಿದ್ದು, ಕನ್ನಡಪರ ಸಂಘಟನೆಗಳು ಪ್ರತಿಭಟನೆಯಿಂದ ಉಂಟಾಗಬಹುದಾದ ಗದ್ದಲದಿಂದ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಆತಂಕ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. 38330http://kannada.oneindia.com/img/2009/07/31-thiruvalluvar1.jpg442981bypollಉಪಚುನಾವಣೆ : ಅಖಾಡದಲ್ಲಿರುವ ಕೋಟ್ಯಾಧೀಶರು/news/2009/08/02/karnataka-assembly-bypoll-candidates-asset-details.htmlಬೆಂಗಳೂರು, ಜು. 2 : ಗೋವಿಂದರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಾಸಕ ಎಂ.ಕೃಷ್ಣಪ್ಪ ಪುತ್ರ ಪ್ರಿಯ ಕೃಷ್ಣ 770 ಕೋಟಿ ರೂ.ಮೌಲ್ಯದ ಆಸ್ತಿಗೆ ಒಡೆಯ. ಆಯ್ಕೆಯಾದರೆ, ಶಾಸನಸಭೆಯ ಕೋಟ್ಯಧಿಪತಿ ಶಾಸಕರಲ್ಲಿ ಮೊದಲಿಗರಾಗಲಿದ್ದಾರೆ. ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಸೋಮಣ್ಣ ಅವರಿಗಿಂತ ಅವರ ಪತ್ನಿ ಆಸ್ತಿ ಮೌಲ್ಯವೇ ಹೆಚ್ಚು. ಕೊಳ್ಳೇಗಾಲದಲ್ಲಿ ಬಿಎಸ್ಪಿ ಅಭ್ಯರ್ಥಿ ಸುಭಾಷ್ 38368http://kannada.oneindia.com/img/2009/08/02-cp-yogishwar1.jpg233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg97604assemblyಉಪ-ಚುನಾವಣೆ ನಿಷೇಧಿಸಬೇಕೆ?/news/2009/03/31/should-by-polls-be-banned-in-india.htmlಇನ್ಮುಂದೆ ಭಾರತದಲ್ಲಿ ಉಪ-ಚುನಾವಣೆಗಳನ್ನು ನಿಷೇಧಿಸಬೇಕೆ? ಈ ಪ್ರಶ್ನೆಗೆ ನಾವು, ನಮ್ಮ ಪ್ರತಿನಿಧಿಗಳು ಮತ್ತು ಚುನಾವಣಾ ಆಯೋಗ ಕೂಡಲೆ ಉತ್ತರ ಕಂಡುಕೊಳ್ಳದಿದ್ದರೆ ಪ್ರಜಾತಂತ್ರಕ್ಕೆ ಅರ್ಥವಿರುವುದಿಲ್ಲ ಮತ್ತು ಮತದಾರನ ಒಂದೊಂದು ಮತಕ್ಕೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ.ಈ ಪ್ರಶ್ನೆ ಖಂಡಿತ ಚರ್ಚೆಯಲ್ಲಿದೆ ಮತ್ತು ಚರ್ಚೆಯಲ್ಲಿಯೇ ಇದೆ. ಭಾರತದ ಅರ್ಥವ್ಯವಸ್ಥೆ, ಸದ್ಯದ ಆರ್ಥಿಕ ಬಿಕ್ಕಟ್ಟು, ಚುನಾವಣೆಯಲ್ಲಿ ನಡೆಯುವ ಹಣ-ಹೆಂಡದ ಹೊಳೆ, ಭ್ರಷ್ಟಾಚಾರವನ್ನು ಗಮನದಲ್ಲಿಸಿರಿಕೊಂಡರೆ ಮೇಲಿನ 35620http://kannada.oneindia.com/img/2009/03/31-election-commission1.jpg97604assemblyನಾಡಗೀತೆ ಮಾದರಿಯಲ್ಲಿ ಉಳುವಾ ಯೋಗಿಗೀತೆ /news/2009/07/23/govt-adopts-kuvempus-farmer-song-as-nadageete.htmlಬೆಂಗಳೂರು, ಜು. 23 : ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರಚಿಸಿದ 'ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ' ಎಂಬ ಗೀತೆಯನ್ನು ಶೀಘ್ರದಲ್ಲಿ ಸರಕಾರ ಅಧಿಕೃತವಾಗಿ ನಾಡಗೀತೆಯಾಗಿ ಮಾನ್ಯತೆ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಅಗಸ್ಟ್ 15 ರಿಂದ ಉಳುವಾ ಯೋಗಿಯ ಗೀತೆಯನ್ನು ಸರಕಾರ ಅಧಿಕೃತವಾಗಿ ನಾಡಗೀತೆ ರೂಪದಲ್ಲಿ ಜಾರಿಗೆ ತರಲಿದ್ದು, 38155http://kannada.oneindia.com/img/2009/07/23-farmer3.jpg97604assemblyಯಡಿಯೂರಪ್ಪ ರಾಜೀನಾಮೆಗೆ ಜೆಡಿಎಸ್ ಆಗ್ರಹ/news/2009/09/15/jds-disrupts-assembly-proceedings-for-coal-scam.htmlಬೆಂಗಳೂರು, ಸೆ. 