ದ್ವೇಷದಿಂದ ಸಾಧನೆ ಇಲ್ಲ, ರಾಹುಲ್ ಕಿವಿಮಾತು
ಪುದುಚೇರಿ,
ಮಾ. 25 : ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರು ಅಲ್ಪಸಂಖ್ಯಾತರ ವಿರುದ್ಧ ನೀಡಿರುವ ಹೇಳಿಕೆ ಅವರ ವೈಯಕ್ತಿಕ ವಿಚಾರ. ಈ ಬಗ್ಗೆ ನಾನು ಹೆಚ್ಚು ಚರ್ಚಿಸಲು ಇಷ್ಟಪಡುವುದಿಲ್ಲ. ಕೋಪ, ದ್ವೇಷಗಳಿಂದ ಏನನ್ನು ಸಾಧಿಸಲು ಅಸಾಧ್ಯ. ಅರ್ಥವಿಲ್ಲದ ಕೋಪ ಮತ್ತು ದ್ವೇಷಗಳು ಮತ್ತಷ್ಟು ಕತ್ತಲೆ ಕಡೆಗೆ ತಳ್ಳುತ್ತವೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. id="toptextpromo">ಬಿಜೆಪಿ
ಅಭ್ಯರ್ಥಿ ವರುಣ್ ಗಾಂಧಿ ಮಾರ್ಚ್ 17 ರಂದು ಉತ್ತರ ಪ್ರದೇಶದ ಪಿಲಿಭಿತ್ ಲೋಕಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಅಲ್ಪಸಂಖ್ಯಾತರ ವಿರುದ್ಧ ಕೆಂಡಕಾರಿರುವ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೇಲಿನ ಉತ್ತರ ನೀಡಿದರು. ವರುಣ್ ಗಾಂಧಿ ಹೇಳಿಕೆಯನ್ನು ಟಿವಿಯಲ್ಲಿ ವಿಕ್ಷೀಸಿಸಿದೆ. ತುಂಬಾ ಆಶ್ಚರ್ಯವಾಯಿತು. ಇದನ್ನು ಕನಸಿನಲ್ಲಿಯೂ ಎಣಿಸಿರಲಿಲ್ಲ ಎಂದು ಅವರು ತಮ್ಮ ಅಸಮಾಧಾನವನ್ನು ತೋಡಿಕೊಂಡರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)ವರುಣ್ ಸಮರ್ಥಿಸಿಕೊಂಡ ಬಿಜೆಪಿ ವಿರುದ್ದ ಪಿಎಂ ಕಿಡಿ












Click it and Unblock the Notifications