ಯುಗಾದಿ ನಂತರ ಡಿ ಬಿ ಚಂದ್ರೇಗೌಡ ಬಿಜೆಪಿಗೆ ?
ಬೆಂಗಳೂರು, ಮಾ. 25 : ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಿರುವ ಹಿರಿಯ ನಾಯಕ ಡಿ ಬಿ ಚಂದ್ರೇಗೌಡ ಯುಗಾದಿ ನಂತರ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಒಕ್ಕಲಿಗ ಸಮುದಾಯ ಮುಂಚೂಣೆ ನಾಯಕ ಆಗಿರುವ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರೆ ಅನುಕೂಲವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಈಗಾಗಲೇ ಬಿಜೆಪಿ ನಾಯಕರು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ರಾಮಚಂದ್ರೇಗೌಡರು ಇದರ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ. ಇನ್ನೊಂದಡೆ ಬಿಜೆಪಿಯಲ್ಲಿರುವ ಒಕ್ಕಲಿಗ ಮುಖಂಡರಿಗೆ ಡಿಬಿಸಿ ಬಿಜೆಪಿ ಸೇರುವುದು ಇಷ್ಟವಿದ್ದಂತಿಲ್ಲ. ಕೆಲ ಒಕ್ಕಲಿಗ ನಾಯಕರು ಸಚಿವ ಆರ್ ಅಶೋಕ್ ಹಾಗೂ ಶಾಸಕ ಸಿ ಟಿ ರವಿ ಅವರನ್ನು ಭೇಟಿ ಮಾಡಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಲ್ಲಿ ಕೆಲಸಕ್ಕೆ ಬಾರದವರಾಗಿರುವವನ್ನು ಪಕ್ಷಕ್ಕೆ ಕರೆತಂದು ಯಾವ ಸಾಧನೆ ಮಾಡಲು ಸಾಧ್ಯ ಎನ್ನುವುದು ಅವರ ಅನಿಸಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಭಾಗದಲ್ಲಿ ಒಕ್ಕಲಿಗ ನಾಯಕರೆಂದರೆ ಸಚಿವ ಅಶೋಕ್ ಬಿಟ್ಟರೆ ರಾಮಚಂದ್ರೇಗೌಡ ಎಂಬ ಮಾತಿದೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ರಾಮಚಂದ್ರೇಗೌಡ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಆದರೆ, ಪಕ್ಷದಲ್ಲಿ ಕೆಲವು ಮುಖಂಡರು ಅಪಸ್ವರದ ಹಿನ್ನೆಲೆಯಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಎಂ ವೆಂಕಯ್ಯ ನಾಯ್ಡು ಒಟ್ಟಿಗೆ ಮಾತನಾಡಿಕೊಂಡು ಡಿ ಬಿ ಚಂದ್ರೇಗೌಡರಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಸಮಾಜೋತ್ಸವ ತಡೆಯಲು ಯಾರಿಂದಲೂ ಸಾಧ್ಯವಿಲ್ಲ












Click it and Unblock the Notifications