15 : ಕಲ್ಲಿದ್ದಲು ಆಮದು ಅವ್ಯವಹಾರದಲ್ಲಿ ನೇರ ಕೈವಾಡವಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ವಿಧಾನಸಭೆಯಲ್ಲಿಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು. ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಜೆಡಿಎಸ್ ಶಾಸಕಾಂಗ ನಾಯಕ ಎಚ್ ಡಿ ರೇವಣ್ಣ ಕಲ್ಲಿದ್ದಲು ಖರೀದಿ ಅವ್ಯವಹಾರದ ಬಗ್ಗೆ ಪೂರ್ವಭಾವಿ ಪ್ರಸ್ತಾಪ ಮಾಡಿದರು. ರೇವಣ್ಣ ಅವರ ಪೂರ್ವಭಾವಿ ಪ್ರಸ್ತಾಪ 39195http://kannada.oneindia.com/img/2009/09/15-hd-revanna1.jpg97604assemblyಸಿದ್ದು ನನ್ನ ವಯಸ್ಸಿಗೂ ಬೆಲೆ ಕೊಡುತ್ತಿಲ್ಲ : ದೇವೇಗೌಡ/news/2009/09/25/siddu-has-lost-mental-balance-hd-devegowda.htmlಬೆಂಗಳೂರು, ಸೆ. 25 : ನನ್ನ ವಯಸ್ಸಿಗೂ ಬೆಲೆ ಕೊಡದೆ ಟೀಕೆ ಮಾಡುತ್ತಿರುವ ಸಿದ್ದರಾಮಯ್ಯ ಸ್ತಿಮಿತ ಕಳೆದುಕೊಂಡಿದ್ದಾರೆ. ಎಂದು ಮಾಜಿ ಪ್ರಧಾನಿ ದೇವೇಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾನಸಿಕವಾಗಿ ದೇವೇಗೌಡರೇ ಸ್ತಿಮಿತ ಕಳೆದುಕೊಂಡಿಲ್ಲ. ನಾನೇಕೆ ಕಳೆದುಕೊಳ್ಳಬೇಕು ? ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಜೆಡಿಎಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಮಾತನಾಡುವಾಗ ತಾಳ್ಮೆ ಕಳೆದುಕೊಳ್ಳಬಾರದು. ಜವಾಬ್ದಾರಿಯುತ 39376http://kannada.oneindia.com/img/2009/09/25-siddaramaiah3.jpg97604assemblyಮರಾಠಿಗರ ಭಾವನೆಗಳನ್ನು ಕೆದಕಬೇಡಿ, ಭಾಳಾ/news/2009/11/11/after-mns-rap-azmi-now-in-sena-crosshairs.htmlಮುಂಬೈ, ನ. 11 : ಮರಾಠಿಗರ ಭಾವನೆ ಕೆದಕುವ ಅಬು ಅಜ್ಮಿಯಂತಹ ಶಾಸಕರು ನಮ್ಮ ಪಕ್ಷದ ಕಾರ್ಯಕರ್ತರ ಕೈಯಲ್ಲಿ ಸಿಕ್ಕಿದ್ದರೆ ಅವರ ಚರ್ಮ ಸುಲಿದು ತಂದೂರಿ ಮಾಡುತ್ತಿದ್ದರು. ನಮ್ಮ ಪಕ್ಷದ ಹಿರಿಯ ಸದಸ್ಯ ದಿವಾಕರ್ ರಾವೊತ್ ಕೈಯಲ್ಲಿ ಸಿಕ್ಕಿದ್ದರೆ ಅವರ ಕಥೆಯೇ ಬೇರೆಯಾಗುತ್ತಿತ್ತು ಎಂದು ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಗರ್ಜಿಸಿದ್ದಾರೆ.ಹಿಂದಿ ಮತ್ತು ಇಂಗ್ಲಿಷ್ ವಿರುದ್ದ ಶಿವಸೇನೆ ಸದಸ್ಯರು 40158http://kannada.oneindia.com/img/2009/11/11-bal-thackeray2.jpgnews"> ಉಪ-ಚುನಾವಣೆ ನಿಷೇಧಿಸಬೇಕೆ? | By-poll | Election Commission of India | Assembly election | Karnataka - ಉಪ-ಚುನಾವಣೆ ನಿಷೇಧಿಸಬೇಕೆ? - Kannada Oneindia

