ಬಳ್ಳಾರಿಯಲ್ಲಿ ಗ್ರಾಪಂ ಸದಸ್ಯನ ಹತ್ಯೆ

ಬಳ್ಳಾರಿ, ಮಾ. 19 : ವಾಯವಿಹಾರಕ್ಕೆಂದು ತೆರಳಿದ್ದ ಗ್ರಾಮದ ಪಂಚಾಯತಿ ಸದಸ್ಯನನ್ನು ಅಪರಿಚಿತ ವ್ಯಕ್ತಿಗಳು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ತಾಲ್ಲೂಕಿನ ಏಳುಬೆಂಚಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಗ್ರಾಮ ಪಂಚಾಯತಿ ಸದಸ್ಯ ವಿರುಪನಗೌಡ ಕೊಲೆಯಾಗಿರುವ ವ್ಯಕ್ತಿ. ಏಳುಬೆಂಚಿ ಗ್ರಾಮದಲ್ಲಿ ಇಂದು ಬೆಳಗ್ಗೆ ಎಂದಿನಂತೆಯೇ ವಾಯುವಿಹಾರಕ್ಕೆ ತೆರಳಿದ್ದ ವಿರುಪನಗೌಡ ಅವರನ್ನು ಅಪರಿಚಿತ ದುಷ್ಕರ್ಮಿಗಳು ಹೊಂಚು ಹಾಕಿ ಮಿಂಚಿನ ದಾಳಿ ನಡೆಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಳುಬೆಂಚಿ ಗ್ರಾಮದ ಹೊರಗಡೆ ಇರುವ ಮಾರಮ್ಮ ದೇವಾಲಯದ ಬಳಿ ದುರ್ಘಟನೆ ಜರುಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+