ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಮಹಿಳಾ ಕ್ರಿಕೆಟ್ ತಂಡಕ್ಕೆ ಮಮತಾ ಕೋಚ್

By Staff
|
Google Oneindia Kannada News

Mamata Maben
ಬೆಂಗಳೂರು, ಫೆ. 25 : ಅಚ್ಚ ಕನ್ನಡತಿ ಮತ್ತು ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಮತಾ ಮಾಬೆನ್ ಅವರನ್ನು ಚೀನಾ ಮಹಿಳಾ ತಂಡದ ತರಬೇತುಗಾರ್ತಿಯಾಗಿ ಆಯ್ಕೆ ಮಾಡಲಾಗಿದೆ. ಅವರು 2010ರವರೆಗೆ ಚೀನಾದ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡಲಿದ್ದಾರೆ.

ಶಾಂತಾ ರಂಗಸ್ವಾಮಿಯ ನಂತರ ಕರ್ನಾಟಕ ಮಹಿಳಾ ಕ್ರಿಕೆಟ್ ನಲ್ಲಿ ಪ್ರವರ್ಧಮಾನಕ್ಕೆ ಬಂದ ಕ್ರಿಕೆಟ್ ಆಟಗಾರ್ತಿಯರು ಕಡಿಮೆಯೆ. ಅಂತಹುದರಲ್ಲಿ ಮಮತಾ ಮಾಬೆನ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿರುವುದು ಸಹಜವಾಗಿ ಮಹಿಳಾ ಕ್ರಿಕೆಟ್ ವಲಯದಲ್ಲಿ ಸಂತಸ ಮೂಡಿಸಿದೆ.

ಕರ್ನಾಟಕ ಪರ ಆಲ್ ರೌಂಡರ್ ಆಗಿ ಆಡುತ್ತಿದ್ದ ಮಮತಾ ನಂತರ ದಕ್ಷಿಣ ವಲಯದ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ನಿವೃತ್ತಿಯಾಗುವ ಮೊದಲು ಭಾರತ ಮಹಿಳಾ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಅವರ ನಾಯಕತ್ವದಲ್ಲಿ ಮಹಿಳಾ ಕ್ರಿಕೆಟ್ ತಂಡ ಏಷ್ಯಾ ಕಪ್ ಗೆದ್ದಿದೆ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತ ಪರ ಆಡಿ ಅಪಾರ ಅನುಭವ ಗಳಿಸಿರುವ ಮಮತಾ ಮಾಬೆನ್ ತಮ್ಮ ಅನುಭವವನ್ನೆಲ್ಲ ಚೀನಾ ತಂಡದ ವನಿತೆಯರಿಗೆ ಧಾರೆಯೆರೆಯಲಿದ್ದಾರೆ.

1970ರಲ್ಲಿ ಮಮತಾ ಮಾಬೆನ್ ಬೆಂಗಳೂರಿನಲ್ಲಿ ಜನಿಸಿದರೂ ಅವರ ಮೂಲ ಊರು ಮಂಗಳೂರು ಬಳಿಯ ಬಲ್ಮಠ. ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ ತಳೆದಿದ್ದ ಮಾಬೆನ್ 17ರ ಹರೆಯದಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾದರು. 1993ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯಲ್ಲೂ ಅವರು ಭಾಗವಹಿಸಿದ್ದರು. ಪ್ರಸ್ತುತ ಭಾರತ ತಂಡದಲ್ಲಿ ಕರ್ನಾಟಕದ ಯಾವುದೇ ಮಹಿಳೆ ಆಡುತ್ತಿಲ್ಲ.

ದಕ್ಷಿಣ ವಲಯಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೊದಲು ಮಮತಾ ಮಾಬೆನ್ ಅವರು ಒನ್ ಇಂಡಿಯಾದ ದಟ್ಸ್ ಕ್ರಿಕೆಟ್ ಅಂತರ್ಜಾಲ ತಾಣದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ್ದರು. ಚೀನಾದಲ್ಲಿಯೂ ಭಾರತದ ಧ್ವಜವನ್ನು ಎತ್ತಿಹಿಡಿಯಲೆಂದು ದಟ್ಸ್ ಕನ್ನಡ ಮಮತಾ ಮಾಬೆನ್ ಅವರಿಗೆ ಹಾರೈಸುತ್ತದೆ.

(ದಟ್ಸ್ ಕ್ರಿಕೆಟ್ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X