ಉಪ-ಚುನಾವಣೆ ನಿಷೇಧಿಸಬೇಕೆ?

Election Commission of India
ಇನ್ಮುಂದೆ ಭಾರತದಲ್ಲಿ ಉಪ-ಚುನಾವಣೆಗಳನ್ನು ನಿಷೇಧಿಸಬೇಕೆ? ಈ ಪ್ರಶ್ನೆಗೆ ನಾವು, ನಮ್ಮ ಪ್ರತಿನಿಧಿಗಳು ಮತ್ತು ಚುನಾವಣಾ ಆಯೋಗ ಕೂಡಲೆ ಉತ್ತರ ಕಂಡುಕೊಳ್ಳದಿದ್ದರೆ ಪ್ರಜಾತಂತ್ರಕ್ಕೆ ಅರ್ಥವಿರುವುದಿಲ್ಲ ಮತ್ತು ಮತದಾರನ ಒಂದೊಂದು ಮತಕ್ಕೆ ಕವಡೆಕಾಸಿನ ಕಿಮ್ಮತ್ತಿರುವುದಿಲ್ಲ.

ಈ ಪ್ರಶ್ನೆ ಖಂಡಿತ ಚರ್ಚೆಯಲ್ಲಿದೆ ಮತ್ತು ಚರ್ಚೆಯಲ್ಲಿಯೇ ಇದೆ. ಭಾರತದ ಅರ್ಥವ್ಯವಸ್ಥೆ, ಸದ್ಯದ ಆರ್ಥಿಕ ಬಿಕ್ಕಟ್ಟು, ಚುನಾವಣೆಯಲ್ಲಿ ನಡೆಯುವ ಹಣ-ಹೆಂಡದ ಹೊಳೆ, ಭ್ರಷ್ಟಾಚಾರವನ್ನು ಗಮನದಲ್ಲಿಸಿರಿಕೊಂಡರೆ ಮೇಲಿನ ಪ್ರಶ್ನೆಗೆ ತಾನೇ ಉತ್ತರ ಹೊಳೆಯುತ್ತದೆ.

ಅಸಲಿಗೆ, ಉಪ-ಚುನಾವಣೆಗಳು ಯಾರಿಗೂ ಬೇಕಾಗಿರುವುದಿಲ್ಲ. ಆದರೆ, ನಡೆಸದೆ ಗತ್ಯಂತರವಿಲ್ಲ ಎಂಬ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಪ್ರಕ್ರಿಯೆ ಆಯೋಗಕ್ಕೆ ಭಾರೀ ಖರ್ಚಿನ ಬಾಬತ್ತು. ಮತದಾರ ಮತ್ತೆ ಸಾಲಲ್ಲಿ ನಿಂತು ಮತ ನೀಡುವ ಪ್ರಮೇಯ. ರಾಜಕಾರಣಿಗಳಿಗೆ ಮತ್ತೆ ಮತ್ತೆ ಮತದಾರನ ಮುಂದೆ ಕೈಯೊಡ್ಡುವ ಅಪಸವ್ಯ. ಇವಕ್ಕೆಲ್ಲ ಕೊನೆ ಹಾಡಬೇಕೆಂದರೆ ಉಪ-ಚುನಾವಣೆಗಳನ್ನು ನಿಷೇಧಿಸಲೇಬೇಕು.

ಮೊತ್ತಮೊದಲ ಮಹಾಚುನಾವಣೆಯಲ್ಲಿ ಎಲ್ಲ ಸೇರಿ ಅಂದಾಜು 10 ಕೋಟಿ ರು. ಖರ್ಚಾಗಿತ್ತು. 15ನೇ ಲೋಕಸಭೆ ಚುನಾವಣೆಯಲ್ಲಿ ಅದರ ಪ್ರಮಾಣ 10 ಸಾವಿರ ಕೋಟಿ ರು.ಗೆ ಬಂದು ತಲುಪಿದೆ. ಇದರಲ್ಲಿ ಚುನಾವಣಾ ಆಯೋಗದಿಂದ ಶೇ.15ರಷ್ಟು ಮಾತ್ರ ಖರ್ಚಾಗುತ್ತದೆ. ಉಳಿದದ್ದು, ಪ್ರಚಾರಕ್ಕೆ. ಕರ್ನಾಟಕದಲ್ಲಿ ಕಳೆದ ಡಿಸೆಂಬರಲ್ಲಿ 8 ಕ್ಷೇತ್ರಗಳಿಗೆ ನಡೆದ ಉಪ-ಚುನಾವಣೆಯಲ್ಲಿ ಒಬ್ಬೊಬ್ಬ ಅಭ್ಯರ್ಥಿಗೆ ಅಂದಾಜು 25 ಕೋಟಿ ರು. ಖರ್ಚಾಗಿದೆ ಎನ್ನಲಾಗಿದೆ.

ಉಪ-ಚುನಾವಣೆಗಳು ಏತಕ್ಕೆ ಬರುತ್ತವೆಂಬುದನ್ನು ಗಮನಿಸೋಣ. ಜನ ನೀಡಿದ ಮತಗಳ ಸಹಾಯದಿಂದ ಆಯ್ಕೆಯಾದ ಶಾಸಕ 'ಆಪರೇಷನ್ನಿಗೆ' ಒಳಗಾಗಿ ಇನ್ನಾವುದೋ ಪಕ್ಷ ಸೇರಿದರೆ ಅಲ್ಲೊಂದು ಉಪ-ಚುನಾವಣೆ. ಪ್ರತಿನಿಧಿ ಸತ್ತರೆ ಉಪ-ಚುನಾವಣೆ. ಎರಡೆರಡು ಕ್ಷೇತ್ರಗಳಲ್ಲಿ ನಿಂತು ಒಂದರಲ್ಲಿ ಗೆದ್ದು ಇನ್ನೊಂದಕ್ಕೆ ತರ್ಪಣ ಬಿಟ್ಟರೆ ಉಪ-ಚುನಾವಣೆ. ಕೆಲ ವಿಧಾನಸಭೆ ಸದಸ್ಯರೂ ಲೋಕಸಭೆ ಚುನಾವಣೆಗೆ ನಿಲ್ಲುತ್ತಾರೆ. ಅಲ್ಲಿ ಗೆದ್ದರೆ ಇದನ್ನು ತ್ಯಜಿಸಬೇಕಾಗುತ್ತದೆ, ಆಗ ಮತ್ತೊಂದು ಉಪ-ಚುನಾವಣೆ.

ಇದೆಲ್ಲದರ ಬದಲಾಗಿ, ಗೆದ್ದ ಶಾಸಕ ಪಕ್ಷಾಂತರ ಮಾಡಿದರೆ, ಆ ಕ್ಷೇತ್ರದಲ್ಲಿ ಎರಡನೆಯ ಸ್ಥಾನದಲ್ಲಿದ್ದ ಅಭ್ಯರ್ಥಿಯನ್ನು ವಿಜಯಿಶಾಲಿಯನ್ನಾಗಿಸಬೇಕು. ಕಳೆದ ಉಪ-ಚುನಾವಣೆಯನ್ನೇ ಗಮನಿಸಿದರೆ, ಒಂದು ಕ್ಷೇತ್ರದ ಹೊರತಾಗಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಉಪ-ಚುನಾವಣೆ ಉದ್ಭವಿಸಿದ್ದು 'ಆಪರೇಷನ್ ಕಮಲ'ದಿಂದಾಗಿ. ಆಗ, ಮೊದಲನೆಯವರಾಗಿ ಸೋತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರೆ ಉಪ-ಚುನಾವಣೆಯ ಪ್ರಮೇಯವೇ ಉದ್ಭವಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ, ಪಕ್ಷಾಂತರ ಕಾಯ್ದೆಯನ್ನು ಇನ್ನಷ್ಟು ಬಿಗಿಯಾಗಿಸುವ ಅವಶ್ಯಕತೆಯಿದೆ. ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲಲು ಅವಕಾಶವನ್ನೂ ನೀಡಬಾರದು. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಚಿಂತಿಸುವ ಮತ್ತು ಕಾರ್ಯಪ್ರವೃತ್ತರಾಗಬೇಕಾದ ಅಗತ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+